ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಭಗಿರಥ ಜಯಂತಿಯನ್ನು ಆಚರಿಸಲಾಯಿತು.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಶ್ರೀ ಭಗಿರಥ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಅಯ್ಯೂಬ ದ್ರಾಕ್ಷಿ, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಜಕ್ಕಪ್ಪ ಯಡವೆ, ಮುಖಂಡರಾದ ಮುತ್ತಪ್ಪ ಕೆ. ಶಿವಣ್ಣನವರ, ಅನಿಲ ಅವಳೆ, ಯಲ್ಲಪ್ಪ ಬಂಡಿ, ಡಾ. ಸುರೇಶ ಕಾಗಲಕರರೆಡ್ಡಿ, ಸಿದ್ದು ಗೆರಳೆ, ಸಾಬು ಕಾತ್ರಾಳ, ಜೆ. ಎಲ್. ಕಸ್ತೂರಿ, ಶ್ರೀನಿವಾಸ ಅಂಬಲಿ, ಸುರೇಶ ಶಹಾಪೂರ, ಪುಂಡಲಿಕ ಉಪ್ಪಾರ, ವಿದ್ಯಾವತಿ ಅಂಕಲಗಿ ಮುಂತಾದವರು ಉಪಸ್ಥಿತರಿದ್ದರು.