ವಿದ್ಯಾರ್ಥಿನಿಯರಿಗೆ ಟಾಟಾ ಮೋಟಾರ್ಸ್ ನಿಂದ ಸ್ಟೈಫಂಡ್ ಸಹಿತ ಉಚಿತವಾಗಿ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ- ಅರ್ಹತೆ, ಅರ್ಜಿ ಸಲ್ಲಿಕೆ ಕುರಿತ ಮಾಹಿತಿ ಇಲ್ಲಿದೆ

ವಿಜಯಪುರ: ಜನಪರ ಸೇವೆಯ ಮೂಲಕ ಸಾರ್ವಜನಿಕ ಉದ್ಯಮದಲ್ಲಿ ಅದರದೇ ಆದ ಕೊಡುಗೆ ನೀಡುವ ಮೂಲಕ ಮನೆಮಾತಾಗಿರುವ ಟಾಟಾ ಮೋಟಾರ್ಸ್ ಈಗ ಪಿಯುಸಿ ಪಾಸಾಗಿರುವ ವಿದ್ಯಾರ್ಥಿನಿಯರಿಗಾಗಿ ಮೂರು ವರ್ಷದ ಡಿಪ್ಲೋಮಾ ಕೋರ್ಸಿಗೆ ಅರ್ಜಿ ಆಹ್ವಾನಿಸಿದ್ದು, ಪ್ರತಿ ತಿಂಗಳು ಸ್ಟೈಫಂಡ್ ಸಹಿತಿ ತರಬೇತಿ ನೀಡಲಿದೆ.

ಗ್ರಾಮೀಣ ವಿದ್ಯಾರ್ಥಿನಿಯರ ಪಾಲಿಗೆ ಇದು ವಿದ್ಯಾಭ್ಯಾಸದ ಜೊತೆಗೆ ಸ್ಟೈಫಂಡ್ ಸಹಿತ ವೃತ್ತಿಕೌಶಲ್ಯ ಹೆಚ್ಚಿಸುವ ಸದಾವಕಾಶವಾಗಿದ್ದು, ಧಾರವಾಡ ಟಾಟಾ ಮೋಟಾರ್ಸ್ ಲಿಮಿಟೆಡ್ ಫುಲ್ ಟರ್ಮ್ ಅಪ್ರೆಂಟಿಸ್ಶಿಪ್ ಗಾಗಿ ಆನಲೈನ್ ಅರ್ಜಿಗಳನ್ನು ಅಹ್ವಾನಿಸಿದೆ.  50 ವಿದ್ಯಾರ್ಥಿನಿಯರಿಗೆ ಪ್ರವೇಶಕ್ಕೆ ಅವಕಾಶವಿದ್ದು, ವಿದ್ಯಾರ್ಥಿನಿಯರಿಂದ ಪ್ರತಿಕ್ರಿಯೆ ನೋಡಿ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.  1961ರ ಅಪ್ರೆಂಟಿಸ್ಶಿಪ್ ಕಾಯಿದೆಯಡಿ ಈ ತರಬೇತಿ ನೀಡಲಾಗುವುದು ತರಬೇತಿ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಎಸ್. ಅಂಗಡಿ ತಿಳಿಸಿದ್ದಾರೆ.

ತರಬೇತಿ ಸಂದರ್ಭದಲ್ಲಿ ಸೌಲಭ್ಯಗಳು

  1. ಪ್ರತಿ ತಿಂಗಳು ರೂ. 13000 ಸ್ಟೈಫಂಡ್
  2. ಉಚಿತ ಸಮವಸ್ತ್ರ ಮತ್ತು ಪಿಪಿಇಗಳು
  3. ಕಂಪನಿ ನಿಯಮದ ಪ್ರಕಾರ ಸಬ್ಸಿಡಿ ಕ್ಯಾಂಟೀನ್ ಮತ್ತು ಸಾರಿಗೆ ಸೌಲಭ್ಯಗಳು

ಅರ್ಹತೆ

  1. ಪ್ರಸಕ್ತ 2024ನೇ ವರ್ಷದಲ್ಲಿ ಪಿಯುಸಿ ಅಥವಾ 12ನೇ ತರಗತಿಯನ್ನು ಮೊದಲ ಪ್ರಯತ್ನದಲ್ಲಿ ಉತ್ತಿರ್ಣರಾದವರಿಗ ಮಾತ್ರ ಅವಕಾಶ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಡುವೆ ಯಾವುದೇ ವರ್ಷದ ಅಂತರ ಇರಬಾರದು.
  2. ಎಸ್.ಎಸ್.ಎಲ್.ಸಿ ಅಥವಾ 10ನೇ ತರಗತಿಯನ್ನು ಮೊದಲ ಪ್ರಯತ್ನದಲ್ಲಿಯೇ ಪಾಸಾದವರಿಗೆ ಮಾತ್ರ ಅವಕಾಶ.
  3. ಸಾಮಾನ್ಯ ಮತ್ತು ಓಬಿಸಿ ವರ್ಗದವರು ಕನಿಷ್ಠ ಶೇ. 70ರಷ್ಟು ಅಂಕಗಳೊಂದಿಗೆ ಎಸ್.ಎಸ್.ಎಲ್.ಸಿ ಉತ್ತಿರ್ಣರಾಗಿರಬೇಕು.
  4. ಎಸ್.ಸಿ ಮತ್ತು ಎಸ್.ಟಿ ವರ್ಗದವರು ಕನಿಷ್ಠ ಶೇ. 60ರಷ್ಟು ಅಂಕ ಗಳೊಂದಿಗೆ ಎಸ್.ಎಸ್.ಎಲ್.ಉತ್ತೀರ್ಣರಾಗಿರಬೇಕು.
  5. ಎಸ್.ಎಸ್.ಎಲ್.ಸಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿನ ಅಂಕಗಳು ಎಲ್ಲಾ ವರ್ಗಗಳಿಗೆ ಕನಿಷ್ಠ ಶೇ. 70 ಆಗಿರಬೇಕು.
  6. ಮಹಿಳಾ ಅಭ್ಯರ್ಥಿಗಳು ಮಾತ್ರ ಅಜ್ರಿ ಸಲ್ಲಿಸಬೇಕು.

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸಿದ ದಿನಾಂಕದಂದು 16 ರಿಂದ 20 ವರ್ಷಗಳು: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಎರಡು ವರ್ಷಗಳವರೆಗೆ ವಯೋಮಿತಿ ಸಡಿಲಿಕೆ.

ತರಬೇತಿ

ಆಯ್ಕೆಯಾದ ಅಭ್ಯರ್ಥಿಗಳು ಅಪ್ರೆಂಟಿಸ್ಶಿಪ್ ಕಾಯಿದೆ 1961ರ ಪ್ರಕಾರ ಮೆಕ್ಯಾನಿಕ್ ಅಟೋ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್(Mechanic Auto Electrical and Electronics) ಟ್ರೇಡ್ ನಲ್ಲಿ 2 ವರ್ಷದವರೆಗೆ ಅಪ್ರೆಂಟಶ್ಸಿಪ್ ತರಬೇತಿಯನ್ನು ಪಡೆಯಬೇಕಾಗುತ್ತದೆ

ಆಯ್ಕೆ ಪ್ರಕ್ರಿಯೆ

  1. ಲಿಖಿತ ಪರೀಕ್ಷೆ
  2. ವಯಕ್ತಿಕ ಸಂದರ್ಶನ
  3. ವೈದ್ಯಕೀಯ ಪರೀಕ್ಷೆ

ಎನ್‌.ಟಿ.ಟಿಎಪ್ ಜೊತೆ ಸಹಭಾಗಿತ್ವದಲ್ಲಿ ನಡೆಯುವ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಇದಾಗಿದ್ದು, ಮೂರು ವರ್ಷದ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್ ಇದಾಗಿದ್ದು, ಈ ತರಬೇತಿ ಮತ್ತು ವಿದ್ಯಾಭ್ಯಾಸದ ಮೂರು ವರ್ಷ ಪೂರ್ಣಗೊಳಿಸಿ ಪಾಸಾಗುವ ವಿದ್ಯಾರ್ಥಿನಿಯರಿಗೆ ಡಿಪ್ಲೋಮಾ ಪೂರ್ಣಗೊಳಿಸಿರುವ ಕುರಿತು ಧಾರವಾಡದ ಎನ್.ಟಿ.ಟಿ.ಎಫ್ ಮಾನ್ಯತೆ ಇರುವ ಮಾರ್ಕ್ಸಕಾರ್ಡ್ ಮತ್ತು ಸರ್ಟಿಫಿಕೆಟ್ ಸಿಗಲಿದೆ.

ಈ ಎಲ್ಲ ಪ್ರಕ್ರಿಯೆಗಳು ಉಚಿತವಾಗಿದ್ದು, ಆಸಕ್ತರು 8431872105, 7022871540, 9110479229, 9845513016 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಗಿರೀಶ ಎಸ್. ಅಂಗಡಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌