ಮೋದಿ ವಿಶ್ವಗುರುವಾಗಿದ್ದರೆ ಬೇರೆ ಪಾರ್ಟಿ ಜೊತೆ ಮೈತ್ರಿ ಯಾಕೆ ಬೇಕು? ಜನಾರ್ಧನ ರೆಡ್ಡಿ ಯಾಕೆ ಮರು ಸೇರ್ಪಡೆಯಾಗಬೇಕು- ಸಚಿವ ಸಂತೋಷ ಲಾಡ ಪ್ರಶ್ನೆ

ವಿಜಯಪುರ: ಮೋದಿ ವಿಶ್ವಗುರುವಾಗಿದ್ದರೆ ಬೇರೆ ಪಕ್ಷಗಳೊಂದಿಗೆ ಯಾಕೆ ಮೈತ್ರಿ ಮಾಡಿಕೊಳ್ಳಬೇಕು? ಜನಾರ್ಧನ ರೆಡ್ಡಿಯನ್ನು ಯಾಕೆ ಬಿಜೆಪಿಗೆ ಮರಳಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಚಿವ ಸಂತೋಷ ಲಾಡ ಪ್ರಶ್ನಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸುಳ್ಳು ಪ್ರಚಾರಗಳ ಮೂಲಕ ಮತಯಾಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಅವರು ವಿಶ್ವ ಗುರು ಅಂತಾರೆ.  ಹಾಗಿದ್ದರೆ ಬಿಜೆಪಿಯವರು ಜೆಡಿಎಸ್ ಜೊತೆ ಏಕೆ ಮೈತ್ರಿ ಮಾಡಿಕೊಂಡರು? ಜನಾರ್ಧನ ರೆಡ್ಡಿಯನ್ನು ಯಾಕೆ ಬಿಜೆಪಿಗೆ ವಾಪಸ್ ಸೇರಿಸಿಕೊಂಡರು? ಅವರಿಗೆ ಸೋಲುವ ಭೀತಿ ಇದೆ.  ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ 18 ರಿಂದ 20 ಸೀಟ್ ಗೆಲ್ಲಲಿದೆ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 18 ರಿಂದ 20 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ.  ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಾನು ಕೇಳಿದ ಪ್ರಶ್ನೆಗಳಿಗೆ ಈವರೆಗೂ ಉತ್ತರ ನೀಡಿಲ್ಲ.  ಉತ್ತರ ಹುಡುಕುತ್ತಿದ್ದಾರೆ.  ಇಂದಿರಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪ್ರಧಾನಿಗಳು ಮಾಡಿರುವ ಜನಪರ ಯೋಜನೆಗಳಿಂದಾಗಿ ಬಡವರಿಗೆ ತಿಂಗಳಿಗೆ ರೂ. 8 ರಿಂದ ರೂ. 10 ಸಾವಿರ ರೂಪಾಯಿ ಹಣ ಹೋಗುತ್ತಿದೆ.  ಜನರು ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಪರ ನಿಲ್ಲುತ್ತಾರೆ ಎಂದು ಸಚಿವರು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ

ಪತ್ರಕರ್ತೆ ಗೌರಿ ಲಂಕೇಶ, ಸಾಹಿತಿ ಎಂ. ಎಂ. ಕಲಬುರ್ಗಿ ಕೊಲೆ ಪ್ರಕರಣ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗೌರಿ ಹತ್ಯೆಯಾದಾಗ ಬಿಜೆಪಿ ಸ್ಟ್ಯಾಂಡ್ ಏನಿತ್ತು? ಯಾವುದಾದರೂ ಘಟನೆ ನಡೆದಾಗ ರಾಜಕೀಯ ಮಾಡುತ್ತಾರೆ.  ಹುಬ್ಬಳ್ಳಿ ಪ್ರಕರಣದಲ್ಲಿ ಈಗಾಗಲೇ ಆಕ್ಷನ್ ಆಗಿದೆ.  ಆರೋಪಿ ಅರೆಸ್ಟ್ ಆಗಿದ್ದಾನೆ.  ತನಿಖೆ ನಡೆದಿದೆ.  ಈ ಕುರತು ಜಾಸ್ತಿ ಪ್ರತಿಕ್ರಿಯಿಸುವುದಿಲ್ಲ ಎಂದು ಸಚಿವ ಸಂತೋಷ ಲಾಡ ಹೇಳಿದರು.

ಮೋದಿ ಹೋದಲೆಲ್ಲ ಜೈ ಶ್ರೀರಾಮ ಅಂತಾರೆ.  ಎಲ್ಲಡೆ ಟಾರ್ಚ್ ಹಾಕಿ ಜೈ ಶ್ರೀರಾಮ, ಜೈ ಶ್ರೀರಾಮ ಅಂತಾರೆಯ ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ವ? ಮೋದಿ ಅವರು ವಿಶ್ವಗುರು ಆಗಿದ್ದರೆ ಪ್ರಚಾರ ಏಕೆ ಮಾಡಬೇಕಿತ್ತು? ಎಂದು ಅವರು ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ಸಚಿವ ಸಂತೋಷ ಲಾಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೋದಿ ಪರ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಬ್ಯಾಟಿಂಗ್ ವಿಚಾರ

ಕಾಂಗ್ರಿಸ್ಸಿನವರು ಖಾಲಿಯಾಗಿ ನೀಡಿದ್ದ ಚೆಂಬನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನಿಡೀದ ಅವರು, ಎಚ್. ಡಿ. ದೇವೇಗೌಡ ಅವರ ವಿರುದ್ಧ ಮಾತನಾಡಲ್ಲ.  ಯಾರ ಹೇಳಿಕೆಗಳಿಗೂ ಪ್ರತಿಕ್ರಿಯೆ ನೀಡಲ್ಲ.  ಬಿಜೆಪಿ ಸೇರಿದಾಗ ಬಿಜೆಪಿ ಪರ ಮಾತಾಡುತ್ತಾರೆ ಎಂದು ಹೇಳಿದರು.

ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ

ಬಿಜೆಪಿ ಸುಳ್ಳು ಭರವಸೆಗಳಿಂದ ಜನ ಬೇಸತ್ತಿದ್ದಾರೆ.  ಈ ಬಾರಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುವುದು ನಿಶ್ಚಿತವಾಗಿದೆ. ಈ ಸಲ ಜನರಿಗೆ ಬಿಜೆಪಿಯ ಸುಳ್ಳು ಭರವಸೆ ಅರಿವಾಗಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುವ ವಿಶ್ವಾಸವಿದೆ ಎಂದು ಸಂತೋಷ ಲಾಡ ಹೇಳಿದರು.

ಯತ್ನಾಳ ಸಾಹೇಬರು ಯುನಿವರ್ಸಲ್ ಗುರು, ಭಾರತದ ಎನಸೈಕ್ಲೋಪೀಡಿಯಾ

ದಿಂಗಾಲೇಶ್ವರ ಸ್ವಾಮೀಜಿ ಹಣಪಡೆದು ಚುನಾವಣೆಗೆ ನಿಂತಿದ್ದಾರೆ ಎಂದು ಶಾಸಕ ಯತ್ನಾಳ ಮಾಡಿರುವ ಆರೋಪದ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ಸಾಹೇಬರು ಯುನಿವರ್ಸಲ್ ಗುರು ಇದ್ದಂತೆ.  ಅವರು ಭಾರತದ ಎನಸೈಕ್ಲೋಪೀಡಿಯಾ.  ಹಾರಿಕೆ ಉತ್ತರ ಕೊಟ್ಟು ಹೋಗುತ್ತಾರೆ ಎಂದು ಸಚಿವ ಸಂತೋಶ ಲಾಡ ವಾಗ್ದಾಳಿ ನಡೆಸಿದರು.

ಯತ್ನಾಳ್ ಸಾಹೇಬರು ಯುನಿವರ್ಸಲ್ ಗುರು ಇದ್ದಂತೆ.  ಅವರು ಹಾರಿಕೆ ಉತ್ತರ ಕೊಟ್ಟು ಹೋಗುತ್ತಾರೆ.  ನನ್ನ ಬಗ್ಗೆ ಏನಾದರೂ ಮಾತನಾಡುತ್ತಾರೆ.  ಯಾರು ಯಾವ ನೋಟು ಕೊಟ್ಟಿದ್ದಾರೆ? ಎಷ್ಟು ಕೊಟ್ಟಿದ್ದಾರೆ ಎಂಬುದನ್ನು ಯತ್ನಾಳ ಅವರನ್ನು ಕೇಳಬೇಕು.  ಯತ್ನಾಳ ಅವರ ಐನಸ್ಟೈನ್ ಥೇರಿ ನಮಗೆ ಗೊತ್ತಾಗಲ್ಲ.  ಅವರ ಹೇಳಿಕೆ ಬಗ್ಗೆ ನನ್ನನ್ನು ಯಾಕೆ ಕೇಳುತ್ತೀರಿ? ಅವರನ್ನೆ ಕೇಳಿ ಎಂದು ಹೇಳಿಕೆ ಸಚಿವರು ತಿಳಿಸಿದರು.

ಯತ್ನಾಳ ಸಾಹೇಬರು ಬಂದು ಹುಬ್ಬಳ್ಳಿಯಲ್ಲಿ ಮಾತನಾಡಿದರು. ಯತ್ನಾಳ ಸಾಹೇಬರು ಗುಜರಾತಿಗೆ ಹೋಗಬೇಕಿತ್ತು.  ಗುಜರಾತಿನಲ್ಲಿ ದಿನಕ್ಕೆ ಆರು ಹೆಣ್ಣು ಮಕ್ಕಳ ಮೇಲೆ ರೇಪ್ ಆಗುತ್ತಿದೆ.  ದೇಶದಲ್ಲಿ 13.13 ಲಕ್ಷ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ.  ಅದರ ಬಗ್ಗೆ ಏನು ಮಾತನಾಡುತ್ತಾರೆ? ಹುಬ್ಬಳ್ಳಿ ಘಟನೆ ನಡೆದಿರುವ ಬಗ್ಗೆ ಖಂಡಿಸುತ್ತೇನೆ.  ದೇಶದಲ್ಲಿ ಯಾರಿಗೂ ಈ ರೀತಿ ಆಗಬಾರದು. ನಿರಂಜನ್ ಹಿರೇಮಠ ಮಗಳು ನೇಹಾ ಹತ್ಯೆ ಆಗಿರೋದು ನನಗೆ ವೈಯಕ್ತಿಕವಾಗಿ ನೋವು ತಂದಿದೆ.  ಬಿಜೆಪಿಯವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ.  ನಾವು ರಾಜಕೀಯ ಪಕ್ಷವಾಗಿ ನಮಗೆ ಬೆಲೆಯಿಲ್ಲವೇ? ನಮಗೆ ಕೆಲಸವಿಲ್ಲವೇ? ಎಂದು ಬಿಜೆಪಿ ಆರೋಪಕ್ಕೆ ಸಚಿವ ಸಂತೋಷ ಲಾಡ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಮನೆ ಹೆಣ್ಣು ಮಕ್ಕಳಿಗಾದರೇನು, ಸಂತೋಷ ಲಾಡ ಮನೆಯ ಹೆಣ್ಣುಮಕ್ಕಳಿಗಾದ್ರೇನು? ಆಯ್ತು ಯತ್ನಾಳ್ ಸಾಹೇಬರೇ ನಮ್ಮ ಹೆಣ್ಣು ಮಕ್ಕಳಿಗೆ, ನಮ್ಮ ಫ್ಯಾಮಿಲಿಗೆ ಏನಾದರೂ ಆದರೆ ನಿಮಗೆ ಅನುಕೂಲ ಆಗುತ್ತಿದ್ದರೆ, ಖುಷಿ ಆಗುತ್ತಿದ್ದರೆ ಆಗಲಿ ಎಂದು ಸಚಿವರು ಶಾಸಕ ಯತ್ನಾಳ ಹೇಳಿಕೆಗೆ ಕೈಮುಗಿದರು.

ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ ಮನೆಗೆ ಜೆ. ಪಿ. ನಡ್ಡಾ ಭೇಟಿ ವಿಚಾರ

ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ ಅವರ ಮನೆಗೆ ಬಿಜೆಪಿ ರಾಷ್ಟ್ರ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿ ನೀಡುತ್ತಿದ್ದಾರೆ.  ಆದರೆ, ಕಾಂಗ್ರೆಸ್ ಕಾರ್ಪೋರೇಟರ್ ಮಗಳಾಗಿದ್ದರೂ ಅವರ ಮನೆಗೆ ಸಿಎಂ ಡಿಸಿಎಂ ಸೌಜನ್ಯಕ್ಕಾದರೂ ಮಾತನಾಡಿಲ್ಲ ಎಂದು ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಆರೋಪ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರು ಭೇಟಿ ನೀಡಲಿ.  ಇದು ರಾಜಕೀಯ ಭೇಟಿಯಾಗಿದೆ ಅವರು ಪರೋಕ್ಷವಾಗಿ ಹೇಳಿದರು.

ಕೇಂದ್ರ ಸಚಿವರ ಬಳಿ ನೇಹಾ ಹಿರೇಮಠ ತಂದೆ ನ್ಯಾಯ ಕೇಳಿದ ವಿಚಾರ

ನಮಗೆ ನ್ಯಾಯ ಕೊಡಿಸಿ ಎಂದು ಸಂಸದ ಪ್ರಹ್ಲಾದ್ ಜೋಷಿ ಬಳಿ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಮನವಿ ಮಾಡಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.  ಕೋರ್ಟಿಗೆ ಹಾಜರು ಪಡಿಸಿದ್ದಾರೆ.  ಕಾನೂನು ಪ್ರಕಾರ ಏನು ಶಿಕ್ಷೆ ಆಗಬೇಕು ಆಗುತ್ತದೆ? ಎಲ್ಲರೂ ಬಂದು ಎನಕೌಂಟರ್ ಆಗಬೇಕು ಎಂದು ಹೇಳಿದ್ದಾರೆ.  ಕೇಂದ್ರದಲ್ಲಿ ಮೋದಿ ಇದ್ದಾರಲ್ಲ.  ಈ ನಿಟ್ಟಿನಲ್ಲಿ ಕಾನೂನು ರೂಪಿಸಲಿ.  ಐಪಿಸಿ ಕಾನೂನನ್ನು ಕೇಂದ್ರ ಸರಕಾರವೇ ಮಾಡಬೇಕು.  ಏನಕೌಂಟರ್ ಕಾನೂನು ಶೀಘ್ರವೇ ತೆಗೆದುಕೊಂಡು ಬನ್ನಿ ಎಂದು ಕೇಂದ್ರ ಸರಕಾರವನ್ನು ಅವರು ಆಗ್ರಹಿಸಿದರು.

ನೇಹಾ ಹಿರೇಮಠಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಆರೋಪ ವಿಚಾರ

ಹುಬ್ಬಳ್ಳಿಯಲ್ಲಿ ಕೊಲೆಯಾದ ಯುವತಿ ನೇಹಾ ಹಿರೇಮಠ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪದ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ ಲಾಡ ಅವರು, ಸರಕರ ಇದರಲ್ಲಿ ಸಪೋರ್ಟ್ ಮಾಡಿದರೆ ನಮಗೇನು ಲಾಭವಿಲ್ಲ.  ಸಿಎಂ ಸಿದ್ದರಾಮಯ್ಯ ಸಪೋರ್ಟ್ ಮಾಡಿತ್ತಿದ್ದಾರೆ ಅಂತ ಆರೋಪಿಸಿದ್ದು ಬಿಜೆಪಿಗರಿಗೆ ಸಾಮಾನ್ಯ ಜ್ಞಾನ ಇಲ್ಲ.  ಅದು ರಾಜಕೀಯವಾಗಿ ಲಾಭ ಆಗುತ್ತದೆ ಅಂತ ಬಿಜೆಪಿಯವರು ಸುಮ್ಮನೆ ಬಂದು ಮಾತನಾಡುತ್ತಿದ್ದಾರೆ.  ಹುಬ್ಬಳ್ಳಿಯಲ್ಲಿನ ನೇಹಾ ಹತ್ಯೆ ದೇಶಾದ್ಯಂತ ಸುದ್ದಿಯಾಗಿದೆ.  ಇಷ್ಟೆಲ್ಲಾ ಹೈಪ್ ಯಾಕೆ ಆಗಬೇಕು? ಇವತ್ತು ಇಂಡಿಯಾವರಿಗೂ ಈ ವಿಷಯ ಹೋಗಿದೆ.  ಮಂಗಳೂರಿನಲ್ಲೂ ಮರ್ಡರ್ ಆಗಿಲ್ವಾ? ನಾಲ್ಕು ಮರ್ಡರ್ ಆಯ್ತು.  ಅದು ಯಾಕೆ ದೊಡ್ಡ ಸುದ್ದಿ ಆಗಲಿಲ್ಲ? ಹಿಂದೂ ಹೆಣ್ಣುಮಕ್ಕಳಿಗೆ ಎಲ್ಲಿ ಏನಾದರೂ ಆಗಲಿ, ಅಲ್ಲಿ ಮುಸ್ಲಿಮರಿಂದ ಆಗಿತ್ತು ಅಂದರೆ ಬಿಜೆಪಿಗರು ಹಿಂದೂಪರ ಮಾತನಾಡುತ್ತಾರೆ.  ಹಿಂದೂಗಳಿಗೆ ಏನಾದರೂ ನಡೆಯುತ್ತೆ ಅಂತ ಬಿಜೆಪಿಯರು ವರ್ತಿಸುತ್ತಾರೆ.  ಬಿಜೆಪಿಯವರು ಬೇರೆ ಕಡೆಗೆ ಮುಸ್ಲಿಮರಿಗೆ ಆದಾಗ ಯಾಕೆ ಹೋಗಲ್ಲ ಅಂತ ಅವರನ್ನೇ ಕೇಳಿ.  ಎಲ್ಲರನ್ನೂ ಸಮಾನವಾಗಿ ನೋಡಬೇಕು.  ಯಾವುದೇ ಘಟನೆಯಾದರೂ ಎಲ್ಲರನ್ನೂ ಸಮಾನವಾಗಿ ಕಾಣಬೇಕು.  ಸುಮ್ಮನೆ ಈಗ ಬರೋದು ಕೂಗಾಡುವದು, ಹೋಗೋದು, ಆಮೇಲೆ ಯಾರು ಅವರ ಮನೆಗೆ ಹೋಗ್ತಾರೆ.  ಇಂಥ ಎಷ್ಟೋ ಪ್ರಕರಣಗಳ್ಲಲಿ ನಾವು ನೋಡಿದ್ದೇವೆ.  ಮೈಲೇಜ್ ಗಾಗಿ ಬಿಜೆಪಿಯವರು ಮಾತಾಡುತ್ತಿರೋದು ನಾವು ನೋಡಿಲ್ಲವಾ?

ಹತ್ಯೆ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ರಾಜಕಾರಣ ಮಧ್ಯೆ ಜನರಿಗೆ ತೊಂದರೆಯಾಗುತ್ತುದೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಸಚಿವರು, ಜನರು ಸಫರ್ ಆಗುವುದಿಲ್ಲ.  ರಾಜಕೀಯವಾಗಿ ಯಾರು ಬಳಸಿಕೊಂಡಿದ್ದಾರೆ ಎಂಬುದನ್ನು ನೀವೇ ಹೇಳಿ.  ನಾನು ಈಗ ಉಲ್ಟಾ ಹೇಳಬೇಕಲ್ವಾ? ನೀವು ಮಾಧ್ಯಮದವರು ಯಾಕೆ ಎಲ್ಲದನ್ನೂ ಫುಲ್ ಸ್ಟಾಪ್ ಯಾಕೆ ಮೇಲೆ ಒಯ್ಯಲ್ಲ? ಎಂದು ಅವರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌