ಕಿತ್ತೂರ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಎಲ್ಲ 12 ಸ್ಥಾನಗಳನ್ನು ಗೆಲ್ಲಲಿದೆ- ಎಚ್. ಕೆ. ಪಾಟೀಲ

ವಿಜಯಪುರ: ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಎಲ್ಲ 12 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಕಿತ್ತೂರು ಕರ್ನಾಟಕದ ಏಳು ಮತ್ತು ಕಲ್ಯಾಣ ಕರ್ನಾಟಕದ 5 ಸೇರಿದಂತೆ ಎಲ್ಲ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ.  ಪ್ರಧಾನಿ ನರೇಂದ್ರ ಮೋದಿ ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ಮಾತನಾಡುವ ಬದಲು ಯಾವುದೋ ಒಂದು ಮುನ್ಸಿಪಾಲಿಟಿ ಚುನಾವಣೆ ಪ್ರಚಾರ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ.  ಕಾಂಗ್ರೆಸ್ಸಿನ ಕಾರ್ಯಕ್ರಮಗಳು ಮತ್ತು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಟೀಕಿಸುವ ಶೈಲಿ ಸರಿಯಿಲ್ಲ.  ನಮ್ಮ ಕಾರ್ಯಕ್ರಮಗಳು ದೇಶವನ್ನು ಹಾಳು ಮಾಡುತ್ತವೆ.  ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿರುವುದು ಅವರಿಗೆ ವ್ಯಕ್ತಿವ್ವಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನು ಘೋಷಮೆ ಮಾಡಿದಾಗ ಅದನ್ನು ನಿಭಾಯಿಸಲು ಆಗುವುದಿಲ್ಲ ಎಂದು ಹೇಳಿದ್ದರು.  ಆದರೆ, ನಾವು ಅಧಿಕಾರಕ್ಕೆ ಬಂದು ಕೇವಲ 10 ತಿಂಗಳಲ್ಲಿ ಎಲ್ಲ ಯೋಜನೆಗಳನ್ನು ಜಾರಿ ಮಾಡಿ ಶೇ. 99ರಷ್ಟು ಯಶಸ್ವಿ ಮಾಡಿದ್ದೇವೆ.  ಅಲ್ಲದೆ ರೂ. 30 ಲಕ್ಷ ಕೋ. ಒಂದು ಬಜೆಟ್ ಕೂಡ ಕೊಟ್ಟಿದ್ದೇವೆ.  ಆದರೆ, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾದಾಗ ಎನ್.ಡಿ.ಆರ್.ಎಫ್ ನಿಯಮಗಳ ಪ್ರಕಾರ ಒಂದು ಪೈಸೆ ಕೂಡ ಪರಿಹಾರ ನೀಡಲಿಲ್ಲ.  ಅವರು ಹಣ ನೀಡಿದ್ದರೆ ಇಂದು ಬರಪೀಡಿತ ಕುಟುಂಬಗಳಿಗೆ ತಲಾ ರೂ. 1300 ಪರಿಹಾರ ಕೊಡಬಹುದಿತ್ತು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ 1.10 ಕೋಟಿ ಬಡ ಕುಟುಂಬಗಳನನು ಬಡತನ ರೇಖೆಯಿಂದ ಮೇಲೆ ಎತ್ತಿದ್ದೇವೆ.  ದೇಶದಲ್ಲಿಯೇ ಈ ರೀತಿ ಉತ್ತಮ ಕಾರ್ಯಕ್ರಮವನ್ನು ಯಾರೂ ನೀಡಿಲ್ಲ.  ನಮ್ಮ ಗ್ಯಾರೆಂಟಿ ಯೋಜನೆಗಳಲ್ಲಿ ಯಾವುದೇ ಶೋಷಣೆ, ಭ್ರಷ್ಟಾಚಾರ ಇಲ್ಲ.  ಯೋಜನೆಯ ಲಾಭ ನೇರವಾಗಿ ಫಲನಾನುಭವಿಗಳಿಗೆ ತಲುಪತ್ತಿದೆ.  ಅಲ್ಲದೇ, ನ್ಯಾಯಾಲಯದಲ್ಲಿ ದಾಖಲಾಗಿರುವ ಬಡವರ ಕೇಸುಗಳನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲು ಸಿವಿಲ್ ಪ್ರೊಸಿಜರ್ ಕೋಡ್ ಕಾಯಿದೆಗೆ ತಿದ್ದುಪಡಿ ತಂದಿದ್ದೇವೆ ಎಂದು ಅವರು ತಿಳಿಸಿದರು.

ಎಲೆಕ್ಟ್ರಾಲ್ ಬಾಂಡ್ ಮೂಲಕ ಹಣ ಸುಲಿಗೆ ಮಾಡಿದಂತಾಗಿದೆ.  ಭೂಗದ ಲೋಕದ ಡಾನ್ ಗಳು ಮತ್ತು ರೌಡಿಗಳು ಹಣ ಸುಲಿಗೆ ಮಾಡುವುದಕ್ಕೂ ಇದಕ್ಕೂ ಅಷ್ಟೋಂದು ವ್ಯತ್ಯಾಸವಿಲ್ಲ.  ಬಿಜೆಪಿಯವರು ರೂ. 16600 ಕೋ. ಹಣ ಸಂಗ್ರಹ ಮಾಡಿದ್ದಾರೆ. ಐಟಿ, ಇಡಿ, ಸಿಬಿಐ ಧಾಳಿಗೆ ಒಳಗಾದವರು ಎಲೆಕ್ಟ್ರಾಲ್ ಬಾಂಡ್ ಖರೀದಿಸಿದ್ದಾರೆ.  ಹಣ ಕೊಟ್ಟ ತಕ್ಷಣ ಇಡಿ, ಸಿಬಿಐ ಕೇಸ್ ಗಳು ಕ್ಲೋಸ್ ಆಗುತ್ತವೆ ಎಂದರೆ ಎನು ಅರ್ಥ? ಇದನ್ನು ಸುಪ್ರೀಂಕರ‍್ಟ್ ಗಂಭೀರವಾಗಿ ಪರಿಗಣಿಸಿದೆ, ಹಾಗೆಯೇ ಚುನಾವಣಾ ಆಯೋಗ ಕೂಡ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಚಂಬು ಕೊಟ್ಟಿದೆ ಎಂದು ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚಂಬು ಯಾರು ಕೊಟ್ಟಿದ್ದಾರೆ ಎಂಬುದನ್ನು ನಾವು ಅಂಕಿ ಸಂಖ್ಯೆಗಳ ಸಮೇತ ಹೇಳಿದ್ದೇವೆ.  ಬರ ಪರಿಹಾರ ನೀಡುವಲ್ಲಿ ಯಾರು ಚಂಬು ಕೊಟ್ಟಿದ್ದಾರೆ ಎಂದು ಅವರು ಪ್ರಶ್ನಸಿದರು.

ಕೃಷ್ಣಾ ಕಣಿವೆಯ ನೀರು ಬಳಕೆ ವಿಚಾರವಾಗಿ ಮಾಜಿನ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೃಷ್ಣಾ ನದಿ ನೀರು ಕೃಷ್ಣಾ ಬೇಸ್ ನವರಿಗೆ ಕೊಡಬೇಕು.  ಈ ಭಾಗಕ್ಕೆ ಬಚಾವತ್ ಆಯೋಗದ ಪ್ರಕಾರ 734 ಟಿಎಂಸಿ ನೀರು ಬಂದಿದ್ದರೂ ಐದು ಟಿಎಂಸಿ ಮದ್ರಾಸ್ ಭಾಗಕ್ಕೆ ಕೊಡುತ್ತಿ್ದೇವೆ.  ಕುಡಿಯುವ ನೀರಿಗೆ ಬೇಕಾದರೆ ಕೃಷ್ಣಾ ಕಣಿವೆ ಜನ ಸಂತೋಷದಿಂದ ಕೊಡುತ್ತಾರೆ.  ನೀರಾವರಿಗೆ ಇಲ್ಲಿಂದ ನೀರು ಒಯ್ಯುತ್ತೇವೆ ಎಂದು ಅಲ್ಲಿನ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವೀಕ್ಷಕ ಡಾ. ಸೈಯದ ನೂರುದ್ದೀನ್, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ, ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌