ಬಸವ ನಾಡಿನಲ್ಲಿ ಮತದಾನ ಜಾಗೃತಿ ಜಾಥಾ- ಸಾವಿರಾರು ಜನ ಭಾಗಿ

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಎನ್.ಎಸ್.ಎಸ್ ಘಟಕ, ಬಿ.ಎಲ್‌.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಮತದಾನ ಜಾಗೃತಿ ಬೃಹತ್ ಜಾಥಾ ನಡೆಯಿತು. 

ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಜಾಥಾ ಗಾಂಧಿ ಚೌಕಿಗೆ ಆಗಮಿಸಿತು.  ಈ ಸಂದರ್ಭದಲ್ಲಿ ಮತದಾನದ ಮಹತ್ವವನ್ನು ಘೋಷಿಸುವುದರ ಮೂಲಕ  ಜನರಲ್ಲಿ ಮತದಾನದ ಮಹತ್ವದ ಕುರತು ಅರಿವು ಮೂಡಿಸಲಾಗಿಯಿತು.

ವಿಜಯಪುರ ನಗರದಲ್ಲಿ ಮತದಾನ ದಾಗೃತಿ ಜಾಥಾ ನಡೆಯಿತು. ಜೆಎಸ್ಎಸ್ ಬಿ.ಎಡ್. ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೋಂಡರು.

ವಿಜಯಪುರ ಜಿಲ್ಲೆಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ದಾಖಲಾಗುವಂತೆ ಶ್ರಮಿಸಲು ಸ್ವಯಂ ಸೇವಕರೊಂದಿಗೆ ಚರ್ಚೆ ನಡೆಸಲಾಯಿತು.  ಜಿಲ್ಲೆಯಲ್ಲಿ ಸುಮಾರು 15 ಸಾವಿರಕ್ಕಿಂತ ಹೆಚ್ಚು ಸ್ವಯಂ ಸೇವಕರಿದ್ದು, ತಲಾ 10 ಜನರಿಗೆ ಮತದಾನ ಮಾಡಿಸುವ ಗುರಿ ಹೊಂದಲು ಸ್ವಯಂ ಸೇವಕರಿಗೆ ಸೂಚನೆ ನೀಡಲಾಯಿತು.  ಅಲ್ಲದೇ, ಈ ಸಂದರ್ಭದಲ್ಲಿ ಮತದಾನ ಕುರಿತು ಪ್ರತಿಜ್ಞಾವಿಧಿಯನ್ನು ಭೋಧಿಸಲಾಯಿತು.

ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ. ಆರ್. ಮುಂಡರಗಿ, ರಾಜ್ಯ ಎನ್.ಎಸ್.ಎಸ್ ಸಲಹಾ ಸಮಿತಿ ಸದಸ್ಯ ಡಾ. ಜಾವೀದ ಜಮಾದಾರ, ಜಿಲ್ಲಾ  ಎನ್‌.ಎಸ್‌.ಎಸ್ ನೋಡಲ್ ಅಧಿಕಾರಿ ಡಾ. ಪ್ರಕಾಶ್ ರಾಠೋಡ, ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ. ಬಿ. ವೈ. ಖಾಸನೀಸ್, ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಡಾ. ಸುಮಾ ಬೋಲರೆಡ್ಡಿ, ಪ್ರಾಧ್ಯಾಪಕರಾದ ಡಾ. ಮಂಜುನಾಥ ಕೋರಿ, ಡಾ. ಬಿ. ಎಸ್. ಹಿರೇಮಠ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದ ರಾವ್ ಬಹದ್ದೂರ ಭಾಗವಾನ, ವಿಶ್ವನಾಥ, ಸ್ವಯಂ ಸೇವಕರು ಈ ಬೃಹತ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌