ವಿಜಯಪುರ: ಉಪವಿಭಾಗಾಧಿಕಾರಿ ಶ್ವೇತಾ ಮೋಹನ ಬಿಡಿಕರ ನಗರದ ನಾನಾ ಹೋಟೇಲುಗಳಿಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಸ್ವಚ್ಛ ಗ್ರೀನ್ ಲೀಫ್ ರೇಟಿಂಗ್ ಇನ್ ಹಾಸ್ಪಿಟ್ಯಾಲಿಟಿ ಫೆಸಿಲಿಟೀಸ್(Swachchta Green Leaf Rating in Hospitality facilities) ಗೆ ಸಂಬಂಧಿಸಿದಂತೆ ರೇಟಿಂಗ್ ನೀಡುವ ಸಂಬಂಧ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಪ್ರವಾಸೋದ್ಯಮ ತಾಣದ ಸುತ್ತಮುತ್ತಲಿರುವ ಹೋಟೆಲ್ ಗಳಾದ ಕೆರೈಡ್ ಹೋಟೆಲ್, ಹೊಟೇಲ್ ಮಧುವನ ಇಂಟರನ್ಯಾಷನಲ್, ದಿ ಗ್ರಾಂಡ್ ಪರ್ಲ್ ಹೋಟೆಲ್, ಸ್ಪೂರ್ತಿ ರೆಸಾರ್ಟ್, ದಿ ಫರ್ನ್ ಪ್ರೆಸಿಡೆನ್ಸಿ ಹೋಟೆಲ್, ಟೌನ್ ಪ್ಯಾಲೇಸ್ ಹೋಟೆಲಗಳಿಗೆ ಭೇಟಿ ಯೋಜನೆಯ ನಿಯಮಾನಸಾರ ಹೋಟೆಲ್ ನಲ್ಲಿರುವ ವ್ಯವಸ್ಥೆಗಳನ್ನು ಅವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿಜಯಪುರ ತಹಸೀಲ್ದಾರ ಕವಿತಾ, ನಾನಾ ಇಲಾಖೆಗಳ ಅಧಿಕಾರಿಗಳಾದ ಅನಿಲಕುಮಾರ ಬಣಜಿಗೇರ, ಪಾಠಕ, ಪುನೀತ ಕೆಲೂರು, ರತನಸಿಂಗ್ ಮುಂತಾದವರು ಉಪಸ್ಥಿತರಿದ್ದರು.