Video News: ಬಿಜೆಪಿ ಉತ್ತಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ- ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಗುರಿ- ಶಾಸಕ ಮಹೇಶ ಟೆಂಗಿನಕಾಯಿ

ವಿಜಯಪುರ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಜಿಲ್ಲಾ ಕೋರ್ ಕಮಿಟಿ ಸಭೆಗೆ ಆಗಮಿಸಿದ್ದ ಅವರು, ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಳಿಕ ವಿಜಯಪುರ ನಗರದಲ್ಲಿ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದರು.  ಅಲ್ಲದೇ, ಈ ಟಿಕೆಟ್ ಪಡೆದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಶುಭ ಕೋರಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 20 ಲೋಕಸಭೆ ಕ್ಷೇತ್ರಗಳ ಟಿಕೇಟ್ ಘೋಷಣೆ ಮಾಡಿದ್ದು, ಟಿಕೆಟ್ ಪಡೆದ ಎಲ್ಲರಿಗೂ ಅಭಿನಂದನೆಗಳನ್ನು ಕೋರುತ್ತೇವೆ.  ಒಳ್ಳೆಯ ಅಭ್ಯರ್ಥಿಗಳಿಗೆ ನೀಡಲಾಗಿದೆ.  ಅಬ್ ಕೀ ಬಾರ್ ಚಾರ್ ಸೋ ಪಾರ್ ಎಂದು ಹೇಳಿದರು.

ಎಲ್ಲ 28 ಕ್ಷೇತ್ರಗಳಲ್ಲಿ ಎನ್ ಡಿ ಎ ಗೆಲುವು

ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ.  ಎನ್‌ ಡಿ ಎ ಗೆಲುವು ಪಕ್ಕಾ ಆಗಿದೆ.  ಕೆಲವರಿಗೆ ಟಿಕೇಟ್ ಮಿಸ್ ಆಗಿದೆ.  ಬಿಜೆಪಿ ದೊಡ್ಡ ಪಾರ್ಟಿ.  ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚು ಇರುತ್ತದೆ.  ಹೆಸರು ಘೋಷಣೆ ಜಾಸ್ತಿ ಇರುತ್ತಾರೆ.  ಹೆಸರು ಘೋಷಣೆ ಆಗುವವರೆಗೂ ಆಕಾಂಕ್ಷಿಗಳೇ.  ಟಿಕೆಟ್ ಪ್ರಕಟವಾದ ಮೇಲೆ ಆದ ಮೇಲೆ ಅಭ್ಯರ್ಥಿಗಳು.  ಬಿಜೆಪಿ ಮತ್ತು ಎನ್ ಡಿ ಎನ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಏಕೈಕ ಗುರಿ.  ನರೇಂದ್ರ ಮೋದಿ ಅವರನ್ನು ಮತ್ತೋಮ್ಮ ಪ್ರಧಾನಿಯನ್ನಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಹೇಳಿದರು.

ವಿಡಿಯೋ ಸುದ್ದಿ ವೀಕ್ಷಿಸಿ:

ನನಗೂ ಬಿ ಫಾರ್ಮ್ ನೀಡಿ ಚುನಾವಣೆಗೆ ನಿಲ್ಲಬೇಡಿ ಎಂದಿದ್ದರು

ಈ ಹಿಂದೆ ನನಗೂ 2018ರಲ್ಲಿ ಕಲಘಟಗಿಯಿಂದ ಬಿ- ಪಾರ್ಮ್ ನೀಡಿದ್ದರು.  ನಾಮಪತ್ರ ಕೂಡ ಸಲ್ಲಿಸಿದ್ದೆ.  ಕೊನೆ ಕ್ಷಣದಲ್ಲಿ ಬೇರೆಯವರಿಗೆ ಮತ್ತೆ ಟಿಕೆಟ್ ನೀಡಿದ್ದರಿಂದ ನಾನು ಆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ.  ನನ್ನ ತ್ಯಾಗ ಗಮನಿಸಿ ಪಕ್ಷ ವಿಧಾನ ಸಭೆಗೆ ಟಿಕೇಟ್ ನೀಡಿ ಗುರುತಿಸಿದೆ.  ಟಿಕೇಟ್ ಸಿಗದೆ ಇದ್ದವರು ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.  ಒಟ್ಟಾರೆ ನರೇಂದ್ರ ಮೋದಿ ಅವರನ್ನು ಮತ್ತೋಮ್ಮೆ ಪ್ರಧಾನಿ ಮಾಡುವುದು ನಮ್ಮ ಗುರಿಯಾಗಬೇಕು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಟಿಕೇಟ್ ವಿಚಾರ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೋಮ್ಮೆ ಟಿಕೆಟ್ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಬೇರೆ ಬೇರೆ ಆಯಾಮಗಳಲ್ಲಿ ವಿಚಾರ ಮಾಡಿ ಟಿಕೇಟ್ ನೀಡಿದೆ.  ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಪಾರ್ಟಿ ತೀರ್ಮಾನ ತೆಗೆದುಕೊಂಡಿರುತ್ತದೆ.  ಪಕ್ಷದ ನಿರ್ಧಾರ ಒಳ್ಳೆಯದೆ ಆಗಿರುತ್ತದೆ.  ಪಕ್ಷದ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದರು.

ವಿಜಯಪುರದಲ್ಲಿಯೂ ಕೇಂದ್ರ ಮಾಜಿ ಸಚಿವ ಮತ್ತು ಹಾಲಿ ಸಂಸದರು ರಮೇಶ ಜಿಗಜಿಣಗಿ ಅವರಿಗೆ ಟೆಕೇಟ್ ನೀಡಿರುವುದನ್ನು ಸ್ವಾಗತಿಸುತ್ತೇನೆ.  ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.  ಅವರು ಮುಂದಿನ ಸರಕಾರದಲ್ಲಿ ಮತ್ತೆ ಕೇಂದ್ರ ಸಚಿವರಾಗಲಿ ಎಂದು ಮಹೇಶ ಟೆಂಗಿನಕಾಯಿ ಹೇಳಿದರು.

ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮುಖಂಡರಾದ ವಿವೇಕ ಡಬ್ಬಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌