ಪ್ರೊ. ರಾಜು ಆಲಗೂರ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ತಾರೆ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಮತ್ತೀತರ ಕಾರ್ಯತಂತ್ರಗಳ ಕುರಿತು ಬ್ಯೂಸಿಯಾಗಿದ್ದ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಈಗ ಮತದಾನ ಮುಕ್ತಾಯವಾಗಿರುವ ಹಿನ್ನೆಯಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರ ಗೆಲುವಿನ ಅಂತರ, ಅದಕ್ಕೆ ಪೂರವಾಗಿರುವ ಅಂಶಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆಯಿಂದಲೇ ನಾನಾ ಗ್ರಾಮಗಳಿಗೆ ತೆರಳಿ ಮತದಾರರನ್ನು ಭೇಟಿ ಮಾಡಿದ ಸಚಿವರು ಪ್ರೋ. ರಾಜು ಆಲಗೂರ ಪರ ಮತಯಾಚಿಸಿದ್ದರು. […]

ಮತದಾನದ ಬಳಿಕ ಪ್ರೊ. ರಾಜು ಆಲಗೂರ ರಿಲ್ಯಾಕ್ಸ್- ಚುನಾವಣೆಯಲ್ಲಿ ಗೆಲ್ಲುವೆ ಎಂದ ಕಾಂಗ್ರೆಸ್ ಅಭ್ಯರ್ಥಿ

ವಿಜಯಪುರ: ಚುನಾವಣೆ ಮತದಾನ ಮಂಗಳವಾರ ಮುಗಿದ ನಂತರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಬುಧವಾರ ರಿಲ್ಯಾಕ್ಸ್ ಆಗಿ ಎಲೆಕ್ಷನ್ ಮಾಹಿತಿ ಪಡೆದಿದ್ದಾರೆ. ಟಿಕೆಟ್ ಘೋಷಣೆ ನಂತರ ಜಿಲ್ಲಾದ್ಯಂತ ಎಲ್ಲ ಕಡೆ ಓಡಾಡಿದ್ದ ಪ್ರೊ.ರಾಜು ಆಲಗೂರ ಅವರು ಮಂಗಳವಾರ ಮತದಾನ ಮುಗಿಯುತ್ತಿದ್ದಂತೆ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ.  ಬುಧವಾರ ಬೆಳಿಗ್ಗೆ ಕುಟುಂಬ ಸದಸ್ಯರ ಜೊತೆ ಕಾಲ ಕಳೆದರು.  ಮತದಾನದ ಮಾಹಿತಿಗಾಗಿ ಬೆಳಿಗ್ಗೆ ಪತ್ರಿಕೆಗಳನ್ನು ಓದಿದ ಅವರು, ಬೆಳಿಗ್ಗೆ ತಮ್ಮ ನಿವಾಸಕ್ಕೆ ಆಗಮಿಸಿದ ಮುಖಂಡರು […]

ದೇವ್ರು ಎಲ್ಲಾ ಕೊಟ್ಟಾನ- ನಾ ಸಂತೃಪ್ತ ಅದೀನಿ- ಪ್ರತಿ ಹಳ್ಯಾಗ ಕನಿಷ್ಠ ಒಂದು ವೋಟ್ ಲೀಡ್ ಸಿಗ್ತದ- ರಮೇಶ ಜಿಗಜಿಣಗಿ

ವಿಜಯಪುರ: ನಾನೊಬ್ಬ ಸಂತೃಪ್ತ ರಾಜಕಾರಣಿ.  ನನಗಿದು 13ನೇ ಚುನಾವಣೆಯಾಗಿದ್ದು, ಈ ಬಾರಿಯೂ ಪ್ರತಿ ಹಳ್ಳಿಯಲ್ಲಿ ಕನಿಷ್ಠ ಒಂದು ಮತವನ್ನಾದರೂ ಹೆಚ್ಚಿಗೆ ಪಡೆದು ಗೆಲ್ಲುವುದು ಗ್ಯಾರಂಟಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಮಂಗಳವಾರ ಮತದಾನ ಮುಗಿದ ನಂತರ ಬುಧವಾರ ರಿಲ್ಯಾಕ್ಸ್ ಆಗಿರುವ ದಲಿತ ಹಿರಿಯ ಸಂಸದ ರಮೇಶ ಜಿಗಜಿಣಗಿ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಮತ್ತು ಸೊಸೆಯಂದಿರೊಂದಿಗೆ ಸಂತಸದಿಂದ ಕಾಲ ಕಳೆದರು.  ಬೆಳೆಗ್ಗೆ ಕುಟುಂಬದ ಎಲ್ಲ ಸದಸ್ಯರೊಂದಿಗೆ ಟಿಫನ್ ಮಾಡಿದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮತದಾನ […]

ಬಸವನಾಡಿನಲ್ಲಿ ಶೇ. 66.66 ರಷ್ಟು ಮತದಾನ- ವಿಧಾನಸಭೆ ಕ್ಷೇತ್ರವಾರು ಬಬಲೇಶ್ವರದಲ್ಲಿ ಅತೀ ಹೆಚ್ಚು, ದೇವರ ಹಿಪ್ಪರಗಿಯಲ್ಲಿ ಅತೀ ಕಡಿಮೆ- ಉಳಿದೆಡೆ ಎಷ್ಟು ಗೊತ್ತಾ?

ವಿಜಯಪುರ: ಜಿಲ್ಲೆಯಲ್ಲಿ ನಡೆದ ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ನಿನ್ನೆ ಮಂಗಳವಾರವೇ ಪೂರ್ಣಗೊಂಡಿದ್ದು, ಇಂದು ಬುಧವಾರ ಜಿಲ್ಲಾಡಳಿತ ಶೇಕಡವಾರು ಮತದಾನದ ಮಾಹಿತಿಯನ್ನು ಪ್ರಕಟಿಸಿದೆ. ಜಿಲ್ಲೆಯಲ್ಲಿ ಶೇ. 66.33ರಷ್ಟು ಮತದಾನವಾಗಿದ್ದು, ಅಂಚೆ ಮತಗಳು ಸೇರಿ‌ ಒಟ್ಟು 66.66ರಷ್ಟು‌ ಮತದಾನ ದಾಖಲಾಗಿದೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ. 71.32 ಮತ್ತು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಅತೀ ಕಡಿಮೆ ಶೇ. 61.95 ರಷ್ಟು ಮತದಾನವಾಗಿದೆ. ಒಟ್ಟು ಮತದಾರರು- 1946090 ಒಟ್ಟು ಮತದಾನ ಮಾಡಿದವರು- 1290719 ಒಟ್ಟು ಪುರುಷ ಮತದಾರರು […]