ವಿಜಯಪುರ: ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ತೊರವಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಏಳು ದಿನಗಳ ಎನ್.ಎಸ್.ಎಸ್ ಶಿಬಿರದ ಅಂಗವಾಗಿ ಮಂಗಳವಾರ ಜಲ ಸಂರಕ್ಷಣೆ ಅಭಿಯಾನದ ಉದ್ಘಾಟನೆ ನಡೆಯಿತು.
ಪರಿಸರ ತಜ್ಞ ಮತ್ತು ಹೈ ಲರ್ನ್ ಎಜ್ಯುಟೆಕ್ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿದ್ದರು. ಸಿರಾಜುದ್ದೀನ್ ಹೊರಗಿನಮನಿ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಪರಿಸರ ಮತ್ತು ಜಲಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕುರಿತು ಎನ್.ಎಸ್.ಎಸ್ ಶಿಬಿರಾರ್ಥಿಗಳು ಜನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇದೇ ವೇಳೆ ತೊರವಿ ಗ್ರಾಮದ ಹನುಮಂತ ದೇವಸ್ಥಾನದ ಆವರಣದಲಿ ಜಲ ಸಂರಕ್ಷಣೆ ಅಭಿಯಾನ ಕುರಿತು ಜನಜಾಗೃತಿ ಜಾಥಾ ಮತ್ತು ಬೀದಿ ನಾಟಕ ನಡೆಯಿತು.
ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕ ಡಾ. ರಾವ್ ಸಾಹೇಬ ಎ. ದೇಶಮುಖ, ಬಿ.ಎಲ್.ಡಿ.ಈ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ಸುನಿತಾ, ಕಾಲೇಜಿನ ಎನ್.ಎಸ್.ಎಸ್ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.