ಮಹಿಳೆಯರು ಕಾಂಗ್ರೆಸ್ಸಿಗೆ ದೊಡ್ಡ ಶಕ್ತಿಯಾಗಿದ್ದಾರೆ- ಪ್ರೊ. ರಾಜು ಆಲಗೂರ

ವಿಜಯಪುರ: ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರೇ ದೊಡ್ಡ ಶಕ್ತಿಯಾಗಿದ್ದಾರೆ ಎಂದು ವಿಜಯಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮಹಿಳೆಯರಿಗೆ ನೂರಾರು ಯೋಜನೆಗಳನ್ನು ಹಾಕಿಕೊಂಡಿದೆ.  ಅವರ ಅಭಿವೃದ್ಧಿಗೆ ಶ್ರಮಿಸಿದೆ.  ಈಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಹಿಳೆಯರಿಗೆ ಹಲವು ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ದಾಖಲೆಯಾಗಿದೆ.  ಇದೆಲ್ಲವನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮತದಾರರಿಗೆ ತಲುಪಿಸಬೇಕು ಎಂದು ಅವರು ಹೇಳಿದರು.

ರಾಜ್ಯ ಸರಕಾರ ಸಮರ್ಥವಾಗಿ ಆರ್ಥಿಕ ನಿರ್ವಹಣೆಯ ಮೂಲಕ ನೀಡಿರುವ ಭರವಸೆ ಈಡೇರಿಸಿದ್ದು, ಪ್ರತಿ ವರ್ಷ ರೂ. 50 ಸಾವಿರ ಕೋ. ಖರ್ಚು ಮಾಡುತ್ತಿರುವುದು ದೇಶದಲ್ಲೇ ಎಲ್ಲೂ ಇಲ್ಲ.  ಮಹಿಳೆಯರ ಸಬಲೀಕರಣ, ಯುವಕರಿಗೆ ಯುವನಿಧಿ, ಮನೆಗೆ ಗೃಹಜ್ಯೋತಿ ಮೂಲಕ ಉಚಿತ ವಿದ್ಯುತ್ ಪೂರೈಕೆ ಸೌಲಭ್ಯ ಒದಗಿಸಲಾಗಿದೆ.  ಒಳ್ಳೆಯ ಗೆಲ್ಲುವ ವಾತಾವರಣವಿದೆ.  ಇದನ್ನು ಸದುಪಯೋಗ ಮಾಡಿಕೊಳ್ಳಬೇಕು.  ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಎಲ್ಲರಿಗೂ ತಲುಪಿಸಿ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರಾಣಿ ತುಂಗಳ ಮಾತನಾಡಿದರು

 

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿ, ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ರಾಜ್ಯದಲ್ಲಿಯೇ ಪ್ರಶಸ್ತಿ ಪಡೆದಿದೆ.  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಕಾರ್ಯಕರ್ತರ ಹೆಚ್ಚಿಗೆ ಶ್ರಮ ಹಾಕಿದ್ದಾರೆ.  ಈಗ ಲೋಕಸಭೆ ಚುನಾವಣೆಯಲ್ಲಿಯೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುವ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ.  ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ.  ಮುಂದೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಲ್ಲೂ ಹತ್ತು ಗ್ಯಾರಂಟಿಗಳು ಜಾರಿಯಾಗಲಿವೆ.  ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.  ಲೋಕಸಭೆ ಚುನಾವಣೆ ಪ್ರಚಾರ ಮಹಿಳಾ ಕಾಂಗ್ರೆಸ್‌ನಿಂದಲೇ ಆರಂಭವಾಗಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಮಹಾನಗರ ಪಾಲಿಕೆ ಸದಸ್ಯೆ ಮತ್ತು ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪುರ, ದೇವರ ಹಿಪ್ಪರಗಿ ಬ್ಲಾಕ್ ಅಧ್ಯಕ್ಷೆ ಸರಿತಾ ನಾಯಕ ಮಾತನಾಡಿದರು.

ಈ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಜಯಶ್ರೀ ಭಾರತೆ, ಗಂಗಾಧರ ಸಂಬಣ್ಣಿ, ಗಂಗೂಬಾಯಿ ದುಮಾಳೆ, ದಾನಮ್ಮ ಜಿರತಿ, ಭಾರತಿ ನಾವಿ, ಮುರ್ತುಜಾಬಿ ಶಿರಬೂರ, ಸುಜಾತಾ ಶಿಂಧೆ, ಮಹಾನಂದಾ ಬೊಮ್ಮಣ್ಣಿ, ಜಯಶ್ರೀ  ಹದನೂರ, ರುಕ್ಮಿಣಿ ರಾಠೋಡ, ಸುಜಾತಾ ಜಂಗಮಶೆಟ್ಟಿ, ನೀಲಮ್ಮ ದಿಂಡವಾರ, ಗಂಗೂಬಾಯಿ ಹಚಡದ, ಸಂಜನಾ ಭಜಂತ್ರಿ, ಆಸ್ಮಾ ಕಾಲೇಬಾಗ ಹಾಗೂ ಹಮೀದಾ ಪಟೇಲ ಮುಂತಾದವರು ಉಪಸ್ಥಿತರಿದ್ದರು.

ರಮೀಜಾ ನದಾಫ್ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌