ವಿಜಯಪುರ: ಮನೆಯ ಗೇಟಿನ ಮೇಲೆ Best Officer Here ಬೋರ್ಡು. ಮನೆಯ ಮೇಲೆ ಗುಡ್ಡಾಂಬೆ ಹೆಸರು. ಆರ್. ಟಿ. ಓ ಅಧಿಕಾರಿ ನಿವಾಸದ ಮೇಲೆ ಲೋಕಾಯುಕ್ತರ ಧಾಳಿ. ಇದು ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರು ಭ್ರಷ್ಟ ಅಧಿಕಾರಿಯ ನಿವಾಸದ ಮೇಲೆ ನಡೆಸಿರುವ ದಾಳಿ. ಹೌದು. ಗುಮ್ಮಟ ನಗರಿ ವಿಜಯಪುರದಲ್ಲಿ ಭ್ರಷ್ಟ ಅಧಿಕಾರಿಯ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.
ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಚಾಲುಕ್ಯ ನಗರ ಪಶ್ಚಿಮ ಬಡಾವಣೆಯಲ್ಲಿರುವ ಷಣ್ಮುಖಪ್ಪ ತೀರ್ಥ ಅವರ ನಿವಾಸ ಸೇರಿದಂತೆ ಅವರಿಗೆ ಸಂಬಂಧಿಸಿದ ಏಳೆಂಟು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಧಾಳಿ ನಡೆಸಿದ್ದಾರೆ.
ಷಣ್ಮುಖಪ್ಪ ತೀರ್ಥ ಅವರು ಸಧ್ಯಕ್ಕೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಮೋಟರ್ ವೆಹಿಕಲ್ ಇನ್ಸಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಗಿನ ಜಾವ ವಿಜಯಪುರ ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ, ಡಿವೈಎಸ್ಪಿ ಸುರೇಶರೆಡ್ಡಿ, ಸಿಪಿಐ ಗಳಾದ ಡೋಣಿ, ಆನಂದ ಠಕ್ಕಣ್ಣವರ, ರಾಯಚೂರು ಲೋಕಾಯುಕ್ತ ಡಿವೈಎಸ್ಪಿ ರಘು, ರಾಯಚೂರು ಹಾಗೂ ಕೊಪ್ಪಳ ಲೋಕಾಯುಕ್ತ ಸಿಪಿಐಗಳು ಸೇರಿದಂತೆ ನಾನಾ ಅಧಿಕಾರಿಗಳ ತಂಡ ಈ ಧಾಳಿ ನಡೆಸಿದೆ.
ವಿಡಿಯೋ ಸುದ್ದಿ:
ವಿಜಯಪುರದಲ್ಲಿರುವ ಷಣ್ಮುಖಪ್ಪ ತೀರ್ಥ, ಅವರ ಸ್ನೇಹಿತ ವಿಜಯಪುರ ನಗರದ ಶಿಕಾರಖಾನೆ ಪ್ರದೇಶದಲ್ಲಿರುವ ಅಣ್ಣಪ್ಪ ಗುಡ್ಡೋಡಗಿ, ಜಮಖಂಡಿ, ಮಹಾರಾಷ್ಟ್ರದ ಗುಡ್ಡಾಪುರ ಹಾಗೂ ಮೊರಬಗಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಈ ಧಾಳಿ ನಡೆಸಲಾಗಿದೆ.
ಅಧಿಕಾರಿಗಳು ಅಕ್ರಮ ಆಸ್ಪಿಪಾಸ್ತಿ ಕುರಿತು ತನಿಖೆ ಮುಂದುವರೆಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.