ವಿಜಯಪುರ: ಸಂಸದ ರಮೇಶ ಜಿಗಜಿಣಗಿ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಭೂತನಾಳ ತಾಂಡಾದಲ್ಲಿ ಮತದಾನ ಮಾಡಿದರು.
ಭೂತನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ 14ಕ್ಕೆ ಕುಟುಂಬ ಸಮೇತ ಆಗಮಿಸಿದ ಸಂಸದರು ತಮ್ಮ ಹಕ್ಕು ಚಲಾಯಿಸಿದರು. ಈ ಸಂದರ್ಭದಲ್ಲಿ ಅವರ ಪುತ್ರರಾದ ಆನಂದ, ವಿನೋದ ಮತ್ತು ಸೊಸೆಯಂದಿರಾದ ರೇಷ್ಮಾ, ಗೀತಾ ಹಾಗೂ ಮೊಮ್ಮಗಳು ಸ್ನೇಹಾ ಜೊತೆ ಆಗಮಿಸಿ ಮತ ಚಲಾಯಿಸಿದರು.
ಸಂಸದರ ಮೊಮ್ಮಗಳು ಸ್ನೇಹಾ ಇದೇ ಮೊದಲ ಬಾರಿಗೆ ಮತಹಾಕಿ ಖುಷಿಪಟ್ಟರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರ, ಕೇವಲ ಭೂತನಾಳ ಮಾತ್ರವಲ್ಲದೆ ಜಿಲ್ಲೆಯ ಎಲ್ಲ ಕಡೆ ಬಿಜೆಪಿ ವಾತಾವಣ ಚೆನ್ನಾಗಿದೆ. ಜಿಲ್ಲೆಯ ನಾನಾ ಗ್ರಾಮಗಳಿಂದ ಕಾರ್ಯಕರ್ತರು ಮತ್ತು ಮತದಾರರು ಕರೆ ಮಾಡುತ್ತಿದ್ದು, ಒನಸೈಡ್ ಎಲೆಕ್ಷನ್ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಈ ಬಾರಿ ವಿಜಯಪುರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒನಸೈಡ್ ಮತಗಳು ಬರಲಿವೆ ಎಂದು ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.