CBSE Exam: ಶ್ರೀ ಬಿ. ಎಂ. ಪಾಟೀಲ ಸ್ಕೂಲ್ ವಿದ್ಯಾರ್ಥಿ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ

ವಿಜಯಪುರ: ಇತ್ತೀಚೆಗೆ ನಡೆದ ಸಿ.ಬಿ.ಎಸ್.ಸಿ 10 ನೇ ತರಗತಿ ಪರೀಕ್ಷೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ ವಿದ್ಯಾರ್ಥಿ ಮಿಹೀರ್ ಮಹೇಶ ದೇಶಪಾಂಡೆ ಶೇ.98 ಅಂಕ ಪಡೆದು ವಿಜಯಪುರ ಮತ್ತು ಬಾಗಲಕೋಟೆ ಎರಡು ಜಿಲ್ಲೆಗಳಿಗೆ ದ್ವಿತೀಯ ಗಳಿಸಿದ್ದಾನೆ. ಅಲ್ಲದೇ, ಈ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಪಾಸಾಗುವ ಮೂಲಕ ಶಾಲೆ ಶೇ.100 ರಷ್ಟು ಫಲಿತಾಂಶ ದಾಖಲಿಸಲು ಕಾರಣರಾಗಿದ್ದಾರೆ.

ಮಿಹೀರ್ ಮಹೇಶ ದೇಶಪಾಂಡೆ
ಹೃದಯ ದೇವೇಂದ್ರ ಕೋಠಾರಿ
ನಿಶಿತಾ ವಿ. ಶಹಾ

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಶಾಲೆಯ ಪ್ರಾಚಾರ್ಯ ಬಂದನಾ ಬ್ಯಾನರ್ಜಿ, ಈ ಬಾರಿ ಸಿ.ಬಿ.ಎಸ್.ಸಿ ಪರೀಕ್ಷೆಗೆ 101 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಹೃದಯ ದೇವೆಂದ್ರ ಕೋಠಾರಿ ಶೇ.97.60 ಅಂಕ ಗಳಿಸಿ ಶಾಲೆಗೆ ದ್ವಿತೀಯ ಹಾಗೂ ನಿಶಿತಾ ವಿ ಶಹಾ ಶೇ.97.20 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೇ, 17 ವಿದ್ಯಾರ್ಥಿಗಳು ಶೇ.90 ಕ್ಕಿಂತಲೂ ಹೆಚ್ಚು ಅಂಕ, 52 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಗಾಗೂ 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಪರೀಕ್ಷೆಯಲ್ಲಿ ಸಾಧನೆ ಮೂಲಕ ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ ಶೇ.100 ರಷ್ಟು ಫಲಿತಾಂಶ ದಾಖಲಾಗಲು ಕಾರಣರಾದ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕ ಹೊರತಾದ ಸಿಬ್ಬಂದಿಗಳಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ ಎಂದು ಬಂದನಾ ಬ್ಯಾನರ್ಜಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌