ವಿಜಯಪುರ: ಮೂರನೇ ಹಂತದಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆಯಲಿರುವ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಬಿಜಾಪುರ(ಪ. ಜಾ) ಲೋಕಸಭೆ ಮತಕ್ಷೇತ್ರದಲ್ಲಿ ಕೊನೆಯ ದಿನ ಒಂಬತ್ತು ಅಭ್ಯರ್ಥಿಗಳು ಒಟ್ಟು 10 ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಆರಂಭವಾದ ಏಪ್ರಿಲ್ 12 ರಿಂದ ಕೊನೆಯ ದಿನ ಏಪ್ರಿಲ್ 19ರ ವರೆಗೆ ಒಟ್ಟು 21 ಅಭ್ಯರ್ಥಿಗಳು ಒಟ್ಟು 35 ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಎರಡು, ಎಸ್ ಯು ಸಿ ಐ ಪಕ್ಷದ ಅಭ್ಯರ್ಥಿ ನಾಗಜ್ಯೋತಿ ಬಿ.ಎನ್ ಅವರು ಒಂದು, ಭಾರತೀಯ ಜವಾನ್ ಕಿಸಾನ್ ಪಕ್ಷದ ಅಭ್ಯರ್ಥಿ ಕುಲಪ್ಪಾ ಚವ್ಹಾಣ ಒಂದು, ಭಾರತೀಯ ಜನ ಸಾಮ್ರಾಟ್ ಪಕ್ಷದ ಆಭ್ಯರ್ಥಿ ತಾರಾಬಾಯಿ ಭೋವಿ ಒಂದು, ಪಕ್ಷೇತರ ಅಭ್ಯರ್ಥಿ ಸೋಮಶೇಖರ ಭಾವಿಕಟ್ಟಿ, ನ್ಯಾಷನಲ್ ಲೋಕತಂತ್ರ ಪಕ್ಷದ ಅಭ್ಯರ್ಥಿ ರಾಜು ಪವಾರ, ನಕ್ಕಿ ಭಾರತೀಯ ಏಕತಾ ಪಕ್ಷದ ಅಭ್ಯರ್ಥಿ ರಾಮಾಜಿ ಯಮನಪ್ಪ ಹರಿಜನ ಉರ್ಫ ಬುಧ್ಧಪ್ರಿಯ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕಲ್ಲಪ್ಪ ತೊರವಿ, ಹಾಗೂ ಪಕ್ಷೇತರ ಅಭ್ಯರ್ಥಿ ಚಂದು ಲಮಾಣಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ .
ಏಪ್ರಿಲ್ 12 ರಿಂದ 19 ವರೆಗೆ ನಾಮಪತ್ರ ಸ್ವೀಕಾರ ದಿನದಿಂದ ಕೊನೆಯ ದಿನವರೆಗೆ 21 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿವೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಮೂಲಗಳು ಮಾಹಿತಿ ನೀಡಿವೆ.