ಸ್ವೀಪ್ ಸಮಿತಿ ವತಿಯಿಂದ ವಿಜಯಪುರದಲ್ಲಿ ಮೇಣದ ಬತ್ತಿ ಬೆಳಗಿಸಿಕೊಂಡು ಜಾಗೃತಿ ಜಾಥಾ

ವಿಜಯಪುರ: ಮತದಾನ ಮಾಡಿ ದೇಶದ ಏಳಿಗೆಗೆ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ವಿಜಯಪುರ ಮಹಾನಗರ ಪಾಲಿಕೆ ಸಹಯೋಗದಲ್ಲಿ  ಲೋಕಸಭೆ ಚುನಾವಣೆ 2024ರ ಅಂಗವಾಗಿ ಮತದಾನ ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ ಮೇಣದ ಬತ್ತಿ ಬೆಳಗಿಸಿಕೊಂಡು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲರೂ ತಪ್ಪದೇ ಮತದಾನ ಮಾಡುವ ಜೊತೆಗೆ ನೆರೆಹೊರೆಯವರನ್ನು ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು.  ಪ್ರಜ್ಞಾವಂತ ನಾಗರೀಕರಾಗಿ ದೇಶದ ಏಳಿಗೆಗ ಮತದಾನ ಮಾಡುವುದನ್ನು ಮರೆಯಬಾರದು ಎಂದು ಹೇಳಿದರು.

ವಿಜಯಪುರದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮೇಣದ ಬತ್ತಿ ಬೆಳಗಿಸಿ ಮತದಾನ ಜಾಗೃತಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಸಹಾಯಕ  ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಅಶಾದ  ಉರ್   ರೆಹಮಾನ್ ಶರೀಫ್ ಮಾತನಾಡಿದರು.

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಈ ಮೆರವಣಿಗೆ ಗಾಂಧಿ ಚೌಕ್ ವರೆಗೆ ನಡೆಯಿತು.  ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ ಮತದಾರರಿಗೆ ಪ್ರತಿಜ್ಞಾವಿಧಿ ಭೋಧಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ. ಆರ್. ಮುಂಡರಗಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ. ಬಿ. ಅಲ್ಲಾಪೂರ, ವಿಜಯಪುರ ತಾ. ಪಂ. ಇಓ ಕೆ. ಹೊಂಗಯ್ಯ, , ತಾಲೂಕ ವೈದ್ಯಾಧಿಕಾರಿ ಹಿಟ್ನಳ್ಳಿ, ಬಸವರಾಜ ಜಗಳೂರ, ಜಿಲ್ಲಾ ಘಟಕದ ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಾಕ್ಷಿ ಹಿರೇಮಠ, ರಾಜೇಶ ಪವಾರ, ಸಹನಾ ಕುಡಿಗನೂರ, ಮಹಾನಗರ ಪಾಲಿಕೆಯ ಸಂಘಟನಾಧಿಕಾರಿ ಸಾವಿತ್ರಿ ತಿಪ್ಪಣ್ಣವರ, ಭಾರತೀಯ ಕೌಲ್ಗೆ, ಸಿ.ಆರ್‌.ಪಿಗಳಾದ   ಪ್ರಗತಿ ಕುಲಕರ್ಣಿ, ಪ್ರಿಯಾಂಕ ಪಾಟೀಲ, ಶ್ವೇತಾ ತೆಲಸಂಗ, ಮಮತಾ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಸ್ವ ಸಹಾಯ ಸಂಘಗಳ ಮಹಿಳೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌