ವಿಜಯಪುರ: ದೇಶದಲ್ಲಿ ಮೂರನೇ ಮತ್ತು ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದೆ.
ಏ. 12 ರಿಂದ ಏ. 19ರ ವರೆಗೆ 21 ಅಭ್ಯರ್ಥಿಗಳು ಒಟ್ಟು 35 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಸಂಸದ ರಮೇಶ ಜಿಗಜಿಣಗಿ(ಬಿಜೆಪಿ), ಪ್ರೊ. ರಾಜು ಆಲಗೂರ(ಕಾಂಗ್ರೆಸ್) ಸೇರಿದಂತೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಮತ್ತು ಪಕ್ಷಗಳ ಮಾಹಿತಿ ಇಲ್ಲಿದೆ.
- ರಮೇಶ ಜಿಗಜಿಣಗಿ- ಬಿಜೆಪಿ
- ಹಣಮಂತರಾವ ಆಲಗೂರ- ಕಾಂಗ್ರೆಸ್
- ಕಲ್ಲಪ್ಪ ತೊರವಿ- ಬಿ.ಎಸ್ಪಿ
- ನಾಗಜ್ಯೋತಿ ಬಿ. ಎನ್.- (ಎಸ್.ಯು.ಸಿಐ)
- ಬಾಬು ರಾಜೇಂದ್ರ ನಾಯಕ- ಬಿಜೆಪಿ ಮತ್ತು ಪಕ್ಷೇತರ(ಎರಡು ಪ್ರತ್ಯೇಕ ನಾಮಪತ್ರ ಸಲ್ಲಿಕೆ)
- ಗಣಪತಿ ಲಾಲಸಿಂಗ್ ರಾಠೋಡ- ಕೆ.ಆರ್.ಎಸ್.
- ಕವಿತಾ ದೀಪಕ್ ಉರ್ಫ ಶ್ರೀ ಕಟಕದೊಂಡ- ರಾಣಿ ಚೆನ್ನಮ್ಮ ಪಾರ್ಟಿ
- ದೀಪಕ ಉರ್ಫ ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ- ಹಿಂದೂಸ್ತಾನ ಜನತಾ ಪಾರ್ಟಿ(ಜೆಡಿಎಸ್)
- ಜಿತೇಂದ್ರ ಅಶೋಕ ಕಾಂಬಳೆ- ಆರ್.ಪಿ.ಐ
- ಮಲ್ಲು ಹಾದಿಮನಿ- ಬಿ.ಎಸ್ಪಿ
- ಪುಂಡಲಿಕ ರಾಠೋಡ- ಉತ್ತಮ ಪ್ರಜಾಕೀಯ ಪಾರ್ಟಿ
- ಶಿವರಾಜ ಮಹಾದೇವ ಜಾಧವ- ಅಖಿಲ ಭಾರತ ಹಿಂದೂ ಮಹಾಸಭಾ
- ರಾಜಕುಮಾರ ಅಪ್ಪಣ್ಣಾ ಹೊನ್ನಕಟ್ಟಿ- ರಾಷ್ಟ್ರೀಯ ಸಮಾಜ ಪಕ್ಷ
- ಕುಲಪ್ಪ ಭೀ. ಚವ್ಹಾಣ- ಭಾರತೀಯ ಜವಾನ ಕಿಸಾನ್ ಪಾರ್ಟಿ
- ತಾರಾಬಾಯಿ ಭೋವಿ- ಭಾರತೀಯ ಜನ ಸಮ್ರಾಟ್ ಪಾರ್ಟಿ
- ಸೋಮಶೇಖರ ಭಾವಿಕಟ್ಟಿ- ಇಂಡಿಯನ್ ಲೇಬರ್ ಪಾರ್ಟಿ(ಅಂಬೇಡ್ಕರ ಫುಲೆ)
- ರಾಜು ಯಲ್ಲಪ್ಪ ಪವಾರ- ನ್ಯಾಷನಲ್ ಲೋಕ ತಾಂತ್ರಿಕ ಪಾರ್ಟಿ
- ರಾಮಜಿ ಹರಿಜನ ಉರ್ಫ ಬುದ್ದಪ್ರೀಯ- ನಕಿ ಭಾರತೀಯ ಏಕತಾ ಪಾರ್ಟಿ
- ಸಂಗಪ್ಪ ಹುಣಸಿಕಟ್ಟಿ- ಪಕ್ಷೇತರ
- ಸಚೀನ ಲಮಾಣಿ- ಪಕ್ಷೇತರ
- ಸಂಗಪ್ಪ ಚಂದು ಉರ್ಫ ಚಂದಪ್ಪ ಲಮಾಣಿ- ಪಕ್ಷೇತರ