ಬಸವ ನಾಡಿನಲ್ಲಿ ಮತದಾನ ಜಾಗೃತಿ ಜಾಥಾ- ಸಾವಿರಾರು ಜನ ಭಾಗಿ

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಎನ್.ಎಸ್.ಎಸ್ ಘಟಕ, ಬಿ.ಎಲ್‌.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಮತದಾನ ಜಾಗೃತಿ ಬೃಹತ್ ಜಾಥಾ ನಡೆಯಿತು.  ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಜಾಥಾ ಗಾಂಧಿ ಚೌಕಿಗೆ ಆಗಮಿಸಿತು.  ಈ ಸಂದರ್ಭದಲ್ಲಿ ಮತದಾನದ ಮಹತ್ವವನ್ನು ಘೋಷಿಸುವುದರ ಮೂಲಕ  ಜನರಲ್ಲಿ ಮತದಾನದ ಮಹತ್ವದ ಕುರತು ಅರಿವು ಮೂಡಿಸಲಾಗಿಯಿತು. […]

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಆರಂಭ- ಜಿ. ಪಂ. ಸಿಇಓ ರಿಷಿ ಆನಂದ

ವಿಜಯಪುರ: ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆ ಎದುರಾಗದಂತೆ, ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ನಿವಾರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಜಿಲ್ಲಾ ಪಂಚಾಯಿತಿ ವಿಜಯಪುರ(08352-277293), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ(08352-277941) ಇವರನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೇ ತಾಲೂಕು ಮಟ್ಟದಲ್ಲಿ ಮುದ್ದೇಬಿಹಾಳ(08356-200606), ತಾಳಿಕೋಟೆ(08356-200103), ಸಿಂದಗಿ(08488-221772), ದೇವರಹಿಪ್ಪರಗಿ (08424-200114), ಆಲಮೇಲ(08488-298900), ವಿಜಯಪುರ(08352-254044), ಬಬಲೇಶ್ವರ(08355-200005), ತಿಕೋಟಾ(08352-200129), […]

ವಿಜಯಪುರ ನಗರದ ಸಿಂದಗಿ ನಾಕಾ ಚೆಕಪೋಸ್ಟ್ ಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ, ಪರಿಶೀಲನೆ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಸಿಂದಗಿ ನಾಕಾ ಬಳಿ ತೆರೆಯಲಾಗಿರುವ ಚೆಕಪೋಸ್ಟ್ ಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಪುರ ನಗರಕ್ಕೆ ಒಳಬರುವ ಮತ್ತು ನಗರದಿಂದ ಹೊರ ಹೋಗೂುವ ಎಲ್ಲಾ ವಾಹನಗಳ ತಪಾಸಣೆ ಕಾರ್ಯ ವೀಕ್ಷಿಸಿಸಿದ ಅವರು, ಚೆಕಫೋಸ್ಟ್ ನಲ್ಲಿ ದಿನದ 24 ಗಂಟೆ ಪಾಳಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು. ಬೇಸಿಗೆ ಇರುವುದರಿಂದ ಚೆಕಫೋಸ್ಟಗಳಲ್ಲಿ ಅಗತ್ಯ ಮೂಲಭೂತ […]