ವಿಜಯಪುರ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಶ್ರೀಶೈಲ ಮಲ್ಲಯನ ದರ್ಶನಕ್ಕೆ ಪಾದಯಾತ್ರೆ ಪ್ರಾರಂಭಿಸಿದ ಖ್ಯಾತಿಯ ವಿಜಯಪುರ ನಗರದ ಜೋರಾಪುರ ಪೇಠ ಮಲ್ಲಯ್ಯನ ಓಣಿಯ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯ ಕಾರ್ಯಕ್ರಮ ಮಾ. 24 ರಿಂದ ಏ. 7ರ ವರೆಗೆ ನಡೆಯಲಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಮಿತಿಯ ಮುಖಂಡ ರವೀಂದ್ರ ಸಿದ್ದಯ್ಯ ಕರ್ಪೂರಮಠ, 31ನೇ ವರ್ಷದ ಪಾದಯಾತ್ರೆ ಇದಾಗಿದ್ದು, ಹೋಳಿ ಹುಣ್ಣಿಮೆಯ ದಿನದಿಂದ ಯುಗಾದಿಯವರೆಗೆ 15 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಾ. 24 ರಂದು ರಾತ್ರಿ 10 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವಾಲಯದಿಂದ ಪಾದಯಾತ್ರೆ ನಡೆಯಲಿದ್ದು, ಹಿಟ್ನಳ್ಳಿಯಲ್ಲಿ ವಾಸ್ತವ್ಯ ನಡೆಯಲಿದೆ.
ಮಾ. 25 ರಂದು ಬಸವನ ಬಾಗೇವಾಡಿಯಲ್ಲಿ, ಮಾ. 26 ರಂದು ಕೊಣ್ಣೂರ ಕ್ರಾಸ್, ಮಾ. 27 ರಂದು ಹುಣಸಗಿ, ಮಾ. 28 ರಂದು ದೇವಾಪೂರ ಕ್ರಾಸ್ ಸೂಗೂರ, ಮಾ. 29 ರಂದು ದೇವದುರ್ಗ ತಾಲೂಕಿನ ಮಸರಕಲ್ಲ, ಮಾ. 30 ರಂದು ಕಲಮಲಾ, ಮಾ. 31 ರಂದು ಭಾವಿದೊಡ್ಡಿ, ಏ. 1 ರಂದು ಆಯಿಜ, ಏ. 2 ರಂದು ಆಲಂಪೂರ ಕ್ರಾಸ್, ಏ. 3 ರಂದು ನಂದಿಕೊಟಕೂರ, ಏ. 4 ರಂದು ಪಾಲಂಪಾಲ, ಏ. 5 ರಂದು ಕೃಷ್ಣಾಪೂರಗಳಲ್ಲಿ ಮೊಕ್ಕಾಂ ಹೂಡಲಿದ್ದಾರೆ. ಏ. 6 ರಂದು ಈ ಪಾದಯಾತ್ರೆ ಸುಕ್ಷೇತ್ರ ಶ್ರೀಶೈಲ ತಲುಪಲಿದೆ. ಏ. 7 ರಂದು ಕೂಡ ಈ ಪಾದಯಾತ್ರೆ ಸಮಿತಿ ಪದಾಧಿಕಾರಿಗಳು ಮತ್ತು ಭಕ್ತರು ಶ್ರೀಶೈಲದಲ್ಲಿಯೇ ಇರಲಿದ್ದಾರೆ.
ಆಸಕ್ತ ಭಕ್ತರು ತಮ್ಮ ಹೆಸರುಗಳನ್ನು ರವೀಂದ್ರ ಸಿದ್ದಯ್ಯ ಕರ್ಪೂರಮಠ- 8884447791, ಶರಣಬಸಪ್ಪಾ ಚ. ಚನ್ನಿಗಾವಿಶೆಟ್ರು- 8618406986, ಶರಣಯ್ಯ ಮಠಪತಿ- 8073342193, ಧರೆಪ್ಪ ಶ್ಯಾಪೇಟಿ- 8310879947 ಇವರ ಬಳಿ ತಮ್ಮ ಹೆಸರುಗಳನ್ನು ನೋಂದಾಯಿಸಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ರವೀಂದ್ರ ಸಿದ್ದಯ್ಯ ಕರ್ಪೂರಮಠ ತಿಳಿಸಿದ್ದಾರೆ.