ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ತಮ್ಮ ಸ್ವಗ್ರಾಮ ತೊರವಿಯಲ್ಲಿ ಮತದಾನ ಮಾಡಿದರು.
ತೊರವಿಯ ಸರಕಾರಿ ಕನ್ನಡ ಹಿರಿಯ ಬಾಲಕಿಯರ ಶಾಲೆಯ ಮತಗಟ್ಟೆ ಸಂಖ್ಯೆ-97ಕ್ಕೆ ಆಗಮಿಸಿದ ಅವರು ಮತದಾನ ಮಾಡಿದರು. ಈ ಸಂದರ್ಭದಲ್ಲಿ ಅವರ ಮಗಳು ಭವಾನಿ ಕೂಡ ಮತದಾನ ಮಾಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೆಲುವು ನಿಶ್ಚಿತ. ವಿಜಯಪುರದ ಬದಲಾವಣೆಗಾಗಿ ಜನರೇ ಮನಸ್ಸು ಮಾಡಿದ್ದಾರೆ. ವಿಜಯಪುರ ಸೇರಿದಂತೆ ರಾಜ್ಯದಲ್ಲಿ 18ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರೊ. ರಾಜೂ ಆಲಗೂರ ಅವರ ಪುತ್ರಿ ಭವಾನಿ ಮಾತನಾಡಿ, ತಂದೆಯ ಜೊತೆಗೆ ಮತ ಚಲಾಯಿಸಿದ್ದಕ್ಕೆ ಖುಷಿಯಾಗಿದೆ. ಅವರು ಈ ಮುಂಚೆ ಶಾಸಕರಾಗಿ ಮಾಡಿದ ಕೆಲಸಗಳ ಬಗ್ಗೆ ಹೆಮ್ಮೆ ಇದೆ. ಜನರು ಅವರ ಬಗ್ಗೆ ತೋರಿಸುತ್ತಿರುವ ಪ್ರೀತಿ, ಅಭಿಮಾನಕ್ಕೆ ಸಂತಸವಾಗಿದೆ. ನಮ್ಮ ತಂದೆ ಗೆಲ್ಲುವುದು ಖಚಿತ ಎಂದು ಹೇಳಿದರು.