ಬೆಳೆಹಾನಿ ಪರಿಹಾರ: ರಾಜ್ಯದಲ್ಲಿ ವಿಜಯಪುರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ರೈತರ ಖಾತೆಗೆ ಜಮೆ

ವಿಜಯಪುರ: 2023ನೇ ವರ್ಷದ ಮುಂಗಾರು ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರಧನ ವಿಚಾರದಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ರೈತರ ಖಾತೆಗೆ ಜಮೆಯಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, 2023ನೇ ಸಾಲಿನ ಮುಂಗಾರು ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರಧನವು ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಒಟ್ಟು ರೂ. 413.48.76 ಕೋ. ಗಣ ಜಿಲ್ಲೆಯ ಒಟ್ಟು 2 ಲಕ್ಷ 50 ಸಾವಿರದ 63 ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮೆಯಾಗಿದೆ. ಆದರೂ ಕೂಡ ಜಿಲ್ಲೆಯಲ್ಲಿ ಇನ್ನೂ ಒಟ್ಟು 18727 ಫಲಾನುಭವಿಗಳಿಗೆ ನಾನಾ ಕಾರಣಗಳಿಂದಾಗಿ ಪರಿಹಾರ ಧನ ಜಮೆಯಾಗಿಲ್ಲ.

ಆಧಾರ ಕಾರ್ಡ ಮತ್ತು ಪರಿಹಾರ ಬಯಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಹೆಸರು ಹೊಂದಾಣಿಕೆ ಆಗದಿರುವುದು, ಆಧಾರ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿರುವುದು ಹಣ ಜಮೆ ಆಗದಿರಲು ಪ್ರಮುಖ ಕಾರಣವಾಗಿವೆ. ಹೀಗಾಗಿ ಒಟ್ಟು 15,459 ಫಲಾನುಭವಿಗಳಿಂದ ಅವಶ್ಯಕ ದಾಖಲೆಗಳನ್ನು ಪಡೆದು, ಮಾಹಿತಿಯನ್ನು ಸರಿಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ.

ಅಷ್ಟೇ ಅಲ್ಲ, ಸ್ಥಳಾಂತರ ಅಥವಾ ವಲಸೆ ಇಲ್ಲವೇ ಬೇರೆ ಗ್ರಾಮ ಅಥವಾ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳ ದಾಖಲೆಗಳನ್ನು ಪಡೆದು ಸರಿಪಡಿಸಲು ಆಗದಿರುವುದರಿಂದ ಅಂಥ ಫಲಾನುಭವಿಗಳಿಗೆ ಬೆಳೆಹಾನಿಯ ಪರಿಹಾರಧನವನ್ನು ಜಮೆ ಮಾಡಲು ಆಗುತ್ತಿರುವುದಿಲ್ಲ. ಅಂಥ ಫಲಾನುಭವಿಗಳ ಪಟ್ಟಿಯನ್ನು ಆಯಾ ತಾಲೂಕಿನ ತಹಸೀಲ್ದಾರ ಕಚೇರಿ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಚಾವಡಿಗಳಲ್ಲಿ ಪ್ರದರ್ಶಿಸಲಾಗಿದೆ. ಸ್ಥಳಾಂತರ, ವಲಸೆ, ಬೇರೆ ಗ್ರಾಮ, ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳು ಕೂಡಲೇ ಸಂಭಂದಿಸಿದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂರು ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಬೆಳೆಹಾನಿಗೆ ಪರಿಹಾರ ಧನ ಜಮೆ ಮಾಡುವ ಕುರಿತು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಇಂಥ ಫಲಾನುಭವಿಗಳ ಸಂಬಂಧಿಕರು ಸಹ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಫಲಾನುಭವಿಗಳಿಗೆ ತಿಳಿಸಬೇಕು. ಇಲ್ಲವಾದರೆ ಬೆಳೆ ಹಾನಿಯ ಪರಿಹಾರ ಜಮೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ‌.

ತಾಲೂಕಾವಾರು ಪ್ರಕರಣಗಳ
ವಿವರ

ವಿಜಯಪುರ-85, ತಿಕೋಟಾ-72, ಬಬಲೇಶ್ವರ-123, ಬ.ಬಾಗೇವಾಡಿ-182, ನಿಡಗುಂದಿ-62, ಕೋಲ್ಹಾರ-114, ಮುದ್ದೇಬಿಹಾಳ-166, ತಾಳಿಕೋಟಿ-105, ಇಂಡಿ-90, ಚಡಚಣ-139, ಸಿಂದಗಿ-78, ದೇ.ಹಿಪ್ಪರಗಿ-15, ಆಲಮೇಲ-105 ಹೀಗೆ ಒಟ್ಟು 1336.

Leave a Reply

ಹೊಸ ಪೋಸ್ಟ್‌