Video News ಸಂಸದ ರಮೇಶ ಜಿಗಜಿಣಗಿ ಎರಡನೇ ಬಾರಿ ನಾಮಪತ್ರ ಸಲ್ಲಿಕೆ- ಎರಡು ಸೆಟ್ ಗಳಲ್ಲಿ ಉಮೇದುವಾರಿಕೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ 2ನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಜಿಲ್ಲಾ ಚುನಾವಣಾಧಿಕಾರಿ ಟಿ. ಭೂಬಾಲನ್ ಅವರಿಗೆ ಎರಡು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಸಿದರು.

ಮೊದಲ ಸೆಟ್ ಸಲ್ಲಿಸುವಾಗ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ನ್ಯಾಯವಾದಿ ಸಂಗಮೇಶ ಹೌದೆ ಉಪಸ್ಥಿತರಿದ್ದರು.

ಸಂಸದ ರಮೇಶ ಜಿಗಜಿಣಗಿ ವಿಜಯಪುರದಲ್ಲಿ ಎರಡನೇ ಸೆಟ್ ನಾಮಪತ್ರ ಸಲ್ಲಿಕೆ ವೇಳೆ ಕಾರ್ಪೋರೇಟರ್ ರಾಜು ಮಗಿಮಠ, ಸುನಂದಾ ಕುಮಸಿ, ಪದ್ಮಾವತಿ ಗುಡಿ, ಪ್ರಭಾವತಿ ಪಾಟೀಲ ಉಪಸ್ಥಿತರಿದ್ದರು.

ವಿಡಿಯೋ ಸುದ್ದಿ ನೋಡಿ:

ಎರಡನೇ ಸೆಟ್ ಸಲ್ಲಿಸುವಾಗ ಕಾರ್ಪೋರೇಟರ್ ರಾಜು ಮಗಿಮಠ, ಸುನಂದಾ ಕುಮಸಿ, ಮುಖಂಡರಾದ ಪದ್ಮಾವತಿ ಗುಡಿ, ಪ್ರಭಾವತಿ ಪಾಟೀಲ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌