Video News: ಮಳೆಗಾಗಿ ಶಿವ ಒಂಟಿ ಕಾಲಿನಲ್ಲಿ ನಿಂತಿದ್ದಾನೆ- ಎಲ್ಲವೂ ಸಮ್ಮಿಶ್ರವಾಗಿರಲಿದೆ- ಕುತೂಹಲ ಕೆರಳಿಸಿರುವ ಕತ್ನಳ್ಳಿ ಕಾರ್ಣಿಕರ ಭವಿಷ್ಯ

ವಿಜಯಪುರ: ಮಳೆಗಾಗಿ ಶಿವ ಒಂಟಿಗಾಲಿನ ಮೇಲೆ ನಿಂತಿದ್ದಾನೆ.  ಈ ವರ್ಷ ಎಲ್ಲವೂ ಮಿಶ್ರವಿದೆ ಎಂದು ಖ್ಯಾತ ಕಾರ್ಣಿಕ ವಿಜಯಪುರ ಜಿಲ್ಲೆಯ ಕತಕನಹಳ್ಳಿ(ಕತ್ನಳ್ಳಿ)ಯ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಗಿಳ ಮಠಾಧೀಶರಾದ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಯುಗಾದಿ ಅಂಗವಾಗಿ ನಡೆಯುವ ಜಾತ್ರೆಯ ಅಂಗವಾಗಿ ನಡೆದ ಹೇಳಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಭವಿಷ್ಯ ನುಡಿದರು.

ಈ ವರ್ಷ ಎಲ್ಲವೂ ಸಮ್ಮಿಶ್ರವಿದೆ

ಈ ವರ್ಷ ಸಮ್ಮಿಶ್ರವಿದೆ.  ಸುಖ-ದುಃಖ, ಅಮೃತೃ-ವಿಷ, ಯೋಗ-ಆರೋಗ್ಯ, ಸಿಟ್ಟು-ಶಾಂತಿ, ಸಹನೆ-ಅಸಹನೆ, ಆರೋಗ್ಯ- ಅನಾರೋಗ್ಯ, ರೋಗ-ನಿರೋಗ ಈ ವರ್ಷ ಸಮ್ಮಿಶ್ರವಿದೆ.  ಈ ಸಮ್ಮಿಶ್ರದಿಂದ ನೀವೆಲ್ಲರೂ ಪಾರಾಗಬೇಕು.  ಈ ಹಿಂದೆ ಸೆರಮನಿ ಆಟವಾಡುವಂತೆ ಸೆರಮನಿ ಕಾಲವಿದೆ.  ಇದರಿಂದ ಹೇಗೆ ಪಾರಾಗುತ್ತೀರಿ ಎಂಬುದನ್ನು ಯೋಚಿಸಿ ಎಂದು ಕಾರ್ಣಿಕ ಹೇಳಿದರು.

ಮಳೆಗಾಗಿ ಶಿವ ಒಂಟಿಗಾಲಿನ ಮೇಲೆ ನಿಂತಿದ್ದಾನೆ

ಈ ವರ್ಷ ಮಳೆಗಾಲಕ್ಕಾಗಿ ಶಿವ ಒಂಟಿ ಕಾಲಿನ ಮೇಲೆ ನಿಂತಿದ್ದಾನೆ.  ಗಂಡ- ಹೆಂಡತಿ ಜಗಳದ ಮಧ್ಯೆ ಮಗು ಬಡವಾಯಿತು ಎಂಬ ಮಾತಿನಂತೆ, ಅವರ ಜಗಳದಲ್ಲಿ ಜನ, ಪ್ರಾಣಿ, ಪಕ್ಷಿಗಳಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ.  ಈ ಹಿಂದೆ ನೀರಿಗಾಗಿ ಯುದ್ಧವಾಗುತ್ತದೆ ಎಂದು ಹೇಳಿದ್ದೇನೆ.  ಈಗ ಸಣ್ಣದಾಗಿ ಪ್ರಾರಂಭವಾಗಿದೆ.  ಇನ್ನೋಂದು ದೆಸೆ ಬರುತ್ತದೆ.  ಆ ದೆಸೆ ಯಾರಾರರನ್ನು ಬೆಸೆಯುತ್ತದೋ, ಬೇರೆ ಮಾಡುತ್ತದೋ, ಅಗಲಿಸುತ್ತೋ ತಿಳಿದಿಲ್ಲ.  ಇದರಿಂದ ಪಾರಾಗಬೇಕೆಂದರೆ ಕತ್ನಳ್ಳಿ ಮಠಕ್ಕೆ ಸೇವೆ ಮಾಡಿದರೆ ನೀವು ಉಳಿಯುತ್ತೀರಿ ಎಂದು ಖಡಕ್ಕಾಗಿ ಅವರು ಎಚ್ಚರಿಕೆ ನೀಡಿದರು.

ಕತಕನಹಳ್ಳಿ ಶ್ರೀ ಶಿವಯ್ಯ ಸ್ವಾಮೀಜಿ ವಿಡಿಯೋ ಬೈಟ್:

ಲಾಟರಿ ವ್ಯವಹಾರ ಬೇಡ

ಲಾಟರಿಯಂತೆ ವ್ಯವಹಾರ ಮಾಡಬೇಡಿ.  ಲೆಕ್ಕದಿಂದ ವ್ಯವಹಾರ ಮಾಡಿ.  ಲೆಕ್ಕ, ಬುಕ್ಕ ರೊಕ್ಕ ಸರಿ ಇದ್ದರೆ ರೊಕ್ಕ ಎಲ್ಲೂ ಹಕ್ಕಲಾಗುವುದಿಲ್ಲ.  ಇಲ್ಲವೆಂದರೆ ಇಂದು ಅಮೃತ ಘಳಿಗೆ ಇದೆ.  ವಿಷದ ಘಳಿಗೆ ಇದೆ.  ದುಃಖದ ಘಳಿಗೆಯೂ ಇದೆ.  ಸುಖದ ಘಳಿಗೆ ಇದೆ.  ಮಾನದ ಘಳಿಗೆಯೂ ಇದೆ.  ಅವಮಾನದ ಘಳಿಗೆಯೂ ಇದೆ.  ಜಯದ ಘಳಿಗೆ ಇದೆ.  ಅವಮಾನದ ಘಳಿಗೆ ಇದೆ.  ಈ ವರ್ಷ ಎಲ್ಲವೂ ಮಿಶ್ರದ ಘಳಿಗೆ ಇದೆ.  ಸುಖಕ್ಕಿಂತಲೂ ದುಃಖವೇ ಹೆಚ್ಚಿದೆ.  ಯಾರಾರಿಗೆ ಏನು ಸಿಗುತ್ತೋ ಗೊತ್ತಿಲ್ಲ ಎಂದು ಅವರು ಹೇಳಿದರು.

ಬೆಳ್ಳಗಿರುವುದೆಲ್ಲ ಹಾಲಲ್ಲ, ಸಮರಸದಿಂದ ಬದುಕಿ

ನಿಮ್ಮಲ್ಲಿ ವಿರಸ ಇರಬಾರದು.  ತರಸ ಇರಬೇಕು.  ಸಮನ್ವಯ ಭಾವನೆ ಇರಬೇಕು. ಎಲ್ಲರೂ ನನ್ನವರು ಎಂಬ ಭಾವನೆ ಇಟ್ಟುಕೊಂಡು ಹೋಗಿ.  ಆದರೂ ಬೆಳ್ಳಗಿರುವುದು ಎಲ್ಲವೂ ಹಾಲು ಎನ್ನಲು ಹೋಗಬೇಡಿ.  ಹಾಲು ಬೆಳ್ಳಗಿದೆ.  ಕಳ್ಳಿ ಹಾಲೂ ಬೆಳ್ಳಗಿದೆ.  ಸುಣ್ಣದ ನೀರು ಬೆಳ್ಳಗೆ ಕಾಣಿಸುತ್ತದೆ.  ಹಾಲು ಬಿಟ್ಟರೆ ಉಳಿದ ಎರಡೂ ವಸ್ತುಗಳು ಹಾಲುಗಳಾಗುವುದಿಲ್ಲ.  ಹಾಲು ಹಾಲೇ.  ಸುಣ್ಣದ ನೀರು ಸುಣ್ಣದ ನೀರೇ.  ಕಳ್ಳಿ ಹಾಲು ಕಳ್ಳಿ ಹಾಲೇ.  ಅವುಗಳನ್ನು ನಂಬಲು ಹೋಗಬೇಡಿ ಎಂದು ಕಾರ್ಣಿಕರು ಭವಿಷ್ಯ ನುಡಿದರು.

ಪಂಚಮಹಾಭೂತಗಳ ಕೋಪ ಸ್ಪೋಟವಾಗಲಿದೆ

ಪಂಚ ಮಹಾಭೂತಗಳು ಯಾವ್ಯಾವ ಯಾವ್ಯಾವ ದಿಕ್ಕಿಗೆ ಕೋಪವಾಗಿವೆ ಗೊತ್ತಿಲ್ಲ.  ಯಾವ ದೇಶದ ಮೇಲೆ ಯಾರ ವಿರುದ್ಧ ತಮ್ಮ ಕೋಪ ತೀರಿಸಿಕೊಳ್ಳುತ್ತವೆ ಗೊತ್ತಿಲ್ಲ.  ಈ ಪಂಚ ಮಹಾಭೂತಗಳು ಶ್ರೀಗುರು ಚಕ್ರವರ್ತಿ ಸದಾಶಿವ ಸಿದ್ಧರಾಮೇಶ್ವರ ಆಶೀರ್ವಾದವಿದ್ದರೆ ನಿಮ್ಮ ಮೇಲೆ ಕೋಪ ಮಾಡಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು.

ರೋಗಗಳ ಬಗ್ಗೆ ಎಚ್ಚರ ಇರಲಿ

ರೋಗ-ರುಜೀನ, ಪ್ರಾಣಿ ಪಕ್ಷಿ, ಎಲ್ಲವೂಗಳ ಬಗ್ಗೆ ಜಾಗೃತಿ ಇರಲಿ.  ಕಾಡಿನಲ್ಲಿರುವ ಪ್ರಾಣಿ ನಾಡಿನಲ್ಲಿ, ನಾಡಿನಲ್ಲಿರುವ ಪ್ರಾಣಿ ಕಾಡಿನಲ್ಲಿರುತ್ತವೆ.  ಈ ವರ್ಷ ನೀವು ಪರೀಕ್ಷೆ ಮಾಡಿ.  ಹೇಗೆ ಉಳಿಯುತ್ತೀರಿ ಎಂಬುದನ್ನು ಮುಂದಿನ ವರ್ಷ ಬಂದು ಹೇಳಿ.  ಮಳೆ, ಬೆಳೆ, ಯಾವ ಬೆಳೆ ಎಂಬುದನ್ನು ಹೇಳಿದ್ದೇನೆ.  ಯಾರಾರಿಗೆ ಉಂಡಿ- ಕಡಬು, ಯಾರಾರಿಗೆ ಏನೇನು ಆಗುತ್ತದೆ ಎಂಬುದು ಗೊತ್ತಿಲ್ಲ.  ಚಮಕೇರಿಯಲ್ಲಿ ಫೈನಲ್ ಭವಿಷ್ಯ ಹೇಳುವೆ ಎಂದು ಶಿವಯ್ಯ ಸ್ವಾಮೀಜಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌