ಬಸವನಾಡಿನಲ್ಲಿ ಶೇ. 66.66 ರಷ್ಟು ಮತದಾನ- ವಿಧಾನಸಭೆ ಕ್ಷೇತ್ರವಾರು ಬಬಲೇಶ್ವರದಲ್ಲಿ ಅತೀ ಹೆಚ್ಚು, ದೇವರ ಹಿಪ್ಪರಗಿಯಲ್ಲಿ ಅತೀ ಕಡಿಮೆ- ಉಳಿದೆಡೆ ಎಷ್ಟು ಗೊತ್ತಾ?

ವಿಜಯಪುರ: ಜಿಲ್ಲೆಯಲ್ಲಿ ನಡೆದ ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ನಿನ್ನೆ ಮಂಗಳವಾರವೇ ಪೂರ್ಣಗೊಂಡಿದ್ದು, ಇಂದು ಬುಧವಾರ ಜಿಲ್ಲಾಡಳಿತ ಶೇಕಡವಾರು ಮತದಾನದ ಮಾಹಿತಿಯನ್ನು ಪ್ರಕಟಿಸಿದೆ.

ಜಿಲ್ಲೆಯಲ್ಲಿ ಶೇ. 66.33ರಷ್ಟು ಮತದಾನವಾಗಿದ್ದು, ಅಂಚೆ ಮತಗಳು ಸೇರಿ‌ ಒಟ್ಟು 66.66ರಷ್ಟು‌ ಮತದಾನ ದಾಖಲಾಗಿದೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ. 71.32 ಮತ್ತು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಅತೀ ಕಡಿಮೆ ಶೇ. 61.95 ರಷ್ಟು ಮತದಾನವಾಗಿದೆ. ಒಟ್ಟು ಮತದಾರರು- 1946090

ಒಟ್ಟು ಮತದಾನ ಮಾಡಿದವರು- 1290719

ಒಟ್ಟು ಪುರುಷ ಮತದಾರರು 987974

ಮತದಾನ ಮಾಡಿದ ಪುರುಷ ಮತದಾರರು- 664662

ಒಟ್ಟು ಮಹಿಳಾ ಮತದಾರರು- 957906

ಮತದಾನ ಮಾಡಿದ ಮಹಿಳಾ ಮತದಾರರು- 626025

ಒಟ್ಟು ಇತರ ಮತದಾರರು- 210

ಮತದಾನ ಮಾಡಿದ ಇತರ ಮತದಾರರು- 32

ವಿಧಾನಸಭೆ ಕ್ಷೇತ್ರವಾರು ಮತದಾನದ ಶೇಕಡವಾರು ಮಾಹಿತಿ ಇಲ್ಲಿದೆ.

26- ಮುದ್ದೇಬಿಹಾಳ- ಶೇ. 64.75

27- ದೇವರ ಹಿಪ್ಪರಗಿ- ಶೇ. 61.95

28- ಬಸವನ ಬಾಗೇವಾಡಿ- ಶೇ. 70.91

29- ಬಬಲೇಶ್ವರ- ಶೇ. 71.32

30- ವಿಜಯಪುರ ನಗರ- 62.10

31- ನಾಗಠಾಣ- ಶೇ. 67.05

32- ಇಂಡಿ- ಶೇ 67.17

33- ಸಿಂದಗಿ- ಶೇ. 66.40

Leave a Reply

ಹೊಸ ಪೋಸ್ಟ್‌