ಶಾಸಕ ಸುನೀಲಗೌಡ ಪಾಟೀಲ ಮತದಾನ- ಪ್ರೊ. ರಾಜು ಆಲಗೂರ ಗೆಲುವ ಖಚಿತ ಎಂದ ಎಂಎಲ್‌ಸಿ

ವಿಜಯಪುರ: ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಇಂದು ಮಂಗಳವಾರ ನಗರದಲ್ಲಿ ಮತದಾನ ಮಾಡಿದರು.

ನಗರದ ಮದ್ದಿನ ಖಣಿಯಲ್ಲಿರುವ ಸಮನ್ವಯ ಇಂಗ್ಲಿಷ್ ಮೀಡಿಯಮ್ ಪ್ರೈಮರಿ ಬಿ ಸ್ಕೂಲ್ ನಲ್ಲಿರುವ ಮತಗಟ್ಟೆ ಸಂಖ್ಯೆ 46ಕ್ಕೆ ತೆರಳಿ ಅವರು ತಮ್ಮ ಹಕ್ಕು ಚಲಾಯಿಸಿದರು.

ಬಳಿಕ ಮಾತನಾಡಿದ ಅವರು, ಬದಲಾವಣೆ ಖಚಿತ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲುವು ಖಚಿತ ಎಂದು ಹೇಳಿದರು.

ಈ ಬಾರಿ ಜಿಲ್ಲೆಯಲ್ಲಿ ಜನ ಬದಲಾವಣೆ ಬಯಸಿದ್ದಾರೆ.  ಪ್ರೊ. ರಾಜು ಆಲಗೂರ ಗೆಲುವು ಸಾಧಿಸಿ ಸಂಸತ್ತಿನಲ್ಲಿ ವಿಜಯಪುರ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

Leave a Reply

ಹೊಸ ಪೋಸ್ಟ್‌