ಪುರಾಣ ಪ್ರವಚನ ಕೇಳುವುದರಿಂದ ಮನಸು ಹಸನಾಗುತ್ತದೆ- ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ

ವಿಜಯಪುರ: ಪುರಾಣ ಪ್ರವಚನ ಕೇಳುವುದರಿಂದ ಮನಸು ಹಸನಾಗುತ್ತದೆ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು  ಹೇಳಿದ್ದಾರೆ.

ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದ ಆವರಣದಲ್ಲಿ ನಡೆದ ಲಿಂಗೈಕ್ಯ ಶತಾಯುಷಿ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ.41 ಪುಣ್ಯಸ್ಮರಣೋತ್ಸವ ಮತ್ತು ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಅ;ರು ಮಾತನಾಡಿದರು.

ಪುರಾಣ ಪ್ರವಚನ ಕೇಳುವುದರಿಂದ ಮನುಷ್ಯನಿಗೆ ಸಂಸ್ಕಾರ ತಿಳಿಯುತ್ತದೆ.  ಸಂಸಾರದ ಈ ಜಂಜಾಟದಲ್ಲಿ ಪ್ರತಿದಿನ ಚಿಂತೆ ಮಾಡುವುದನ್ನು ಬಿಟ್ಟು ಎಲ್ಲಿ ಪುರಾಣ ಪ್ರವಚನಗಳು ನಡೆಯುತ್ತವೆಯೋ ಅಲ್ಲಿಗೆ ಹೋಗಿ ನಾಲ್ಕು ನುಡಿಗಳನ್ನು ಕೇಳಬೇಕು.  ಇದರಿಂದ ನಮ್ಮ ಜೀವನ ಹಸನಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಮನಗೂಳಿ ಹಿರೇಮಠ ಜಿಲ್ಲೆಯಲ್ಲಿ ಅದರದೇ ಆದ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದೆ.  ಹಿಂದಿನ ಗುರುಗಳು ಮಾಡಿದ್ದ ಸಂಕಲ್ಪಗಳನ್ನು ಈಗಿನ ಸ್ವಾಮೀಜಿ ಈಡೇರಿಸುತ್ತಿದ್ದಾರೆ.  ಈ ಮೂಲಕ ಮಠದ ಕೀರ್ತಿಯನ್ನು ಬೆಳಗುತ್ತಿದ್ದಾರೆ.  ಕೇವಲ ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಈರಪ್ಪ ಹುಣಸಿಕಟ್ಟಿ, ರಾಮು ಬಿರಾದಾರ, ಯಂಕಪ್ಪ ಬನ್ನೂರು, ಹೊನ್ನಿಗನೂರಿನ ಪ್ರವಚನಕಾರ ವಿರುಪಾಕ್ಷಿ ಶಾಸ್ತ್ರಿ ಲಿಂಗಸಗೂರಿನ ಅಂಬರೀಶ ಗವಾಯಿ, ತಬಲಾ ವಾದಕ ಮಲ್ಲೇಶಕುಮಾರ ಮದ್ಲಾಪುರ, ಗ್ರಾಮದ ಹಿರಿಯರು, ಮಹಿಳೆಯರು, ಯುವಕರು, ಮಠದ ಭಕ್ತರು ಉಪಸ್ಥಿತರಿದ್ದರು.

ಮಾಂತೇಶ ಮನಗೂಳಿ ನಿರೂಪಿಸಿದರು.  ಶ್ರವಣ ಕೋಟ್ಯಾಳ ವಂದಿಸಿದರು.

Leave a Reply

ಹೊಸ ಪೋಸ್ಟ್‌