ವಿಜಯಪುರ: ಪರಿಶಿಷ್ಟ ಜಾತಿ ಮೀಸಲು ಲೋಕಸಭೆ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಲೆಕ್ಕಪತ್ರವನ್ನು ಜನಪ್ರತಿನಿಧಿಗಳ ಕಾಯ್ದೆ 1951 ರ ಕಲಂ 77(1)ರ ಪ್ರಕಾರ ವೆಚ್ಚ ವೀಕ್ಷಕರು ತಪಾಸಣೆ ನಡೆಸಲಿದ್ದಾರೆ.
ಏಪ್ರೀಲ್ 26ರಂದು ಮೊದಲ ಮತ್ತು ಮೇ 1ರಂದು 2ನೇ ಹಾಗೂ ಮೇ 5 ರಂದು ಬೆಳಿಗ್ಗೆ 11 ಗಂಟೆಯಿಂದ 3ನೇ ತಪಾಸಣೆ ಮಾಡಲಾಗುತ್ತಿದೆ.
ಈ ನಿಗದಿತ ದಿನಗಳಂದು ಅಭ್ಯರ್ಥಿಗಳು ತಮ್ಮ ಚುನಾವಣೆ ಏಜೆಂಟರುಗಳ ಮೂಲಕ ಬಿಳಿ ಬಣ್ಣದ ದೈನಂದಿನ ಖರ್ಚು ವೆಚ್ಚಗಳ ಪುಸ್ತಕ ಭಾಗ-ಎ, ಗುಲಾಬಿ ಬಣ್ಣದ ನಗದು ಪುಸ್ತಕ ಭಾಗ-ಬಿ ಮತ್ತು ಹಳದಿ ಬಣ್ಣದ ಬ್ಯಾಂಕ್ ನಗದು ಪುಸ್ತಕ, ಭಾಗ-ಸಿ ಪುಸ್ತಕಗಳನ್ನು ಕಾಲೋಚಿತಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಅಭ್ಯರ್ಥಿಗಳ ಲೆಕ್ಕ ಪತ್ರಗಳ ತಪಾಸಣೆಗೆ ಅಭ್ಯರ್ಥಿಗಳು/ ಚುನಾವಣಾ ಏಜೆಂಟರುಗಳು ಕಡ್ಡಾಯವಾಗಿ ಹಾಜರಾಗವಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.