ವಿಜಯಪುರ ಜಿಲ್ಲಾದ್ಯಂತ ಮಳೆ: ತಡವಲಗಾದಲ್ಲಿ ಅತ್ಯಧಿಕ 8.50 ಸೆಂ. ಮೀ., ಚಡಚಣದಲ್ಲಿ 3.50 ಸೆಂ. ಮಿ. ಮಳೆ. ಉಳಿದೆಡೆ ಎಷ್ಟು ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆಜಿಲ್ಲೆಯ ಇಂಡಿ ತಾಲೂಕಿನ ತಡವಲಗಾದಲ್ಲಿ ಅತ್ಯಧಿಕ 8.50 ಸೆಂ. ಮೀ. ಮಳೆಯಾಗಿದ್ದು, ಚಡಚಣ ಪಟ್ಟಣದಲ್ಲಿ 3.50 ಸೆಂ. ಮೀ. ಮಳೆ ದಾಖಲಾಗಿದೆ.  

 

ಇದೇ ರೀತಿ ಜಿಲ್ಲಾದ್ಯಂತ ಕೂಡ ಅತ್ಯುತ್ತಮ ಮಳೆಯಾಗಿದೆ.  ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ಮಾಹಿತಿ ಇಲ್ಲಿದೆ.

  1. ಇಂಡಿ ತಾಲೂಕು- ತಡವಲಗಾ- 8.50 ಸೆಂ. ಮೀ
  2. ಇಂಡಿ ತಾಲೂಕು- ಬೆನಕನಹಳ್ಳಿ- 3.60 ಸೆಂ. ಮೀ.
  3. ಇಂಡಿ ತಾಲೂಕು- ಲಾಳಸಂಗಿ- 4.40 ಸೆಂ. ಮೀ.
  4. ಕೊಲ್ಹಾರ ತಾಲೂಕು- ಕೂಡಗಿ- 7.50 ಸೆಂ. ಮೀ.
  5. ಬಬಲೇಶ್ವರ ತಾಲೂಕು- ಅರ್ಜುಣಗಿ- 6.15 ಸೆಂ. ಮೀ.
  6. ಸಿಂದಗಿ ತಾಲೂಕು- ಗುಬ್ಬೆವಾಡ- 5.65 ಸೆಂ. ಮೀ.
  7. ಆಲಮೇಲ ತಾಲೂಕು- ಮೊರಟಗಿ- 3.60 ಸೆಂ. ಮೀ.
  8. ಬಸವನ ಬಾಗೇವಾಡಿ ತಾಲೂಕು- ಮಾರಕಬ್ಬಿನಹಳ್ಳಿ- 5.35 ಸೆಂ. ಮೀ.
  9. ಬಸವನ ಬಾಗೇವಾಡಿ ತಾಲೂಕು- ಯರನಾಳ- 4.80 ಸೆಂ. ಮೀ.
  10. ಚಡಚಣ ತಾಲೂಕು- ಚಡಚಣ- 3.55 ಸೆಂ. ಮೀ.

 

ವಿಜಯಪುರ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು  ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೋಶದ ಮಾಹಿತಿದ ಮೂಲಗಳು ಮಾಹಿತಿ ನೀಡಿವೆ.

Leave a Reply

ಹೊಸ ಪೋಸ್ಟ್‌