ಗಾಂಧಿಚೌಕ್ ಪೊಲೀಸರ ಕಾರ್ಯಾಚರಣೆ- ಮೂವರ ಬಂಧನ- ರೂ. 15.60 ಲಕ್ಷ ಮೌಲ್ಯದ 26 ಬೈಕ್ ವಶ

ವಿಜಯಪುರ: ನಗರದ ಗಾಂಧಿಚೌಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂರು ಜನ ಆರೋಪಿಗಳನ್ನು ಬಂಧಿಸಿ 26 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಋಷಿಕೇಷ ಸೋನಾವಣೆ, ನಗರದಲ್ಲಿ ಕಳೆದ ಹಲವಾರು ದಿನಗಳಿಂದ ಬೈಕ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು.  ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ, ವಿಜಯಪುರ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ ಮಾರ್ಗದರ್ಶನದಲ್ಲಿ ಗಾಂಧಿಚೌಕ್ ಸಿಪಿಐ ಮಹಾಂತೇಶ ಕೆ. ಧಾಮಣ್ಣವರ ನೇತ್ವದಲ್ಲಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡ ಈ ಆರೋಪಿಗಳನ್ನು ಬಂಧಿಸಿದೆ ಎಂದು ತಿಳಿಸಿದರು.

ಬೈಕ್ ಕಳ್ಳತನ ಪ್ರಕಣಗಳ ಕುರಿತು ಎಂ.ಓ.ಬಿ ಅಂದರೆ ಕಳ್ಳತನ ಆರೋಪಿಗಳ ಮಾಹಿತಿ ಸಂಗ್ರಹಿಸಿ ಅವರ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು.  ಅಲ್ಲದೇ, ಬಾಗಲಕೋಟೆ ಜಿಲ್ಲೆಯ ಕಡೆಗೂ ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿತ್ತು.  ಈ ಎಲ್ಲ ಮಾಹಿತಿ ಆಧರಿಸಿ ಮಾ. 25 ರಂದು ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ.  ಇವರಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಂಚಗುಂಡಿ ಮೂಲದ ಮತ್ತು ಹಾಲಿ ವಿಜಯಪುರ ನಗರದ ಯೋಗಾಪುರ ಕಾಲನಿ ವಾಟರ್ ಟ್ಯಾಂಕ್ ಹತ್ತಿರದ ನಿವಾಸಿ ಮತ್ತು ಟಾಟಾ ಎಸ್ ಚಾಲಕ ಸುನೀಲ ಭೀಮಪ್ಪ ಗಡ್ಡಿ(31), ಜೆ. ಎಂ. ರಸ್ತೆಯ ಕೆ.ಎಚ್.ಬಿ ಕಾಲನಿಯ ಕಟ್ಟಡ ಸೆಂಟ್ರಿಂಗ್ ಕಾರ್ಮಿಕರಾದ ಮೋಶೀನ್ ಬಾಬುಲಾಲ ಕಲಾದಗಿ(24) ಮತ್ತು ಸದ್ದಾಂ ಮುನ್ನಾ ಮುತವಲ್ಲಿ(20) ಎಂಬುವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯಪುರ ಗಾಂಧಿಚೌಕ್ ಪೊಲೀಸರು ವಶಪಡಿಸಿಕೊಂಡಿರುವ ಕಳ್ಳತನ ಮಾಡಲಾಗಿದ್ದ ಬೈಕುಗಳು

ಈ ಆರೋಪಿಗಳು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಜಮಖಂಡಿಯಲ್ಲಿ ಕಳ್ಳತನ ಮಾಡಿದ್ದ ರೂ. 25.60 ಲಕ್ಷ ಮೌಲ್ಯದ 26 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಗಾಂಧಿಚೌಕ ಪಿಎಸ್ಐ ಎಸ್. ಕೆ. ಮನ್ನಿಕೇರಿ, ಎಸ್. ಬಿ. ಖೋತ, ಆರ್. ಕೆ. ಗವಾರ, ಸಿಬ್ಬಂದಿಯಾದ ಶಿವಾನಂದ ಅಳ್ಳಿಗಿಡದ, ಬಾಬು ಕೆ. ಗುಡಿಮನಿ, ಎಚ್. ಎಚ್. ಜಮಾದಾರ, ಅನೀಲ ದೊಡ್ಡಮನಿ, ಆರ್. ವಿ. ನಾಯಕ, ಆಸೀಫ್ ರಿಸಾಲ್ದಾರ, ಬಶೀರಅಹ್ಮದ ಎಂ. ಶೇಖ, ಚಿದಾನಂದ ಗಿಡಗಂಚಿ, ರಾಮನಗೌಡ ಬಿರಾದಾರ, ಬಿ. ಎಂ. ಹಡಲಗೇರಿ, ವಿನಾಯಕ ಕಡ್ಲಿಬಾಳು, ಸುಧೀರ ಗದ್ಯಾಳ, ಮಾಯಪ್ಪ ಟೋಪಣಗೋಳ, ರವಿಕಿರಣ ಗುತ್ತರಗಿ, ಕುಮಾರ ರಾಠೋಡ, ಸುನೀಲ ಮೂಳೆ, ತಾಂತ್ರಿಕ ಸಿಬ್ಬಂದಿಯಾದ ಸುನೀಲ ಗೌಳಿ, ಗುಂಡು ಗಿರಣಿವಡ್ಡರ ಹಾಗೂ ಮತೀನ ಬಾಗವಾನ

ಅವರು ಪಾಲ್ಗೋಂಡಿದ್ದರು ಎಂದು ಎಸ್ಪಿ ಋಶಿಕೇಷ ಸನೋವಾಣೆ ತಿಳಿಸಿದರು.

Leave a Reply

ಹೊಸ ಪೋಸ್ಟ್‌