ಬಿ.ಎಲ್.ಡಿ.ಇ ತಾಂತ್ರಿಕ ಮಹಾವಿದ್ಯಾಲಯದ 51 ವಿದ್ಯಾರ್ಥಿಗಳಿಗೆ ಕೆ.ಎಸ್.ಸಿ.ಎಸ್.ಟಿ ವತಿಯಿಂದ ಪ್ರಾತ್ಯಕ್ಷಿಕೆಗೆ ಅನುದಾನ

ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ 51 ವಿದ್ಯಾರ್ಥಿಗಳು ಕರ್ನಾಟಕ ಸ್ಟೆಟ್‌ ಕೌನ್ಸಿಲ್‌ ಫಾರ್‌ ಸೈನ್ಸ್‌ ಆಂಡ್‌ಟೆಕ್ನಾಲಜಿ(ಕೆ.ಎಸ್.ಸಿ.ಎಸ್.ಟಿ)ಯ 2023-24ನೇ ಆರ್ಥಿಕ ವರ್ಷದ ಸೃಜನಶೀಲ, ನವೀನ ಯೋಜನೆಗಳ 14 ಅತ್ತುತಮ ಪ್ರಾತ್ಯಕ್ಷಿಕೆಗಳು ಆಯ್ಕೆಯಾಗಿವೆ.

51 ವಿದ್ಯಾರ್ಥಿಗಳಿಗೆ ರೂ.69000 ಧನ ಸಹಾಯ ಸಿಗಲಿದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿರುವ ಸೂಪ್ತ ಪ್ರತಿಭೆಯನ್ನು ಮತ್ತು ಸಂಶೋಧನೆ ಯೋಜನೆಗಳನ್ನು ರೂಪಿಸಲು ಪ್ರೋತ್ಸಾಹ ಸಿಗಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌