ಜಿಗಜಿಣಗಿ ಈಗ ಸಪ್ತ ಗೆಲುವಿನ ಸರದಾರ- ಆಲಗೂರಗೆ ಸಿಗಲಿಲ್ಲ ಗೆಲುವಿನ ಹಾರ

ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಸಂಸದ ರಮೇಶ ಜಿಗಜಿಣಗಿ ಸತತ ಏಳನೇ ಬಾರಿಗೆ ಸಂಸದರಾಗಿ ಆಯ್ಗೆಯಾಗುವ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್ ಗ್ಯಾರಂಟಿ ಅಲೆಯನ್ನು ಬದಿಗೆ ಸರಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 77552 ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರೊ. ರಾಜು ಆಲಗೂರ ಅವರನ್ನು ಸೋಲಿಸಿದ್ದಾರೆ.  ಈ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ 6 ಲಕ್ಷ 72 ಸಾವಿರದ 781 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ 595552 ಮತಗಳನ್ನು ಪಡೆದರು.  ಈ ಮೂಲಕ ರಮೇಶ ಜಿಗಜಿಣಗಿ 77ಸಾವಿರದ 229 ಮತಗಳ ಅಂತರದಿಂದ ಪ್ರೊ. ರಾಜು ಆಲಗೂರ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು.

ವಿಜಯಪುರ ಸಂಸದರಾಗಿ ಸತತ ನಾಲ್ಕನೇ ಬಾರಿ ಆಯ್ಗೆಯಾದ ರಮೇಶ ಜಿಗಜಿಣಗಿ ಅವರಿಗೆ ಡಿಸಿ ಟಿ. ಭೂಬಾಲನ್ ಗೆಲುವಿನ ಸರ್ಟಿಫಿಕೆಟ್ ನೀಡಿದರು.

ಈ ಮುಂಚೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಸತತ ಮೂರು ಸಲ ಮೂರು ಬೇರೆ ಬೇರೆ ಪಕ್ಷಗಳಿಂದ ಸಂಸದರಾಗಿ ಆಯ್ಕೆಯಾಗಿದ್ದ ರಮೇಶ ಜಿಗಜಿಣಗಿ ತಮ್ಮ ತವರು ಜಿಲ್ಲೆಗೆ ವಾಪಸ್ಸಾಗಿ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸತತ ಸತತ ನಾಲ್ಕನೇ ಬಾರಿ(ಚಿಕ್ಕೋಡಿ ಸೇರಿದರೆ ಬಿಜೆಪಿಯಿಂದ 5ನೇ ಬಾರಿ) ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಸಂಜೆ 5 ಗಂಟೆ ಸುಮಾರಿಗೆ ಸಂಪೂರ್ಣ ಮತ ಎಣಿಕೆ ಮುಗಿದ ಬಳಿಕ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಂದ ಸಂಸದ ರಮೇಶ ಜಿಗಜಿಣಗಿ ಆಯ್ಕೆಯ ಸರ್ಟಿಫಿಕೆಟ್ ಪಡೆದರು.  ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂಗಮೇಶ ಹೌದೆ, ರಾಜಶೇಖರ ಮಗಿಮಠ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ. ಪಂ. ಸಿಇಓ ರಿಶಿ ಆನಂದ, ಎಸ್ಪಿ ಋಷಿಕೇಶ ಸೋನಾವಣೆ, ಚುನಾವಣೆ ಅಧಿಕಾರಿ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌