ದಲಿತರು ಸಿಎಂ ಆದರೆ ತಪ್ಪೇನಿಲ್ಲ- ವಿಜಯಪುರದಿಂದ ರಾಜು ಆಲಗೂರ ಗೆಲ್ತಾರೆ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ರಾಜ್ಯದಲ್ಲಿ ದಲಿತರು ಸಿಎಂ ಆಗುವುದರಲ್ಲಿ ತಪ್ಪೇನಿಲ್ಲ.  ಆದರೇ, ಈಗ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಎಚ್. ಸಿ. ಮಹಾದೇವಪ್ಪ ನೀಡಿರುವ ಹೇಳಿಕ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿದಲಿತರು ಸಿಎಂ ಆಗಬೇಕು.  ಇದರಲ್ಲಿ ತಪ್ಪೇನಿಲ್ಲ.  ಈಗ ಸಿಎಂ ಕುರ್ಚಿ ಖಾಲಿಯಿಲ್ಲ.  ಸಿದ್ದರಾಮಯ್ಯ ಮುಖ್ಯಮಂತ್ರಿ ಸಿಎಂ ಆಗಿದ್ದಾರೆ.  ಸೂಕ್ತ ಸಂದರ್ಭ ಬಂದಾಗ ದಲಿತರು ಸಿಎಂ ಆಗುವುದರಲ್ಲಿ ತಪ್ಪೇನಿದೆ? ದಲಿತರು ಸಿಎಂ ಆಗಲು ನಿಶ್ವಿತವಾಗಿ ನನ್ನ ಬೆಂಬಲವಿದೆ ಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ಕೈ ಪಟ್ಟಿ ಬಿಡುಗಡೆ ವಿಚಾರ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯ ನೀಡಿದ ಅವರು, ಕಾಂಗ್ರೆಸ್ ಬಿಡುಗಡೆ ಮಾಡಿರುವ ಕರ್ನಾಟಕದ ಅಭ್ಯ್ರರ್ಥಿಗಳ ಪಟ್ಟಿಯಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದ ಟಿಕೆಟ್ ಹೆಸರು ಮೊದಲಿಗೆ ಇದೆ.  ಕಾಂಗ್ರೆಸ್ ಮುಖಂಡ ಪ್ರೊ. ರಾಜು ಆಲಗೂರ ಅವರಿಗೆ ಮೊದಲ ಟಿಕೆಟ್ ಘೋಷಣೆಯಾಗಿದೆ.  ಶಿವರಾತ್ರಿಯ ಶುಭ ದಿನದಂದು ಟಿಕೆಟ್ ಘೋಷಣೆಯಾಗಿದೆ.  ರಾಜೂ ಆಲಗೂರ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಎಂ. ಬಿ. ಪಾಟೀಲ ಹೇಳಿದರು.

ನಾವೆಲ್ಲ ಸೇರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ.  ಜಿಲ್ಲೆಯ ಸಚಿವರು ಶಾಸಕರ ಒಮ್ಮತದ ಭಿಪ್ರಾಯದಂತೆ ರಾಜು ಆಲಗೂರ ಅಭ್ಯರ್ಥಿಯಾಗಿದ್ದಾರೆ.  ದಲಿತ ಸಮಾಜದ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬುದು ಅಂಬೇಡ್ಕರ ವಾದಿಗಳ ಬಹಳ ದಿನಗಳ ಬೇಡಿಕೆಯಾಗಿತ್ತು.  ಹೀಗಾಗಿ ಎಲ್ಲರ ಆಶಯದಂತೆ ಟಿಕೆಟ್ ನೀಡಲಾಗಿದೆ.  ನಿಶ್ಚಿತವಾಗಿ ಗೆಲುವು ನಮ್ಮದೇ.  ರಾಜು ಆಲಗೂರ ಸಂಸದರಾಗುವದರಲ್ಲಿ ಸಂಶಯವಿಲ್ಲ.  ವಿಜಯಪುರ ಜಿಲ್ಲೆಯಿಂದ ನಾನೇ ಕೊನೆಯ ಬಾರಿ ಕಾಂಗ್ರೆಸ್ ಸಂಸದನಾಗಿದ್ದೆ.  ಈಗ ರಾಜು ಆಲಗೂರ ಗೆಲ್ಲುವ ಮೂಲಕ ಗೆಲುವಿನ ಅಭಿಯಾನ ಪ್ರಾರಂಭವಾಗುತ್ತದೆ ಎಂದು ಸಚಿವರು ಹೇಳಿದರು.

ಐಟಿ, ಬಿಟಿ ಕಂಪನಿಗಳಿಗೆ ಬರದ ಬಿಸಿ ತಟ್ಟಿರುವ ಆರೋಪ ವಿಚಾರ

ರಾಜ್ಯದಲ್ಲಿ ಬರ ಹಿನ್ನಲೆ ಕುಡಿಯೋ ನೀರಿಗೂ ಸಮಸ್ಯೆ ಎದುರಾಗಿದೆ.  ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದ ಐಟಿಬಿಟಿ ಕಂಪನಿ, ಕೈಗಾರಿಕೆಗಳಿಗೂ ಬಿಸಿ ತಟ್ಟಿದೆ.  ನೀರಿನ ಸಮಸ್ಯೆಯಿಂದ ಐಟಿ ಮತ್ತು ಬಿಟಿ ಕಂಪನಿಗಳು, ಕೈಗಾರಿಕೆಗಳು ರಾಜ್ಯಕ್ಕೆ ಬರಲು ಹಿಂಜರಿಯುತ್ತವೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ಮಾಡಿರುವ ಆರೋದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಕಡೆ ನೀರಿನ ಸಮಸ್ಯೆ ಇದೆ.  ಇಡೀ ವಿಶ್ವದಲ್ಲಿ ಬರಗಾಲವಿದೆ.  ಬೆಂಗಳೂರು, ನಮ್ಮ ರಾಜ್ಯವಷ್ಟೇ ಅಲ್ಲ, ದೇಶದೆಲ್ಲೆಡೆ ಬರದ ಸಮಸ್ಯೆ ಇದೆ.  ನೀರಿನ ಕೊರತೆ ಸಮಸ್ಯೆ.ಯನ್ನು ನಿಭಾಯಿಸುತ್ತೇವೆ.  ಕೈಗಾರಿಕೆಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ.  ಇದಕ್ಕೆ ಪರ್ಮನೆಂಟ್ ಪ್ಲ್ಯಾನ್ ಮಾಡುತ್ತೇವೆ.  ಮಲಫ್ರಭಾ, ಕೃಷ್ಣಾ ಹಾಗೂ ಕಾವೇರಿ ನದಿಗಳಿಂದ ಶಾಶ್ವತ ಯೋಜನೆ ಮಾಡುವ ಕುರಿತು ಚರ್ಚೆ ನಡೆದಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌