ಸಮಾಜದ ಎಲ್ಲ ವರ್ಗವದರ ಬಗ್ಗೆ ಗೌರವ ಭಾವನೆಯೊಂದಿಗೆ ರಾಜಕೀಯದಲ್ಲಿದ್ದೇನೆ- ಸಂಸದ ಜಿಗಜಿಣಗಿ

ವಿಜಯಪುರ: ಸಮಾಜದ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಡವರು, ದಲಿತರು ಮೇಲ್ವರ್ಗದವರು ಸೇರಿದಂತೆ ಎಲ್ಲರ ಬಗ್ಗೆ ಗೌರವ ಭಾವನೆ ಹೊಂದಿದರೆ ರಾಜಕಾರಣ ಮಾಡಲು ಸಾಧ್ಯ ಎಂಬುದನ್ನು ಅರಿಯಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. 

ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಅವರು, ರಾಜಕಾರಣ ಮಾಡಲು ಕಾರ್ಯಕರ್ತರು ಬೇಕು.  ಅವರು ಇಲ್ಲದಿದ್ದರೆ ನಾವು ಸೊನ್ನೆ ಇದ್ದಂತೆ.  ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ಹೇಳಿದರು.

ಬೂತ್‌ ಗಳಲ್ಲಿರುವಷ್ಟು ಶಕ್ತಿ ಎಲ್ಲಿಯೂ ಇಲ್ಲ.  ಎಲ್ಲಾ ಬೂತ್‌ಗಳಲ್ಲಿ ಕಾಯಕರ್ತರು ಸರಿಯಾಗಿ ಪ್ರಚಾರ ಮಾಡಿದರೆ ಎಂದಿಗೂ ಸೋಲಾಗುವದಿಲ್ಲ.  ಬೂತಗಳಲ್ಲಿ ಹೆಚ್ಚಿನ ಜವಾಬ್ದಾರಿಂದ ಕಾರ್ಯ ನಿರ್ವಹಿಸುವಂತೆ ಕಾಯಕರ್ತರಿಗೆ ಅವರು ಕರೆ ನೀಡಿದರು.

ಕಳೆದ 15 ವರ್ಷಗಳಿಂದ ಜಿಲ್ಲೆಯ ಸಂಸದನಾಗಿ ಕೇಂದ್ರ ಸಚಿವನಾಗಿ ರೈಲ್ವೆ ಹಳಿಗಳ ವಿದ್ಯುತ್ತಿಕರಣ, ರಾಷ್ಟ್ರೀಯ ಹೆದ್ದಾರಿ, ಎನ್.ಟಿ.ಪಿಸಿ ಸೇರಿದಂತೆ ಕಳೆದ 10 ವರ್ಷಗಳಲ್ಲಿ ರೂ. 1 ಲಕ್ಷ ಕೋ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.  ಲಂಬಾಣಿ ಜನರೊಂದಿಗೆ ಅತ್ಯಂತ ಪ್ರೀತಿ, ವಿಶ್ವಾಸದಿಂದ ಇದ್ದೇನೆ.  ನನ್ನ ಮತ ಸಹ ತಾಂಡಾದಲ್ಲಿಯೇ ಇದೆ.  ಲಂಬಾಣಿ ಜನರ ಬಗ್ಗೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ.  ಅವರ ಬಗ್ಗೆ ನಾನು ಕೆಟ್ಟ ಪದ ಪ್ರಯೋಗಿಸಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದರು.

ವಿಜಯಪುರದಲ್ಲಿ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯನ್ನು ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕ ರಾಜಶೇಖರ ಶೀಲವಂತ ಉದ್ಘಾಟಿಸಿದರು.

 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ದಲಿತರ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ.  ಅವರಿಗೆ ಎಲ್ಲರೂ ತಕ್ಕ ಪಾಠ ಕಲಿಸಬೇಕು.  ನಾನು ರಾಮಕೃಷ್ಣ ಹೆಗಡೆ, ಜೆ. ಎಚ್. ಪಟೇಲ ಅವರ ಮಾರ್ಗದಲ್ಲಿ ನಡೆಯುತ್ತಿದ್ದೇನೆ.  ಅವರೇ ನನಗೆ ಕೊನೆಗೆ ಕ್ಷಣದಲ್ಲಿ ಬಿಜೆಪಿ ಮುದೊಂದು ದಿನ ಹಳ್ಳಿ ಹಳ್ಳಿಗಳಲ್ಲಿ ದೊಡ್ಡ ಪಕ್ಷವಾಗಿ ಹೊjಹೊಮ್ಮುತ್ತದೆ ಎಂದು ಹೇಳಿದ್ದರು.  ಆದರೆ, ಅವರು ಇದೇ ಪಕ್ಷಕ್ಕೆ ಹೋಗು ಎಂದು ಎಲ್ಲಿಯೂ ಹೇಳಿರಲಿಲ್ಲ.  ಆದರೂ ಬಿಜೆಪಿ ಮೂಲಕ ಮತ್ತೆ ರಾಜಕೀಯ ಜೀವನ ಮುಂದುವರೆಸಿಕೊಂಡು ಬಂದಿದ್ದೇನೆ ಎಂದು ರಮೇಶ ಜಿಗಜಿಣಗಿ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ದೇಶದಲ್ಲಿ ಕಳೆದ 10 ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ಆಡಳಿತವನ್ನು ಜಗತ್ತು ಮೆಚ್ಚಿದೆ.  3ನೇ ಬಾರಿ ಪ್ರದಾನಿಯಾಗಲು ದೇಶದ ಜನರೆ ತೀರ್ಮಾನ ಮಾಡಿದ್ದಾರೆ.  2014ಕ್ಕಿಂತ ಮೊದಲು ದೇಶದಲ್ಲಿ ಸುರಕ್ಷತೆ ಭಾವನೆ ಇರಲಿಲ್ಲ.  ಕಳೆದ 10 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರ ಆಡಳಿತವನ್ನು ಜನರು ಮೆಚ್ಚಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತಾ ಷಾ ಅವರ ವಿರುದ್ಧ ಮುಖ್ಯಮಂತ್ರಿಗಳ ಪುತ್ರನ ಪದ ಪ್ರಯೋಗವನ್ನು ಯಾರೂ ಕ್ಷಮಿಸುವುದಿಲ್ಲ.  ಇವರ ಕುತಂತ್ರ ನಡೆಯುವದಿಲ್ಲ ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಮತ್ತು ವಿಜಯಪುರ ಜಿಲ್ಲಾ ಚುನಾವಣೆ ಪ್ರಭಾರಿ ರಾಜಶೇಖರ ಶೀಲವಂತ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಅರುಣ ಶಹಾಪುರ, ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ಬೆಳಗಾವಿ ಪ್ರಭಾರಿ, ಚಂದ್ರಶೇಖರ ಕವಟಗಿ, ಮುಖಂಡ ಸಂಜೀವ ಐಹೊಳೆ, ಮಹಿಳಾ ಘಟಕ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಮಹಾಶಕ್ತಿ ಕೇಂದ್ರಗಳ ಪ್ರಮುಖರು ಮುಂತಾದವರು ಉಪಸ್ಥಿತರಿದ್ದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣಾ ರಾವೂರ ಸ್ವಾಗತಿಸಿದರು.  ಮುಳುಗೌಡ ಪಾಟೀಲ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌