ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಸಿಂದಗಿ ನಾಕಾ ಬಳಿ ತೆರೆಯಲಾಗಿರುವ ಚೆಕಪೋಸ್ಟ್ ಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಂಗಳವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಕ್ಕೆ ಒಳಬರುವ ಮತ್ತು ನಗರದಿಂದ ಹೊರ ಹೋಗೂುವ ಎಲ್ಲಾ ವಾಹನಗಳ ತಪಾಸಣೆ ಕಾರ್ಯ ವೀಕ್ಷಿಸಿಸಿದ ಅವರು, ಚೆಕಫೋಸ್ಟ್ ನಲ್ಲಿ ದಿನದ 24 ಗಂಟೆ ಪಾಳಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ಬೇಸಿಗೆ ಇರುವುದರಿಂದ ಚೆಕಫೋಸ್ಟಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ. ಎಲ್ಲಾ ವಾಹನಗಳ ಬಗ್ಗೆ ನಿಗಾ ವಹಿಸಿ ಜವಾಬ್ದಾರಿಯಿಂದ ಸಮನ್ವಯೆ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಚೆಕಪೋಸ್ಟ್ ನಲ್ಲಿ ನಿಯೋಜಿಸಲಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಟಿ. ಭೂಬಾಲನ್ ಅವರು ಸಲಹೆ ಮತ್ತು ಸೂಚನೆ ನೀಡಿದರು.