ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ಎಸ್.ಲೋಣಿ ಅಧಿಕಾರ ಸ್ವೀಕಾರ- ಪ್ರೊ. ರಾಜು ಆಲಗೂರ ಎರಡು ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ- ಲೋಣಿ ಭವಿಷ್ಯ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಲೋಕಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ.  ತಮ್ಮ ಮೇಲೆ ವಿಶ್ವಾಸವಿಟ್ಟು, ಪಕ್ಷ ಈ ಮಹತ್ವದ ಜವಾಬ್ದಾರಿ ನೀಡಿದ್ದು, ಇದಕ್ಕೆ ತಕ್ಕಂತೆ ಶ್ರಮವಹಿಸಿ ಪಕ್ಷ ಸಂಘಟನೆಯಲ್ಲಿ ತೊಡಗುವೆ.  ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನಡೆಸಿ, ಜನಾನುರಾಗಿಯಾಗಿದೆ.  ಕಾರ್ಯಕರ್ತರು ಇದನ್ನು ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದರು.

ನಮ್ಮ ಅಭ್ಯ್ರಥಿ ರಾಜು ಆಲಗೂರ ಪ್ರಬುದ್ಧರಿದ್ದಾರೆ.  ಇಷ್ಟು ದಿನ ಅವಿರತ ಶ್ರಮದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ.  ಅವರಂತೆ ಪಕ್ಷದ ಏಳಿಗೆಗೆ ಶ್ರಮಿಸುತ್ತೇನೆ.  ಆಲಗೂರ ಅವರ ಗೆಲುವು ಶೇ. 100ರಷ್ಟು ನಿಶ್ಚಿತವಾಗಿದೆ.  ನಾವೆಲ್ಲರೂ ಕಷ್ಟಪಟ್ಟರೆ ಎರಡು ಲಕ್ಷ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬಹುದು ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂತನ ಜಿಲ್ಲಾಧ್ಕಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಮಾತನಾಡಿದರು.

ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ, ಲೋಣಿ ಅವರ ನೇಮಕದಿಂದ ಪಕ್ಷ ಸಂಘಟನೆಗೆ ಇನ್ನಷ್ಟು ಶಕ್ತಿ ಬರಲಿದೆ.  ಈ ಚುನಾವಣೆಯನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು.  ಬಿಜೆಪಿಯ ಸುಳ್ಳುಗಳನ್ನು ಜನರಿಗೆ ಮನದಟ್ಟು ಮಾಡಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಎಸ್. ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ಮೂಲಕ ಜನಸಾಮಾನ್ಯರ ಮನ ಮುಟ್ಟಿದೆ.  ಅವರ ಹೃದಯ ಗೆದ್ದಿದೆ.  ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕೇಂದ್ರದಲ್ಲಿಯೂ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಕಾಂಗ್ರೆಸ್ ಮುಖಂಡರಾದ ಎಂ. ಆರ್. ಪಾಟೀಲ, ಅಬ್ದುಲ್ ಹಮೀದ್ ಮುಶ್ರೀಫ್, ಡಾ. ಗಂಗಾಧರ ಸಂಬಣ್ಣಿ, ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಕಾಲೇಬಾಗ, ಚಂದ್ರಕಾAತ ಶೆಟ್ಟಿ, ಮಹ್ಮದರಫೀಕ ಟಪಾಲ, ಆಜಾದ ಪಟೇಲ, ಮಹಾದೇವಿ ಗೋಕಾಕ, ಎಸ್. ಎಂ. ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ವಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ್, ಉಪಮೇಯರ್ ದಿನೇಶ ಹಳ್ಳಿ, ಸ್ನೇಹಾ ಕಟ್ಟಿ, ವಿದ್ಯಾವತಿ ಅಂಕಲಗಿ, ಶಬ್ಬೀರ ಜಾಗಿರದಾರ, ಸಾಹೇಬಗೌಡ ಬಿರಾದಾರ, ಸುರೇಶ ಗೊಣಸಗಿ, ವಿಜಯಕುಮಾರ ಘಾಟಗೆ, ಐ. ಎಂ. ಇಂಡಿಕರ, ವಸಂತ ಹೊನಮೊಡೆ, ಜಾಕಿರ ಮುಲ್ಲಾ, ಹಾಜಿಲಾಲ ದಳವಾಯಿ, ಚನಬಸಪ್ಪ ನಂದರಗಿ, ಅಷ್ಫಾಕ ಮನಗೂಳಿ, ಅಮಿತ ಚವ್ಹಾಣ, ರಮೇಶ ಗುಬ್ಬೇವಾಡ, ನಿಂಗಪ್ಪ ಸಂಗಾಪೂರ, ರಾಜೇಶ್ವರಿ ಚೋಳಕೆ, ಬಾಪುಗೌಡ ಪಾಟೀಲ, ಶಂಕರಸಿಂಗ್ ಹಜೇರಿ, ಸುಭಾಷ ಗುಡಿಮನಿ, ಆನಂದ ಜಾಧವ, ಮಹ್ಮದಹನೀಫ್ ಮಕಾನದಾರ, ಆರತಿ ಶಹಾಪೂರ, ಗುರು ತಾರನಾಳ, ಜಾವಿದ ಮೊಮಿನ, ಸಂತೋಷ ಬಾಲಗಾಂವಿ, ಶ್ರೀದೇವಿ ಉತ್ಲಾಸರ ಮುಂತಾದವರು ಉಪಸ್ಥಿತರಿದ್ದರು.

 

ಬೇವು- ಬೆಲ್ಲ ನೀಡಿ ಬೇವು-ಬೆಲ್ಲ ನೀಡಿ ಅಧಿಕಾರ ಹಸ್ತಾಂತರ

ಇದಕ್ಕೂ ಮುನ್ನ ನಿರ್ಗಮಿತ ಅಧ್ಯಕ್ಷ ಪ್ರೊ. ರಾಜು ಆಲಗೂರ ಅವರು ಪಕ್ಷದ ಧ್ವಜ ಮತ್ತು ಬೇವು- ಬೆಲ್ಲ ನೀಡಿ ಮಲ್ಲಿಕಾರ್ಜುನ ಲೋಣಿ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಹಸ್ತಾಂತರಿಸಿದರು.

Leave a Reply

ಹೊಸ ಪೋಸ್ಟ್‌