ಲೋಕಸಭೆ ಚುನಾವಣೆ 2024: ಗ್ರಾಮೀಣ ಭಾಗದಲ್ಲಿ ಡಿಸಿ ಟಿ. ಭೂಬಾಲನ್ ಪ್ರವಾಸ- ವಿಕಲಚೇತನರು, 85 ವರ್ಷ ಮೇಲ್ಪಟ್ವರಿಗೆ ಮತದಾನ ಮಾಹಿತಿ

ವಿಜಯಪುರ: ಪ್ರಜಾಪ್ರಭುತ್ವದ ಸಂವಿಧಾನಿಕ  ಹಕ್ಕಾಗಿರುವ  ಮತದಾನದಿಂದ ಯಾವುದೇ ಮತದಾರರು ವಂಚಿತರಾಗಬಾರದೆನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯಲ್ಲಿ 85ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತನರಿಗೆ ಮನೆಯಲ್ಲಿಯೇ ಮತ ಚಲಾವಣೆ ಮಾಡುವ ಅವಕಾಶ ನೀಡಿದೆ.

ವಿಜಯಪುರ ಡಿಸಿ ಟಿ. ಭೂಬಾಲನ್ ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡು ಮತದಾನದ ಮಾಹಿತಿ ನೀಡಿದರುಯ

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಜಿಲ್ಲೆಯ ಮನಗೂಳಿ ಮತ್ತು ಯರನಾಳ ಗ್ರಾಮಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಈ ಕುರಿತು ಮಾಹಿತಿ ನೀಡಿದರು  ಅಲ್ಲದೇ, ಮತಗಟ್ಟೆಗೆ  ಬಂದು ಮತದಾನ ಮಾಡಲು ಅಶಕ್ತರಾಗಿರುವವರನ್ನು ಮತಗಟ್ಟೆಯ ಬಿಎಲ್‌ಓ ಗಳು  ಗುರುತಿಸಿ ಅರ್ಜಿ ನಮೂನೆ 12ಡಿ ಪತ್ರದ ಮೂಲಕ ಮನೆಯಲ್ಲೇ ಮತ ಚಲಾವಣೆ ಮಾಡುವ ಅವಕಾಶ ನೀಡಲಾಗಿರುವ ಕುರಿತು ಮಾಹಿತಿ ನೀಡಿದರು.  ಅಲ್ಲದೇ, 85 ವರ್ಷ  ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

85 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮತ್ತು ವಿಕಲಚೇತನ ಮತದಾರರಿಗೆ ನಮೂನೆ 12 ಡಿ ಪತ್ರ ವಿತರಿಸುವ ಮೂಲಕ, ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಜಿಲ್ಲೆಯಲ್ಲಿ ಯಾರೊಬ್ಬರೂ ಮತದಾನ ದಿಂದ ದೂರ ಉಳಿಯದಂತೆ ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸಲು ಕಾರ್ಯೋನ್ಮುಖರಾಗಿ ಕೆಲಸ ಮಾಡಬೇಕು ಎಂದು ಟಿ. ಭೂಬಾಲನ್ ಹೇಳಿದರು.

Leave a Reply

ಹೊಸ ಪೋಸ್ಟ್‌