ಸಚಿವ ಎಂ. ಬಿ. ಪಾಟೀಲ ಅವರಿಂದ ಪ್ರೊ. ರಾಜು ಆಲಗೂರ ಪರ ಬಾಬಾನಗರ, ಬಿಜ್ಜರಗಿ, ಟಕ್ಕಳಕಿ, ಜಾಲಗೇರಿಯಲ್ಲಿ ಬಿರುಸಿನ ಪ್ರಚಾರ

ವಿಜಯಪುರ: ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಬಾಬಾನಗರ ಮತ್ತು ಬಿಜ್ಜರಗಿಯಲ್ಲಿ ಪ್ರಚಾರ ಕೈಗೊಂಡ ಅವರು, ಪ್ರಾಮಾಣಿಕವಾಗಿ ದುಡಿದವರಿಗೆ ನಿಯತ್ತಿನಿಂದ ಮತಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಬ್ರಿಟೀಷರು ಎಲ್ಲವನ್ನೂ ಲೂಟಿ ಮಾಡಿದ ದೇಶದಲ್ಲಿ ನೆಹರು ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆ ಸ್ಥಾಪಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ದೇಶದಲ್ಲಿ ಮೋದಿ ಅಧಿಕಾರಕ್ಕೆ ಬರುವ ಮುಂಚೆ ಸಾಕಷ್ಟು ಅಭಿವೃದ್ಧಿಯಾಗಿದೆ. ಇಂದಿರಾ ಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ರೇಷನ್ ಕಾರ್ಡು ನೀಡಿ, 20 ಅಂಶಗಳ ಕಾರ್ಯಕ್ರಮ ಜಾರಿ, ವೃದ್ದಾಪ್ಯ ವೇತನ, ಭೂಮಿ ಹಂಚಿಕೆ ಮಾಡಿದರು. ರಾಜೀವ ಗಾಂಧಿ ಸಂವಹನ ಮತ್ತು ಸಂಪರ್ಕ ಕ್ರಾಂತಿ ಮಾಡಿದರು. ಮನಮೋಹನಸಿಂಗ್ ಅವರು ರೈತರ 72000 ಕೋ. ಸಾಲಮನ್ನಾ ಮಾಡಿದರು. ಆದರೆ, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರ ಬದಲು ಉದ್ಯಮಿಗಳ ಸಾಲಮನ್ನಾ ಮಾಡಿದರು. ಈ ಅವಧಿಯಲ್ಲಿ ತೈಲ, ಆಹಾರ, ಅಡುಗೆ ಅನಿಲ ಬೆಲೆ, ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಹೆಚ್ಚಳವಾಗಿದೆ. ಕಪ್ಪು ಹಣ ವೈಟ್ ಮಾಡಲು ನೋಟ್ ಬ್ಯಾನ್ ಮಾಡಲಾಗಿತ್ತು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹೇಳಿರುವುದು ಇವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿದರು.

ನಾವು 2013-18 ರ ಅವಧಿಯಲ್ಲಿ ನೀರಾವರಿ ಮಾಡಿ ರೈತರ ಆದಾಯ ದ್ವಿಗುಣ ಮಾಡಿದ್ದೇವೆ. ಒಂದು ಕಾಲದಲ್ಲಿ 711 ಟ್ಯಾಂಕರ್ ನೀರು ಪೂರೈಕೆಯಾಗುತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಈಗ ನಾವು ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ಕೇವಲ 38 ಟ್ಯಾಂಕರ್ ಬಳಕೆಯಾಗುತ್ತಿವೆ. ಅದನ್ನು ಮುಂದಿನ ಆರು ತಿಂಗಳಲ್ಲಿ 10ಕ್ಕೆ ಇಳಿಸುತ್ತೇವೆ. ಈ ಭಾಗದಲ್ಲಿ ಬಾಕಿ ಉಳಿದಿರುವ ರೈತರ ಜಮೀನಿಗೆ ನೀರು ಹರಿಸಲು ಹೊಲಗಾಲುವೆ ಕಾಮಗಾರಿ ಪ್ರಾರಂಭವಾಗಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಬಸವನಾಡಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಿ ಕೆಲಸ ಮಾಡಲು ಪ್ರೊ. ರಾಜು ಆಲಗೂರ ಅವರನ್ನು ಆಯ್ಕೆ ಮಾಡುವ ಮೂಲಕ ಬದಲಾವಣೆ ತರಬೇಕು. ಪ್ರಾಮಾಣಿಕವಾಗಿ ದುಡಿದವರಿಗೆ ನಿಯತ್ತಿನಿಂದ ಮತಹಾಕಿ ಗೆಲ್ಲೆಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಯಲ್ಲಾಲಿಂಗ ಹೊನವಾಡ, ಸಿದ್ದನಗೌಡ ರುದ್ರಗೌಡರ, ಪಿ. ಆರ್. ಆಯತವಾಡ, ರಾಮನಿಂಗ ಎ. ಮಸಳಿ, ಆರ್. ಎನ್. ಬಿರಾದಾರ ಮಾತನಾಡಿ, ಸಚಿವ ಎಂ. ಬಿ. ಪಾಟೀಲರು ಬರಪೀಡಿತ ಪ್ರದೇಶವಾಗಿದ್ದ ನಮ್ಮ ಭಾಗಕ್ಕೆ ನೀರಾವರಿ ಮೂಲಕ ಶಾಶ್ವತ ಪರಿಹಾರ ಒದಗಿಸಿದ್ದಾರೆ. ಅವರು ಕರೆಗೆ ಓಗೊಟ್ಟು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಸರ್ವಜನರ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತಹಾಕಿ ಗೆಲ್ಲಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಕರೀಂ ಏಳಾಪುರ, ಪ್ರಕಾಶ ಆಯತವಾಡ, ಅಮೋಘಿ ಗೌಡನವರ, ಮುರಿಗೆಪ್ಪ ಅಕ್ಕಿ, ಈರನಗೌಡ ಬಿರಾದಾರ, ಕಾಸು ಡೆಂಗಿನವರ, ಅನೀಲ ಕಾಂಬಳೆ, ಅಶೋಕ ರುದ್ರಗೌಡರ, ಅಮಗೊಂಡಗೌಡ ಪಾಟೀಲ, ಜೆ. ಎಂ. ಪಾಟೀಲ, ಎಂ. ಎಸ್. ಲೋಣಿ, ಶಂಕರ ಚಿನಗುಂಡಿ, ಸುಭಾಷ ಪಾಟೀಲ, ಮಧುಗೊಂಡ ಬಿರಾದಾರ. ರಾಜು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ತಿಕೋಟಾ ತಾಲೂಕಿನ ಟಕ್ಕಳಕಿಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿದರು.

ಟಕ್ಕಳಕಿ, ಜಾಲಗೇರಿಯಲ್ಲಿಯೂ ಬಿರುಸಿನ ಪ್ರಚಾರ

ಟಕ್ಕಳಕಿ ಮತ್ತು ಜಾಲಗೇರಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಅವರು, ಕಾಂಗ್ರೆಸ್ ರೈತರು, ಬಡವರು, ಜನಸಾಮಾನ್ಯರಿಗೆ ಸ್ವಾವಲಂಬಿಯಾಗಿ ಬದುಕಲು ಅಭಿವೃದ್ಧಿ ಯೋಜನೆಗಳ ಮೂಲಕ ಶಕ್ತಿ ತುಂಬುತ್ತಿದೆ ಎಂದು  ಹೇಳಿದರು.

ಮುಂಬರುವ ದಿನಗಳಲ್ಲಿ ಟಕ್ಕಳಕಿ ಮತ್ತು ಜಾಲಗೇರಿ ಸುತ್ತಲಿನ ಉಳಿದ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಈ ಭಾಗದಲ್ಲಿ ಹೊಲಗಾಲುವೆ ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಈ ಭಾಗದ ರೈತರ ಜಮೀನಿಗ ನೀರು ಹರಿಸಲಾಗುವುದು. ಕಾಂಗ್ರೆಸ್ ರೈತರು, ಬಡವರು, ಜನಸಾಮಾನ್ಯರಿಗೆ ಸ್ವಾವಲಂಬಿಯಾಗಿ ಬದುಕಲು ಅಭಿವೃದ್ಧಿ ಯೋಜನೆಗಳ ಮೂಲಕ ಶಕ್ತಿ ತುಂಬುತ್ತಿದೆ. ಕಾಂಗ್ರೆಸ್ ಸ್ಚಾತಂತ್ರ್ಯದ ಹೋರಾಟಕ್ಕಾಗಿ ಉದಯಿಸಿದ ಪಕ್ಷ. ಆದರೆ, ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಅದು ಬ್ರಿಟೀಷರ ಪರವಾಗಿದ್ದ ಪಕ್ಷ. ಬಿಜೆಪಿಯವರು ಪ್ರಶ್ನೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳು ಉತ್ತರವಾಗಿವೆ. ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ? ಎಂದು ಕೇಳುವ ಬಿಜೆಪಿಗರಿಗೆ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕುವ ಮೂಲಕ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಅವರು ಕರೆ ನೀಡಿದರು.

ಸಂಸದ ರಮೇಶ ಜಿಗಜಿಣಗಿ ಏನೂ ಕೆಲಸ ಮಾಡಿಲ್ಲ. ಜಿಲ್ಲೆಯ ಪರ ಸಂಸತ್ತಿನಲ್ಲಿ ದ್ವನಿ ಎತ್ತಿಲ್ಲ. ಕಾಂಗ್ರೆಸ್ ತ್ಯಾಗ ಬಲಿದಾನಗಳ ಪಕ್ಷ. ಬಿಜೆಪಿ ಬ್ರಿಟೀಷರ ಪರವಾಗಿದ್ದ ಪಕ್ಷ. ಭಾರತದೊಂದಿಗೆ ಸ್ವಾತಂತ್ರ್ಯ ಹೊಂದಿರುವ ಅನೇಕ ರಾಷ್ಟ್ರಗಳು ಇನ್ನೂ ಅಭಿವೃದ್ಧಿಯಾಗದೇ ಆಹಾರ ಹೆಣಗಾಡುತ್ತಿವೆ. ಆದರೆ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರಿಂದ ಭಾರತ ಇಂದು ಸದೃಢವಾಗಿ ನಿಂತಿದೆ. ಮೋದಿ ಪೊಳ್ಳು ಭರವಸೆ ಬಗ್ಗೆ ಯುವಕರು ಸೇರಿದಂತೆ ಎಲ್ಲರಿಗೂ ಅರಿವಾಗಿದ್ದು, ಈ ಬಾರಿ ಜಾಗೃತರಾಗಿದ್ದಾರೆ. ಕಾಂಗ್ರೆಸ್ ಪರವಾಗಿದ್ದಾರೆ. ನ್ಯಾಯಕ್ಕಾಗಿ ಹೋರಾಟ ನಡೆಸಿದ ರೈತರ ಹೋರಾಟವನ್ನು ಲಾಠಿ ಬಳಸಿ ಜಲಫಿರಂಗಿ ಉಪಯೋಗಿಸಿ ಹತ್ತಿಕ್ಕಲಾಯಿತು. ಎಲೆಕ್ಟ್ರಾಲ್ ಬಾಂಡ್ ವಿಷಯದಲ್ಲಿ ಅವುಗಳನ್ನು ಖರೀದಿಸಿದವರ ಹೆಸರನ್ನು ಗೌಪ್ಯವಾಗಿಟ್ಟು ದೊಡ್ಡ ಹಗರಣ ಮಾಡಿದರು. ಸುಪ್ರೀಂ ಕೋರ್ಟಿನ ಆದೇಶದ ನಂತರ ಬಾಂಡ್ ಖರೀದಿಸಿದವರ ಹೆಸರುಗಳು ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕತೆಯ ಮುಖವಾಡ ಕಳಚಿದೆ. ಹೀಗಾಗಿ ಈಗ ಮೋದಿ ಭ್ರಷ್ಟಾಚಾರ ಪ್ರಸ್ತಾಪ ಬಿಟ್ಟು ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಅವರು ಹೇಳಿದರು.

ತಿಕೋಟಾ ತಾಲೂಕಿನ ಜಾಲಗೇರಿಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಗ್ಯಾರಂಟಿ ಯೋಜನೆಯ ಮಾದರಿ ಕಾರ್ಡುಗಳನ್ನು ವಿತರಿಸಿದರು.

ನಾವು 2013-18 ರ ಅವಧಿಯಲ್ಲಿ ನೀರಾವರಿ ಮಾಡಿ ರೈತರ ಆದಾಯ ದ್ವಿಗುಣ ಮಾಡಿದ್ದೇವೆ. ಒಂದು ಕಾಲದಲ್ಲಿ 711 ಟ್ಯಾಂಕರ್ ನೀರು ಪೂರೈಕೆಯಾಗುತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಈಗ ನಾವು ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ಕೇವಲ 38 ಟ್ಯಾಂಕರ್ ಬಳಕೆಯಾಗುತ್ತಿವೆ. ಅದನ್ನು ಮುಂದಿನ ಆರು ತಿಂಗಳಲ್ಲಿ 10ಕ್ಕೆ ಇಳಿಸುತ್ತೇವೆ. ಈ ಭಾಗದಲ್ಲಿ ಬಾಕಿ ಉಳಿದಿರುವ ರೈತರ ಜಮೀನಿಗೆ ನೀರು ಹರಿಸಲು ಹೊಲಗಾಲುವೆ ಕಾಮಗಾರಿ ಪ್ರಾರಂಭವಾಗಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಬಸವನಾಡಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಿ ಕೆಲಸ ಮಾಡಲು ಪ್ರೊ. ರಾಜು ಆಲಗೂರ ಅವರನ್ನು ಆಯ್ಕೆ ಮಾಡುವ ಮೂಲಕ ಬದಲಾವಣೆ ತರಬೇಕು. ಪ್ರಾಮಾಣಿಕವಾಗಿ ದುಡಿದವರಿಗೆ ನಿಯತ್ತಿನಿಂದ ಮತಹಾಕಿ ಗೆಲ್ಲೆಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೀನಾ ರಾಮಣ್ಣ ರಾಠೋಡ, ಪ್ರಶಾಂತ ಝಂಡೆ, ಗೀತಾಂಜಲಿ ಪಾಟೀಲ ಮತ್ತು ಅನೀಲ ಚವ್ಹಾಣ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರ ನೀರಾವರಿ ಯೋಜನೆಗಳಿಂದಾಗಿ ಗಡಿ ಭಾಗದಲ್ಲಿರುವ ನಮ್ಮ ಗ್ರಾಮಗಳಲ್ಲಿ ಕ್ಷೀರ ಕ್ರಾಂತಿಯಾಗಿದ್ದು, ಟಕ್ಕಳಕಿ ಹಾಲು ಉತ್ಪಾದಕರ ಸಂಘ ವಿಜಯಪುರ- ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಭಾಗದಲ್ಲಿ ನಿರುದ್ಯೋಗಿ ಯುವಕರು ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯಲ್ಲಿ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ನಮ್ಮ ಸಚಿವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ಗೆಲುವಿನಲ್ಲಿ ಕಾರಣವಾಗಲಿವೆ. ಎಲ್ಲರೂ ಅವರನ್ನು ಬೆಂಬಲಿಸುವ ಮೂಲಕ ಸಚಿವರ ಕೈ ಬಲಪಡಿಸೋಮ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮಧುಕರ ಜಾಧವ, ವಿಠ್ಠಲ ಪೂಜಾರಿ, ಪೋಪಟ ಮಹಾರಾಜರು, ಬಾಳು ಮಹಾರಾಜರು, ಪಿಂಟೂ ಮಹಾರಾಜರು, ರಾಮಣ್ಣ ಮಾಳಿ, ಗೀತಾಂಜಲಿ ಪಾಟೀಲ, ರಾಜುಗೌಡ ಪೊಲೀಸ್ ಪಾಟೀಲ, ರಾಘು ಕುಲಕರ್ಣಿ, ವಾಮನ ಚವ್ಹಾಣ, ಭೀಮರಾಯಗೌಡ ಪಾಟೀಲ, ಸತೀಶ ನಾಯಕ, ಉತ್ತಮ ಝಂಡೆ, ಶಿವಪ್ಪ ಚಲವಾದಿ, ಸಂಜು ಪವಾರ, ಆತ್ಮಾರಾಮ ಕಾಟಕರ, ಅನುಬಾಯಿ ಬಾಳು ರಾಠೋಡ, ಅಪ್ಪು ದಳವಾಯಿ, ರಾಜು ಪವಾರ, ತಾವರು ರಾಠೋಡ, ಓಗೆಪ್ಪ ಗೋಪಣೆ, ಈರನಗೌಡ ಬಿರಾದಾರ, ಧನಸಿಂಗ ಚವ್ಹಾಣ, ಬೂತಾಳಸಿದ್ದ ಒಡೆಯರ, ಅನೀಲ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

ಟಕ್ಕಳಕಿ ಗ್ರಾಮದಲ್ಲಿ ಹುಬನೂರ ಎಲ್. ಟಿ. -1 ರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು.

 

Leave a Reply

ಹೊಸ ಪೋಸ್ಟ್‌