ವಿಜಯಪುರ: ಯುವ ಜನರು ನಮ್ಮ ಹಿಂದಿನ ಗತಕಾಲದ ವೈಭವವನ್ನು ಅರಿಯುವ ದೃಷ್ಟಿಕೋನ ಹೊಂದಿರಬೇಕು. ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಸಿಕಾಬ್ ಎ.ಆರ್.ಎಸ್.ಐ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಎಸ್. ಮೇತ್ರಿ ಹೇಳಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣ, ಧಾರವಾಢ ವಲಯದ ವತಿಯಿಂದ ಗೋಳಗುಮ್ಮಟದ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸವನ್ನು ತಿಳಿಯದವನ್ನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಮಾತಿದೆ. ಅದರಂತೆ ತಮ್ಮ ಊರಿನಲ್ಲಿ ಮಹತ್ವಪೂರ್ಣ ದಾಖಲೆಗಳು ಹಾಳಾಗುತ್ತಿದ್ದರೆ, ಅವುಗಳನ್ನು ವಸ್ತುಸಂಗ್ರಹಾಲಯದಲ್ಲಿ ತಂದು ಕೊಟ್ಟರೆ ತಮ್ಮ ಊರಿನ ವಿಳಾಸ, ಮತ್ತು ತಂದು ಕೊಟ್ಟವರ ಹೆಸರು ಹಾಕುವುದರ ಜೊತೆಗೆ ಅದರ ಸಂರಕ್ಷಣೆಯನ್ನು ಜವಾಬ್ದಾರಿಯನ್ನು ಮಾಡುತ್ತಾರೆ. ಹೀಗಾಗಿ ಯಾವುದೇ ಐತಿಹಾಸಿಕ ಮಹತ್ವವುಳ್ಳ ಪ್ರಾಚ್ಯಾವೇಶಗಳನ್ನು ನಾಶವಾಗದಂತೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತವು ಅನೇಕ ವೈವಿಧ್ಯಮಯ ಸಾಂಸ್ಕöÈತಿಕ ಪರಂಪರೆಯನ್ನು ಹೊಂದಿದೆ. ಅವುಗಳು ಮುಂದಿನ ಜನಾಂಗಕ್ಕೆ ಸ್ಪೂರ್ತಿದಾಯಕ ಚರಿತ್ರೆ, ಕಥೆಗಳು ಹೇಳುತ್ತವೆ. ಅವುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಹಾಗೂ ನಮ್ಮ ಮುಂದಿನ ಜನಾಂಗದವರಿಗೆ ತಲುಪಿಸುವ ಕೆಲಸ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ವಿ. ಬಿ. ದರಬಾರ ಪಿ. ಯು ಕಾಲೇಜಿನ ಇತಿಹಾಸ ವಿಭಾಗದ ಅನಿಲಕುಮಾರ್ ಜಿ. ಥೊಬ್ಬಿ ಮಾತನಾಡಿ, ವಸ್ತುಸಂಗ್ರಹಾಲಯಗಳು ಜನಸಾಮಾನ್ಯರಲ್ಲಿ ನಮ್ಮ ಸಾಂಸ್ಕೃತಿಕ ಸಂಪತ್ತಿನ ಅರಿವನ್ನು ಮೂಡಿಸಲು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಅಂತಾರಾಷ್ಟೀಯ ವಸ್ತುಸಂಗ್ರಹಾಲಯದ ದಿನಾಚರಣೆಯ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ಮತ್ತು ಇಲಾಖೆಯ ಸರ್ಟಿಪೀಕೆಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆರ್. ಎಂ. ಕರ್ಜಗಿ, ವಿಷ್ಣುತ್ ಗೌಡ, ವಸ್ತುಸಂಗ್ರಹಾಲಯ, ವಿಜಯಪುರ ಉಪವಲಯ ಹಾಗೂ ಗಾರ್ಡನ್ ಸಿಬ್ಭಂದಿವರ್ಗ, ಪ್ರವಾಸಿಮಿತ್ರರು, ವಿ. ಬಿ. ದರಬಾರ ಹೈಸ್ಕೂಲು ಮತ್ತು ಬಿಸಿಎಂ ವಿದ್ಯಾರ್ಥಿನಿಯರ ವಸತಿಗೃಹದ ಹಾಗೂ ನಾನಾ ಶಾಲೆಗಳ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.
ಸುರೇಶ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು,