ಶೇ. 100 ರಷ್ಟು ಮತದಾನ ಮಾಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಿ- ಟಿ. ಭೂಬಾಲನ್

ವಿಜಯಪುರ: ಜಿಲ್ಲೆಯು ಸೈಕ್ಲಿಂಗ್ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಕ್ರೀಡಾಪಟುಗಳ ಸ್ಪರ್ಧಾ ಮನೋಭಾವ ಹೆಮ್ಮರದಂತೆ ಇದೆ.  ಅದರಂತೆ ಲೋಕಸಭೆ ಚುನಾವಣಾಯಲ್ಲೂ ಸ್ಪರ್ಧೇಯೊಡ್ಡಿದವರಂತೆ ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.  

ಲೋಕಸಭೆ ಚುನಾವಣೆ 2024ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸೈಕಲ್ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳು ರಾಜ್ಯ, ರಾಷ್ಟç ಹಾಗೂ ಅಂತಾರಾಷ್ಟಿçಯ ಮಟ್ಟದಲ್ಲಿ ತಮ್ಮ ಸಾಧನೆಯನ್ನು ಬಿಂಬಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ನಾವು ದಿನನಿತ್ಯದ ಬಿಡುವಿನಲ್ಲಿ ಸೈಕ್ಲಿಂಗ್ ನಂತಹ ಚಟುವಟಿಕೆ ಯಲ್ಲಿ ತೊಡಗಿದರೆ ನಮ್ಮ ಆರೋಗ್ಯ ಹಾಗೂ ಮನಸು ಲವಲವಿಕೆ ಯಿಂದ ಕೂಡಿರುತ್ತದೆ. ಸದೃಢ ಮನಸ್ಸು ಹಾಗೂ ದೇಹವು ಉತ್ತಮ ವಿಚಾರಧಾರೆಗೆ ಪೂರಕವಾಗಿ ಗುಣಮಟ್ಟದ ಜೀವನ ನಡೆಸಲು ಸಹಕಾರಿ ಆಗುತ್ತದೆ. ಅದೇ ರೀತಿ ಮತದಾನ ಮಾಡುವದರಿಂದ ದೇಶದ ಭವಿಷ್ಯಕ್ಕೆ ಸಹಕಾರಿಯಾಗುವುದ ಎಂದು ಹೇಳಿದರು.

ವಿಜಯಪುರದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ಸೈಕಲ್ ಜಾಥಾ ಅಭಿಯಾನಕ್ಕೆ ಡಿಸಿ ಟಿ. ಭೂಬಾಲನ್ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ರಿಷಿ ಆನಂದ ಮಾತನಾಡಿ, ಜಿಲ್ಲೆಯ 2085 ಮತಗಟ್ಟೆಯಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.  ಮೊದಲ ಬಾರಿಗೆ ಮತ ಚಲಾಯಿಸುವ ಯುವ ಮತದಾರರು ದೇಶದ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ಮತ ಚಲಾಯಿಸಿ, ಸುಭದ್ರ ಪ್ರಜಾಪ್ರಭುತ್ವದ ಆಡಳಿತ ನಿರ್ಮಾಣ ಮಾಡಲು ಪಣ ತೊಡಬೇಕು.  ಯುವ ಜನರು ತಮ್ಮ ನೆರೆಹೊರೆಯವರನ್ನು ಮತದಾನ ಮಾಡಲು ಪ್ರೇರೆಪಿಸಬೇಕು.  ಮತದಾನಕ್ಕೆ ಬಹಳ ಮಹತ್ವವಿದೆ.  ಅದರ ಮೌಲ್ಯವನ್ನು ಅರಿತು ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.

ರಾಜ್ಯ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಪಿ. ಎಸ್. ವಸ್ತ್ರದ ಮಾತನಾಡಿ, ಮೇ 7 ರಂದು ಮತದಾನ ಎಂಬ ಪ್ರಜಾಪ್ರಭುತ್ವದ ಹಬ್ಬವಿದ್ದು, ಅಂದು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಆಚರಿಸಿ ಸಂಭ್ರಮಿಸಬೇಕು ಎಂದು ಅವರು ಹೇಳಿದರು.

ಸೈಕಲ್ ಜಾಥಾ ಅಭಿಯಾನವು ನಗರದ ಶಿವಾಜಿ ವೃತ್ತದಿಂದ, ಮಹಾತ್ಮ ಗಾಂಧಿ, ಬಸವೇಶ್ವರ, ಡಾ. ಬಿ. ಆರ್. ಅಂಬೇಡ್ಕರ್ ವೃತ್ತ, ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದ ಮಾರ್ಗವಾಗಿ ಗೋಳಗುಮ್ಮಟವರೆಗೂ ನಡೆಯಿತು. ಬಳಿಕ ಗೋಳಗುಮ್ಮಟ ಆವರಣದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಮತದಾನ ಜಾಗೃತಿಯ ಸೈಕಲ್ ಜಾಥಾ ಅಭಿಯಾನಕ್ಕೆ ಸ್ವಯಂ ಪ್ರೇರಣೆಯಿಂದ ಉದ್ಯಮಿ ವಿಶಾಲ್ ಹಿರಾಸ್ಕರ್ ರವರು ಸೈಕಲ್‌ಗಳನ್ನು ಪ್ರಾಯೋಜಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸಿ ಆರ್ ಮುಂಡರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ನಿಂಗಪ್ಪ ಗೋಟೆ ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವಿರ ಬೊರಣ್ಣವರ್,ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿ, ಸೈಕ್ಲಿಂಗ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌