ಬಸವನಾಡಿನಲ್ಲಿ ವಿಧಾನ ಸಭೆ ಕ್ಷೇತ್ರವಾರ ಬಿಜೆಪಿ, ಕಾಂಗ್ರೆಸ್ ಪಡೆದ ಮತಗಳು ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಪ್ರೊ. ರಾಜು ಆಲಗೂರ ಅವರ ವಿರುದ್ಧ ಭರ್ಜರಿ ಜಯಗಳಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿರುವ ಒಟ್ಟು ಒಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಆರರಲ್ಲಿ ಕಾಂಗ್ರೆಸ್, ತಲಾ ಒಂದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿದ್ದಾರೆ.  ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ, ನಾಗಠಾಣ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.  ಈ ಮತಕ್ಷೇತ್ರಗಳಲ್ಲಿ ರಮೇಶ ಜಿಗಜಿಣಗಿ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತಲೂ ಅತೀ ಹೆಚ್ಚು ಮತ ಪಡೆದಿದ್ದಾರೆ.  ಮತ್ತೋಂದೆಡೆ ದೇವರ ಹಿಪ್ಪರಗಿಯಲ್ಲಿ ಜೆಡಿಎಸ್ ಶಾಸಕರಿರುವ ಕಡೆಯೂ ಕಾಂಗ್ರೆಸ್ ಅಭ್ಯರ್ಥಿಗಿಂತ ಹೆಚ್ಚು ಮತ ಗಳಿಸಿ ಗಮನ ಸೆಳೆದಿದ್ದಾರೆ.

ಮತ್ತೋಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಬಿಜೆಪಿ ಶಾಸಕರಿರುವ ವಿಜಯಪುರ ನಗರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾರೆ.

ಈ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು 77229 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ರಮೇಶ ಜಿಗಜಿಣಗಿ ಪಡೆದ ಮತಗಳು- 672781

ಪ್ರೊ. ರಾಜು ಆಲಗೂರ ಪಡೆದ ಮತಗಳು- 595552

ರಮೇಶ ಜಿಗಜಿಣಗಿ ಗೆಲುವಿನ ಅಂತರ- 77229.

ವಿಜಯಪುರ ಜಿಲ್ಲೆಯ ಒಟ್ಟು ಎಂಟು ವಿಧಾನ ಸಭೆ ಮತಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಗಳಿಸಿರುವ ಮತಗಳು ಮತ್ತು ಅಂತರದ ಮಾಹಿತಿ ಇಲ್ಲಿದೆ.

ಮುದ್ದೇಬಿಹಾಳ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 72650

ಪ್ರೊ. ರಾಜು ಆಲಗೂರ ಪಡೆದ ಮತಗಳು- 68688

ಬಿಜೆಪಿ ಪಡೆದ ಮತಗಳ ಅಂತರ- 3962

 

ದೇವರ ಹಿಪ್ಪರಗಿ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 72569

ಪ್ರೊ. ರಾಜು ಆಲಗೂರ ಪಡೆದ ಮತಗಳು- 63543

ಬಿಜೆಪಿ ಪಡೆದ ಮತಗಳ ಅಂತರ- 9026

 

ಬಸವನ ಬಾಗೇವಾಡಿ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 83916

ಪ್ರೊ. ರಾಜು ಆಲಗೂರ ಪಡೆದ ಮತಗಳು- 66363

ಬಿಜೆಪಿ ಪಡೆದ ಮತಗಳ ಅಂತರ- 17553

ಬಬಲೇಶ್ವರ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 79002

ಪ್ರೊ. ರಾಜು ಆಲಗೂರ ಪಡೆದ ಮತಗಳು- 75651

ಬಿಜೆಪಿ ಪಡೆದ ಮತಗಳ ಅಂತರ- 3351

 

ವಿಜಯಪುರ ನಗರ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 83714

ಪ್ರೊ. ರಾಜು ಆಲಗೂರ ಪಡೆದ ಮತಗಳು- 92984

ಕಾಂಗ್ರೆಸ್ ಪಡೆದ ಮತಗಳ ಅಂತರ- 9270

 

ನಾಗಠಾಣ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 96158

ಪ್ರೊ. ರಾಜು ಆಲಗೂರ ಪಡೆದ ಮತಗಳು- 84373

ಬಿಜೆಪಿ ಪಡೆದ ಮತಗಳ ಅಂತರ- 11785

 

ಇಂಡಿ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 95064

ಪ್ರೊ. ರಾಜು ಆಲಗೂರ ಪಡೆದ ಮತಗಳು- 69340

ಬಿಜೆಪಿ ಪಡೆದ ಮತಗಳ ಅಂತರ- 25724

 

ಸಿಂದಗಿ ವಿಧಾನಸಭೆ ಮತಕ್ಷೇತ್ರ

ರಮೇಶ ಜಿಗಜಿಣಗಿ(ಬಿಜೆಪಿ) ಪಡೆದ ಮತಗಳು- 85982

ಪ್ರೊ. ರಾಜು ಆಲಗೂರ ಪಡೆದ ಮತಗಳು- 72335

ಬಿಜೆಪಿ ಪಡೆದ ಮತಗಳ ಅಂತರ- 13647.

 

ಅಂಚೆ ಮತಗಳ ಮಾಹಿತಿ

ರಮೇಶ ಜಿಗಜಿಣಗಿ- 3726

ಪ್ರೊ. ರಾಜು ಆಲಗೂರ- 2275.

Leave a Reply

ಹೊಸ ಪೋಸ್ಟ್‌