ಸಂಸ್ಕೃತ, ವೈದಿಕ ಸಂಸ್ಕಾರ ಒಂದು ತಿಂಗಳ ಶಿಬಿರ ಮುಕ್ತಾಯ- ಸಮಾರೋಪ ಸಮಾರಂಭದಲ್ಲಿ ನಾಗಠಾಣ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಭಾಗಿ

ವಿಜಯಪುರ: ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಮತ್ತು ಗುರುಪಾದಯ್ಯ ಶ್ರೀಶೈಲ ಗಚ್ಚಿನಮಠ ಇವರ ಸಹಯೋಗದೊಂದಿಗೆ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿಆಯೋಜಿಸಲಾಗಿದ್ದ ಸಂಸ್ಕೃತ ಮತ್ತು ವೈದಿಕ ಸಂಸ್ಕಾರ ಕುರಿತ ಒಂದು ತಿಂಗಳ ಶಿಬಿರ ಮುಕ್ತಾಯವಾಗಿದೆ.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಾಗಠಾಣ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ, ವೀರಶೈವ ಪರಂಪರೆಯಲ್ಲಿ ಆಚಾರ, ವಿಚಾರ, ವೈದಿಕತ್ವ ಸಂಸ್ಕಾರಗಳಂಥ ಶಿಬಿರಗಳನ್ನು ಆಯೋಜಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಇದೇ ವೇಳೆ ಗುರುಪಾದಯ್ಯ ಗಚ್ಚಿನಮಠ ಮತ್ತು ವಿಜಯಮಾಹಾಂತೇಶ್ವರಿ ಗುರುಪಾದಯ್ಯ ಗಚ್ಚಿನಮಠ ದಂಪತಿಯ 25ನೇ ವಿವಾಹ ವಾರ್ಷಿಕೋತ್ಸವ ಹಾಗೂ ಸೇವಾ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕಿ ಮಾಹಾದೇವಿ ಗುರುಯ್ಯ ಬೂದಿಹಾಳಮಠ ಅವರಿಗೆ ಸನ್ಮಾನ ಸಮಾರಂಭ ಕೂಡ ನಡೆಯಿತು.

ಈ ಶಿಬಿರದಲ್ಲಿ ಪಾಲ್ಗೋಂಡ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.  ಅಲ್ಲದೇ, ತಂದೆ-ತಾಯಿಯ ಪಾದ ಪೂಜೆ ಕೂಡ ನಡೆಯಿತು.

ಈ ಸಂದರ್ಭದಲ್ಲಿ ಚಿದಾನಂದ ಹೀರೆಮಠ, ಸಚೀನ ಬೂದಿಹಾಳಮಠ, ಸಚೀನ ಮಠಪತಿ, ಸದ್ದೊಜಾತ ಹೀರೆಮಠ, ಸಂಗಮೇಶ ಗುಣಕಿಮಠ, ಮಲ್ಲಿಕಾರ್ಜುನ ಹೀರೆಮಠ, ಅಭೀಷೆಕ ಪಾಟೀಲ, ಎಂ. ಕೆ. ಹೀರೆಮಠ, ಶ್ರೀಮಂತ ಜಂಬಗಿ, ಬಸವರಾಜ ಮೇಡ್ಲಿ, ಮಂಜುನಾಥ ಹೀರೆಮಠ, ಅರವಿಂದ ಹೀರೆಮಠ, ಪ್ರಸಾದ ಯಡಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌