ವಿಜಯಪುರ ಪ್ಯಾರಾ ಮೆಡಿಕಲ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ವಿಜಯಪುರ: ಆರೋಗ್ಯ ಇಲಾಖೆ ಹಾಗೂ ಸರಕಾರಿ ನರ್ಸಿಂಗ್ ಮಹಾವಿದ್ಯಾಲಯ, ಸರಕಾರಿ ನರ್ಸಿಂಗ್ ಶಾಲೆ ವಿಜಯಪುರ ಸಹಯೋಗದಲ್ಲಿ ಜೂ.5 ರಂದು ವಿಜಯಪುರದ ಪ್ಯಾರಾಮೆಡಿಕಲ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಸಿದೇಶ್ವರ ಸ್ವಾಮಿಗಳ ವನದಲ್ಲಿರುವ 600 ಮತ್ತು ಬೃಂದಾವನದಲ್ಲಿರುವ 700 ಸಸಿಗಳಿಗೆ ನೀರುಣಿಸುವ ಮೂಲಕ ಪರಿಸರ ಪ್ರಜ್ಞೆ ಮೆರೆಯಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೋಳಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ಚಂದು ರಾಠೋಡ ಮತ್ತು ಡಾ. ಎ. ಜಿ. ಬಿರಾದಾರ, ನರ್ಸಿಂಗ ವಿಭಾಗದ ಸಿಬ್ಬಂದಿಯಾದ ಸುಜಾತಾ ಭಜಂತ್ರಿ, ವೀಣಾ ಕುಲಕರ್ಣಿ, ಭಾರತಿ ಸೂರಗಾವಿ, ನರ್ಸಿಂಗ ಮಹಾವಿದ್ಯಾಲಯದ ಗೀತಾ ತರವಿ, ಭಾರತಿ ಮೋಕಾಶಿ, ಭೋದಕ ಸಿಬ್ಬಂದಿ, ವಿದ್ಯಾರ್ಧಿಗಳು ಉಪಸ್ತಿತರಿದ್ದರು.

Leave a Reply

ಹೊಸ ಪೋಸ್ಟ್‌