ಹೆಣ್ಣು ಸೃಷ್ಠಿಯ ಮೂಲ- ಸ್ತ್ರೀ ದೇವತೆಯ ಸ್ವರೂಪ- ಬಿಇಓ ಬಸವರಾಜ ತಳವಾರ

ವಿಜಯಪುರ: ಹೆಣ್ಣು ಸೃಷ್ಠಿಯ ಮೂಲ.  ಸ್ತ್ರೀ ದೇವತೆಯ ಸ್ವರೂಪ ಎಂದು ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.

ನಗರದ ನೌಕರರ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ವಿಜಯಪುರ ನಗರ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಚಿಂತನ ಗೋಷ್ಠಿ ಕಾರ್ಯಕ್ರಮ ಉದ್ಗಾಟಿಸಿ ಅವರು ಮಾತನಾಡಿದರು.

ಇಂದಿನ ಮಹಿಳೆಯರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.  ಸಮಾಜದಲ್ಲಿ ಹೆಚ್ಚಿನ ಅವರಿಗೆ ಹೆಚ್ಚಿನ ಗೌರವವಿದೆ ಎಂದು ಅವರು ಹೇಳಿದರು.

ಡಾ. ಸವಿತಾ ಝಳಕಿ ಮಹಿಳಾ ಅಸ್ಮಿತತೆಯ ಶೋಧ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ನಗರ ಘಟಕದ ಅಧ್ಯಕ್ಷೆ ಸುನಂದಾ, ಪ್ರೇಮಾ ಹಿರೇಮಠ, ಜಯಶ್ರೀ ಬೆಣ್ಣಿ, ಅಕ್ಕುಬಾಯಿ ನಾಯಕ, ಮಾತನಾಡಿದರು. ಕೈವಲ್ಯ ಕುಠೀರದ ಶ್ರೀ ಪ್ರಕಾಶ ಮಹಾರಾಜರು ಆಶೀರ್ವಚನ ನೀಡಿದರು.

ದಾಕ್ಷಾಯಿಣಿ ಹುಡೇದ, ಶೋಭಾ ಮೆಡೆಗಾರ, ಸುಜ್ಞಾನಿ ಪಾಟೀಲ ಕವನ ವಾಚನ ಮಾಡಿದರು.

ಈ ಸಂದರ್ಭದಲ್ಲಿ ಸುಮಂಗಲಾ ಕರಿಗಾರ, ನೀಲಾ ಇಂಗಳೆ, ಜೆ. ಕೆ. ಹೂಗಾರ, ಆರಿಫಾ ಮಿರ್ಜಾ, ಗೀತಾ ಕುಲಕರ್ಣಿ, ವಿದ್ಯಾ ಪಾಟೀಲ, ನಹೀಮಾ, ಆರ್. ಎಂ. ಹೋಳಿನ, ಗೀತಾ ದೊಡ್ಡಮನಿ, ವಡಗೇರಿ ಉಪಸ್ಥಿತರಿದ್ದರು.

ಶೀಲಾ ಗೆಜ್ಜಲಕಟ್ಟಿ ಪ್ರಾರ್ಥಿಸಿದರು.  ಡಿ. ಎಲ್. ಪಿಂಜಾರ ಸ್ವಾಗತಿಸಿದರು.  ಅನಿತಾ ದೇಗಿನಾಳ ನಿರೂಪಿಸಿದರು.  ಸುನಿತಾ ಪಾಟೀಲ ವಂದಿಸಿದರು.

Leave a Reply

ಹೊಸ ಪೋಸ್ಟ್‌