ವಿಜಯಪುರ: ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ನಗರದ ಮೀನಾಕ್ಷಿ ಚೌಕಿನಲ್ಲಿ ನಡೆದ ಯುವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅಣ್ಣಾಮಲೈ,
ದೊಡ್ಡ ಸಂಖ್ಯೆಯಲ್ಲಿ ನಾವು ಸೇರಿದ್ದೇವೆ. ಯುವಕರ ಬದುಕು ದೇಶದಲ್ಲಿ ಹೇಗೆ ಇರಬೇಕೆಂದು ಸೇರಿದ್ದೇವೆ. 26 ನೇ ವಯಸ್ಸಿನಲ್ಲಿ ಜಿಗಜಿಣಗಿ ಸಚಿವರಾಗಿದ್ದರು. 2014 ಮೇ 30 ರಂದು ನಾವು ಹೊಸ ರಾಜಕೀಯ ಪೇಜ್ ಮಾಡಿದೇವು. ನಮಗೆ ಮೋದಿ ಪಿಎಂ ಆಗಬೇಕೆಂದು ಬಯಸಿದ್ದೇವು. ಪಿಎಂ ಜಾಗದಲ್ಲಿ ಮೋದಿ ಅವರನ್ನು ಕೂಡಿಸಿದ್ದೇವು. ಆಗ 11 ಕೋಟಿಜನರಿಗೆ ಶೌಚಾಲಯ ಇರಲಿಲ್ಲ. 42 ಕೋಟಿ ಜನರಿಗೆ ಬ್ಯಾಂಕ್ ಅಕೌಂಟ್ ಇರಲಿಲ್ಲ. 32 ಪ್ರತಿಶತ ಜನ ಬಡವರಿದ್ದಾರೆ ಎಂದು ಮೋದಿ ಲೆಕ್ಕ ಹಾಕಿದರು. ಕಾಂಗ್ರೆಸ್ ನವರು ಪ್ರತಿ ಚುನಾವಣೆಯಲ್ಲೂ ಬಡತನ ನಿರ್ಮೂಲನೆ ಮಾಡುತ್ತೇವೆಂದು ಭಾಷಣ ಮಾಡಿಕೊಂಡು ಬಂದರು. ಆದರೆ ಬಡತನ ನಿರ್ಮೂಲನೆ ಮಾಡಲಿಲ್ಲ. ಈಗಲೂ ಅದೇ ಮಾತನ್ನಾಡಿದರು. ವಾಜಪೇಯಿ13 ದಿನ, 13 ತಿಂಗಳು ಹಾಗೂ ಐದು ವರ್ಷ ಸರ್ಕಾರ ಮಾಡಿದರು. ಮೋದಿ ಅವರಿಗೆ 10 ವರ್ಷ ಅಧಿಕಾರ ಸಿಕ್ಕಿದೆ. ಕಾಂಗ್ರೆಸ್ ಈಗಲೂ ಅದೇ ಬಡತನದ ಕುರಿತು ಮಾತನಾಡುತ್ತಿದೆ ಎಂದು ಹೇಳಿದರು.
ದೇಶದ ಕೊನೆಯ ಗ್ರಾಮಕ್ಕೆ ಕರೆಂಟ್ ನೀಡಿದ್ದೇವೆ. ಶೇ. 100ರಷ್ಟು ಕುಟುಂಬಗಳಿಗೆ ಅಡಿಗೆ ಅನಿಲ ಸಂಪರ್ಕ ನೀಡಿದ್ದೇವೆ. 10 ವರ್ಷದ ಆಡಳಿತ ಟ್ರೈಲರ್ ಎಂದು ಮೋದಿ ಹೇಳಿದ್ದಾರೆ. ಎಷ್ಟೆಲ್ಲಾ ಕೆಲಸ ಮಾಡಿ ಟ್ರೈಲರ್ ಹೇಳುತ್ತಾರೆ. ಹಾಗಾದರೆ ಮುಂದಿನ ಮೋದಿ ಅವರ ಕನಸು ಏನಿರಬೇಕು ಎಂದು ಅವರು ಪ್ರಶ್ನಿಸಿದರು.
ಇಲ್ಲಿ ಕೋಚಿಂಗ್ ಕ್ಲಾಸ್ ರಾಜ್ಯದಲ್ಲಿ ಖ್ಯಾತಿ ಪಡೆದಿದೆ. ತಾವೆಲ್ಲ ಮೋದಿ ಅವರ ಆಡಳಿತದಲ್ಲಿ ಐಎಎಸ್ ಪರೀಕ್ಷೆ ಎದುರಿಸಿ. ಒಂದು ವೋಟ್ ನಿಂದ ಏನಾಗುತ್ತದೆ ಎಂದು ಉದಾಸೀನ ಮಾಡಬೇಡಿ. ಪೊಲೀಟಿಕಲ್ ಸಿಸ್ಟಮ್ ಟಿಸೈಡ್ ಮಾಡಲು ವೋಟ್ ಮಾಡಿ. ಒಳ್ಳೆ ಪೊಲೀಟಿಕಲ್ ಸಿಸ್ಟಮ್ ಡಿಸೈಡ್ ಮಾಡಿ. ರಮೇಶ ಜಿಗಜಿಣಗಿ ಮತ್ತೇ ಸಂಸದರಾಗಬೇಕು ಎಂದು ಅಣ್ಣಾಮಲೈ ಹೇಳಿದರು.
ಆರ್ಥಿಕ ವ್ಯವಸ್ಥೆಯಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಎಕನಾಮಿಕ್ ಗ್ರೋಥ್ ಶೇ. 3 ರಷ್ಟಿತ್ತು. ಮೋದಿ ಬಂದ ಬಳಿಕ ಶೇ 7 ರಿಂದ ಶೇ. 8ರ ವರೆಗೆ ಆಗಿದೆ. 197 ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೋದಿ ಇಂತ ವ್ಯವಸ್ಥೆ ಮಾಡಿದ್ದಾರೆ. ನಮಗೆ ದೇಶ ಮೊದಲು ಎಂಬುದು ಮೋದಿ ಸಿಸ್ಟಮ್. ತಮಿಳುನಾಡಿನಲ್ಲಿ ಒಂದು ಪಕ್ಷವಿದೆ. ಅಲ್ಲಿ ಒಬ್ಬ ಲೀಡರ್ ನಮಗೆ ಒಂದು ಚಾನ್ಸ್ ಕೊಡಿ ಎಂದು ಕೇಳುತ್ತಾರೆ. ನಿಮ್ಮ ಅಕೌಂಟಿಗೆ ಒಂದು ಕೋಟಿ ಹಾಕುತ್ತೇನೆ. ಕುರಿಗಳಿಗೆ ಏರ್ ಕಂಡೀಷನ್ ಹಾಕುವೆ ಎನ್ನುತ್ತಾರೆ. ಅವರಿಗೆ ತಮಿಳುನಾಡಿನಲ್ಲಿಒಂದೇ ಸೀಟ್ ಬರಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಕೆಲಸ ಮಾಡಿಲ್ಲ. ಈಗಾ 197 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆಗಿದೆ. ಒಳ್ಳೆ ಮನುಷ್ಯ ಮೋದಿ ಪ್ರಧಾನಿಯಾಗಬೇಕಿದೆ. ರೈತರಿಗೆ ಕಿಸಾನ್ ಸಮ್ಮಾನ ಯೋಜನೆ ರೂ. 6000 ಮತ್ತು ಗರ್ಭಿಣಿಯರಿಗೆ ಹಣ ನೀಡಲಾಗುತ್ತಿದೆ. ಮೋದಿ ಪ್ರಗತಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ಮೋದಿ ಅವರಿಗೆ ಬೆಂಬಲ ನೀಡಬೇಕಿದೆ
2004 ರಲ್ಲಿ ಫಲಿತಾಂಶ ಬಂದ ಬಳಿಕ ಹತ್ತು ಜನರು ಬಂದು ಪ್ರಧಾನಿ ಯಾರು ಎಂದು ಹೇಳಿದರು.
ಪ್ರೆಸ್ ಮೀಟ್ ನಲ್ಲಿ ಮಮತಾ ಬ್ಯಾನರ್ಜಿ, ಫಾರುಖ್ ಅಬ್ದುಲ್ಲಾ ಹಾಗೂ ಇತರರು ಇದ್ದರು. ಮನಮೋಹನ್ ಸಿಂಗ್ ರನ್ನು ಪ್ರಧಾನಿಯನ್ನಾಗಿ ಮಾಡಿದರು. ಅವರಿಗೆ ಅನಕೂಲವಾಗಬೇಕೆಂದು ಸಿಂಗ್ ರನ್ನು ಪಿಎಂ ಮಾಡಿದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಬೆಂಬಲ ನೀಡಿದವರು ತಮಗೆ ಬೇಕಾದ ಖಾತೆಗಳನ್ನು ಪಡೆದುಕೊಂಡರು. ತಮಿಳುನಾಡಿನಲ್ಲಿ ಏಳು ಕೇಂದ್ರ ಸಚಿವರಾಗಿದ್ದರು. 2 ಜಿ ಸ್ಪೆಕ್ಟ್ರಮ್ ಹಗರಣ ಮಾಡಿದರು. ಡಿ ರಾಜಾ 1.76 ಲಕ್ಷ ಕೋಟಿ ಹಗರಣ ಮಾಡಿದರು
ಸುರೇಶ ಕಲ್ಮಾಡಿ ಕಾಮನವೆಲ್ತ್ ಹಗರಣ ಮಾಡಿದರು. 1750 ರೂಪಾಯಿ ಟಾಯ್ಲೆಟ್ ಪೇಪರ್ ಗೆ ಬರೆದಿದ್ದರು ಎಂದು ವಾಗ್ದಾಳಿ
ಯುಪಿಎ ದಲ್ಲಿ ಕೋಲ್, 2 ಜಿ ಕಾಮನವೆಲ್ತ್ ಹಗರಣ ಮಾಡಿದ್ದಾರೆ. 2024 ರಲ್ಲಿ ಇದೇ ಮಾತನ್ನು ಮಾಡುತ್ತಿದ್ದಾರೆ. ರಾಹುಲ್ಗಾಂಧಿ ರಾಜ್ಯ ರಾಜ್ಯದಲ್ಲಿ ಪ್ರಚಾರ ಮಾಡುವಾಗ ಸ್ನೇಹ ವೈರತ್ವ ಮೆರೆಯುತ್ತಾರೆ ಎಂದು ಇಂಡಿ ಅಲೈಯನ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಒಂದೇ ಒಂದು ಸೀಟ್ ಕೊಡ ಬಾರದು. ಕಾಂಗ್ರೆಸ್ ಸರಕಾರ ಕೃಷಿ, ತೋಟಗಾರಿಕೆ, ಎಜುಕೇಶನ್ ಬಜೆಟ್ ಕಡಿತ ಮಾಡಿದೆ. ಕ್ಯಾಪಿಟಲ್ ಎಕ್ಸಪೆಂಡಿಚರ್ ಸಿಎಂ ಸಿದ್ದರಾಮಯ್ಯ ಕಡಿಮೆ ಮಾಡಿದ್ದಾರೆ. ಮುಂದಿನ 25 ವರ್ಷ ನಿಮ್ಮ ಕನಸು ನನಸು ಮಾಡಲು ಯಾರ ಕೈಗೆ ಅಧಿಕಾರ ಕೊಡುತ್ತೀರಿ? ಒಂದು ಕಡೆ ರಷ್ಯಾ ಮತ್ತೊಂದೆಡೆ ಪಾಕಿಸ್ತಾನ ವೈರಿ ರಾಷ್ಟ್ರಗಳಿವೆ
ದೇಶದ ಭದ್ರತೆಗೆ ಒತ್ತು ನೀಡುವ ಸರಕಾರ ಬೇಕಿದೆ. ಕಾಂಪ್ರಮೈಸ್ ಮಾಡಿಕೊಂಡು ಹೋಗೋ ಕಾಂಗ್ರೆಸ್ ಗೆ ಮತ ಹಾಕಬೇಡಿ
ಮೇ 4 ರಂದು ರಾತ್ರಿ ಕಾಂಗ್ರೆಸ್‌ನವರು ಬರುತ್ತಾರೆ. ಅವರ ಗ್ಯಾರಂಟಿ ಕಾರ್ಡ್ ತಗೊಂಡು ರೂ. 5000 ಕೊಡಿ, ಜೂನ್ 4 ರಂದು ರೂ. 95 ಸಾವಿರ ಕೊಡಿ ಎಂದು ಅವರು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಕುಟುಕಿದರು.
ಕಾಂಗ್ರೆಸ್ ಒಂದು ಲಕ್ಷ ಗ್ಯಾರಂಟಿ ಸುಳ್ಳು. ದೇಶದ ಬಜೆಟ್ ರೂ. 44 ಲಕ್ಷ ಕೋ. ಇದೆ. ಅದರಲ್ಲಿ ಸೇನೆ ಕೃಷಿ, ಎಜುಕೇಷನ್, ಹೆಲ್ತ್ ಬಜೆಟ್ ಲೆಕ್ಕ ಹೇಳಿದ ಅಣ್ಣಾಮಲೈ, ಕಾಂಗ್ರೆಸ್ ಸುಳ್ಳು ಭರವಸೆ ನೀಡುತ್ತಿದೆ. ರೂ. 1500 ಕೋ. ಡಿ. ಕೆ. ಶಿವಕುಮಾರ ಮನೆಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
70 ವರ್ಷದ ಮೇಲಿರುವರು ಇದ್ದಾರೆ. ಜೂನ್ 4 ರ ಬಳಿಕ 70 ವರ್ಷದ ಮೇಲಿರೋವವರಿಗೆ 5 ಲಕ್ಷ ಆರೋಗ್ಯ ಮೀಮೆ ಕೊಡೊದಾಗಿ ಮೋದಿ ಹೇಳಿದ್ದಾರೆ. ಮೋದಿ ಮನೆಯಿಲ್ಲದವರಿಗರ ಮನೆ ನಿರ್ಮಾಣ ಮಾಡಿ ಕೊಟ್ಟಿದ್ದಾರೆ. 295 ಭರವಸೆಗಳಲ್ಲಿ ಎಲ್ಲ ಭರವಸೆ ಈಡೇರಿಸಿದ್ದೇವೆ. ವಾಜಪೇಯಿ ಅವರು ಪಿಎಂ ಆಗಿದ್ದಾಗ ಅಬ್ದುಲ್ ಕಲಾಂ ಮುಸ್ಲಿಂ ಸಮಾಜದ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ ಮಾಡಿದರು. ಮೋದಿ ಅವರ ಕಾಲದಲ್ಲಿ ರಾಮನಾಥ್ ಕೋವಿಂದ್ ಎಸ್ಸಿ ಸಮಾಜದವರನ್ನು ರಾಷ್ಟ್ರಪತಿ ಮಾಡಿದರು. ಎರಡನೆರ ಬಾರಿ ಮುರ್ಮು ಅವರನ್ನು ಮಾಡಿದರು. ಕಾಂಗ್ರೆಸ್ ನವರು ಪ್ರತಿಭಾ ಪಾಟೀಲ ಅವರನ್ನು ರಾಷ್ಟಪತಿಯನ್ನಾಗಿ ಮಾಡಿದರು. ಇದೇ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಇರುವ ವ್ಯತ್ಯಾಸ. ಬಿಜೆಪಿಗೆ ಕಾಂಗ್ರೆಸ್ ಪಾಠ ಬೇಕಿಲ್ಲ.
ಬಿಜೆಪಿಗೆ ಎಲ್ಲಾ ಸಮುದಾಯದವರು ಬೇಕು. ಶೇ. 37 ಮೈನಾರಿಟಿ ಕಮ್ಯುನಿಟಿ ಅವರಿಗೆ ಪಿಎಂ ಅವಾಸ್ ಯೋಜನೆ ಸಿಕ್ಕಿದೆ. ರಾಮಂದಿರ ವಿಚಾರ ಸುಪ್ರೀಂ ಕೋರ್ಟಿನಲ್ಲಿ ಮುಗಿದ ಬಳಿಕ ನಿರ್ಮಾಣ ಮಾಡಿದ್ದೇವೆ. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸ್ಲಿಂ ವ್ಯಕ್ತಿ ಕರೆದಿದ್ದೇವೆ. ಈ ಚುನಾವಣೆಯಲ್ಲಿ ಶೇಕಡಾ 51 ಪರ್ಸೆಂಟ್ ಬಿಜೆಪಿಗೆ ಹಾಕಬೇಕು. ಮೇಡ್ ಇನ್ ಇಂಡಿಯಾದಲ್ಲಿ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ನಿಂತಿದ್ದೇವೆ. 14 ದೇಶಗಳಿಗೆ ರಪ್ತು ಮಾಡುತ್ತಿದ್ದೇವೆ. ಕೊರೊನಾ ಕಾಲದಲ್ಲಿ ಅಮೇರಿಕಾಗೂ ಮುನ್ನ ಲಸಿಕೆ ಕಂಡು ಹಿಡಿದೇವು. 10 ವರ್ಷ ಕಾಲ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಅಣ್ಣಾಮಲೈ ಮನವಿ ಮಾಡಿದರು.
ರಾಜಕೀಯ ಕಾರ್ಯಕ್ರಮ ಸಭೆಯಲ್ಲಿ ಅರ್ದಕ್ಕಿಂತ ಹೆಚ್ಚು ಮಹಿಳೆಯರು ಬರಬೇಕೆಂದು ಮೋದಿ ಬಯಸುತ್ತಾರೆ. ಶೇ. 33 ಮಹಿಳಾ ಮೀಸಲಾತಿ ನಾವು ತಂದಿದ್ದೇವೆ. ಚರಾಸ್ಥಿ ಚಿರಾಸ್ಥಿಗೆ ಬೆಲೆ ತಂದವರು ಮೋದಿ. ಬಡ ಕುಟುಂಬ ಇರಬಾರದು ಎಂಬ ಕನಸು ಮೋದಿಗೆ ಇದೆ. ಅಷ್ಟು ಕೆಲಸ ಮಾಡುತ್ತೇವೆ. ವಾರಂಟಿ ಇಲ್ಲದ ಪಕ್ಷ ಗ್ಯಾರಂಟಿ ಕೊಡುತ್ತಿದೆ. ವಾರಂಟಿ ಇದ್ದರೆ ಮಾತ್ರ ಗ್ಯಾರಂಟಿಗೆ ಬೆಲೆ ಇದೆ. ಕರ್ನಾಟಕ ಮೋದಿ ಮೇಲೆ ವಿಶೇಷ ಪ್ರೀತಿ ಇರೋ ರಾಜ್ಯವಾಗಿದೆ. ಎಲ್ಲರನ್ನೂ ಮುಂದೆ ತರೋ ಹೋರಾಟ ಮಾಡೊ ಕೆಲಸ ಮೋದಿ ಮಾಡುತ್ತಾರೆ. 2024 ಕ್ಕೆ ಮೋದಿ ವಿಶ್ವನಾಯಕರಾಗುತ್ತಾರೆ. ಇಸ್ರೇಲ್ ಇರಾನ್ ನಾಯಕರು ಮೋದಿ ಮಾತಿಗೆ ಬೆಲೆ ಕೊಡುತ್ತಾರೆ. ಯುದ್ದ ನಿಲ್ಲಿಸಲು ಮೋದಿ ಹೇಳಿದರೆ ಕೇಳುತ್ತಾರೆ. ಕೊನೆದಾಗಿ ಚುನಾವಣೆ ಎಂದು ರಮೇಶ ಜಿಗಜಿಣಗಿ ಹೇಳಿದ್ದಾರೆ. ಜೀವನದ ಕೊನೆವರೆಗೂ ಅಧಿಕಾರದಲ್ಲಿರುತ್ತಾರೆ. ಕರ್ನಾಟಕದ ಬಿಜೆಪಿಯ ಹಾಗೇ ತಮಿಳುನಾಡಿನಲ್ಲಿ ಬಿಜೆಪಿ ಕಟ್ಟೋ ಕೆಲಸ ಮಾಡುತ್ತೇನೆ. ಮೇ 7 ರಂದು ಎಲ್ಲರೂ ಬಿಜೆಪಿಗೆ ಮತ ಹಾಕಬೇಕೆಂದು ಅಣ್ಣಾಮಲೈ ಇದೇ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಜೈ ಶ್ರೀರಾಮ ಜೈ ಜೈ ಶ್ರೀರಾಮ ಎಂದು ಭಾಷಣ ಪ್ರಾರಂಭಿಸಿದರು. ಕ್ಷೇತ್ರದಲ್ಲಿ ಬಹಳ ಕೆಲಸ ಮಾಡಿದ್ದೇನೆ. ಜಿಲ್ಲೆಗೆ ರೂ. 1 ಲಕ್ಷ ಕೋಟಿ ಅನುದಾನ ತಂದದ್ದೇನೆ. ನರೇಂದ್ರ ಮೋದಿ ಪ್ರಧಾನಿಯಾಗಿ ಬಹಳ ಕೆಲಸ ಮಾಡಿದ್ದಾರೆ. ವಿದೇಶದಲ್ಲಿ ಭಾರತೀಯರಿಗೆ ಗೌರವ ಸಿಗಲು ಮೋದಿ ಕಾರಣವಾಗಿದೆ. ತರುಣರು ದೇಶವನ್ನು ಉಳಿಸಬೇಕೆಂಬ ಕಾರಣದಿಂದ ನಾನು ಹಿಂದೆ ರಾಜಕೀಯ ಸೇರಿಕೊಂಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ನನಗೆ ಸಚಿವನಾಗುವ ಆಸೆಯಿಲ್ಲ. ಮೋದಿ ಮತ್ತೇ ಪ್ರಧಾನಿಯಾಗಲು ನನಗೆ ಆಶೀರ್ವಾದ ಮಾಡಿ.
ದೇಶ ರಕ್ಷಣೆಗೆ ನಮ್ಮ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೋದಿ ಪಿಎಂ ಆಗಬೇಕು ಎಂದು ಮತಯಾಚಿಸಿದರು.
ಇದಕ್ಕೂ ಮೊದಲು ಅಣ್ಣಾಮಲೈ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಬಿಜೆಪಿ ಮುಖಂಡರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಶಾಸಕ ಯತ್ನಾಳ ಪುತ್ರ ರಾಮನಗೌಡ ಪಾಟೀಲ ಯತ್ನಾಳ, ಬಿಜೆಪಿಯ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.