ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಇಬ್ಬರು ವೈದ್ಯರು ಹಾಗೂ ಓರ್ವ ಎಂಜಿನೀಯರ್ ನಡೆಸಿದ ಸಂಶೋಧನೆಗೆ ಕೇಂದ್ರ ಸರಕಾರದಿಂದ ಪೇಟೆಂಟ್ ದೊರೆತಿದೆ.
ಆಸ್ಪತ್ರೆಯ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಮತ್ತು ಅಂಗರಚನಾ ಶಾಸ್ತç ವಿಭಾಗದ ಡಾ. ಈಶ್ವರ ಬ. ಬಾಗೋಜಿ, ಎಂಜಿನೀಯರ್ ಕೆ. ಸಿ. ಮೊಹಂತಿ ಹಾಗೂ ಎಲಬು ಮತ್ತು ಕೀಲು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಿರೀಶ ಖೋದ್ನಾಪೂರ ಅವರು ಜಂಟಿಯಾಗಿ ನಡೆಸಿ ಸಂಶೋಧನೆಗೆ ಪೇಟೆಂಟ್ ಲಭಿಸಿದೆ.
ಕೆ. ಸಿ. ಮೊಹಂತಿ
ಎ ನೊವೆಲ್ ಫೋಲ್ಡೆಬಲ್ ಆರ್ಟಿಫಿಸಿಯಲ್ ಲೆಗ್(A Novel Foldable Artificial Leg) ಸಂಶೋಧನೆ ನಡೆಸಿದ್ದರು. 2020 ರಲ್ಲಿ ನಡೆಸಿದ ಈ ಸಂಶೋಧನೆ ಕೃತಕ ಅಂಗಾಂಗ ವಿಭಾಗದಲ್ಲಿ ಲಾಕಿಂಗ್ ಮತ್ತು ಅನ್‌ಲಾಕಿಂಗ್ ತಂತ್ರಜ್ಞಾನದಡಿ ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ಪ್ರಥಮ ಸಂಶೋಧನೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ವೈದ್ಯರು ಮತ್ತು ಎಂಜಿನೀಯರ್ ಪಡೆದಿರುವ ಪೇಟೆಂಟ್‌ಗೆ ವಿಶ್ವವಿದ್ಯಾಲಯದ ಕುಲಾಧಿಪತಿಯು ಆಗಿರುವ ಸಚಿವ ಎಂ. ಬಿ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಉಪಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಿನ್ಸಿಪಾಲ್ ಡಾ. ಅರವಿಂದ ಪಾಟೀಲ ಮತ್ತು ರಜಿಸ್ಟಾçರ್ ಡಾ. ರಾಘವೇಂದ್ರ ವಿ. ಕುಲಕರ್ಣಿ ಅಭಿನಂದನೆ ಸಲ್ಲಿಸಿದ್ದಾರೆ.