ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಅತ್ಯಧಿಕ 9.65 ಸೆಂ. ಮೀ. ಮಳೆಯಾಗಿದ್ದು, ಮುದ್ದೇಬಿಹಾಳ ತಾಲೂಕಿನ ಹಡಲಗೇರಿಯಲ್ಲಿ 4 ಸೆಂ. ಮೀ. ಮಳೆ ದಾಖಲಾಗಿದೆ.
ಇದೇ ರೀತಿ ಜಿಲ್ಲಾದ್ಯಂತ ಕೂಡ ಅತ್ಯುತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ಮಾಹಿತಿ ಇಲ್ಲಿದೆ.
1. ಕೊಲ್ಹಾರ ತಾಲೂಕು- ಆಲಮಟ್ಟಿ 9.65 ಸೆಂ. ಮೀ
2. ತಿಕೋಟಾ ತಾಲೂಕು- ತಾಜಪುರ ಎಚ್- 7.05 ಸೆಂ. ಮೀ.
3. ಬಸವನ ಬಾಗೇವಾಡಿ ತಾಲೂಕು- ಇಟಗಿ- 7ಸೆಂ. ಮೀ.
4. ಚಡಚಣ ತಾಲೂಕು- ರೇವತಗಾಂವ- 6.65 ಸೆಂ. ಮೀ.
5. ಮುದ್ದೇಬಿಹಾಳ ತಾಲೂಕು- ಕೊಣ್ಣೂರ- 6.65 ಸೆಂ. ಮೀ.
6. ಸಿಂದಗಿ ತಾಲೂಕು- ಸಿಂದಗಿ- 5.70 ಸೆಂ. ಮೀ.
7. ಸಿಂದಗಿ ತಾಲೂಕು- ರಾಂಪುರ(ಪಿಎ)- 55 ಸೆಂ. ಮೀ.
8. ತಿಕೋಟಾ ತಾಲೂಕು- ಅರಕೇರಿ- 5.05 ಸೆಂ. ಮೀ.
9. ಸಿಂದಗಿ ತಾಲೂಕು- ಚಾಂದಕವಟೆ- 4.04ಸೆಂ. ಮೀ.
10. ಮುದ್ದೇಬಿಹಾಳ ತಾಲೂಕು- ಹಡಲಗೇರಿ- 4 ಸೆಂ. ಮೀ.
ವಿಜಯಪುರ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೋಶದ ಮಾಹಿತಿದ ಮೂಲಗಳು ಮಾಹಿತಿ ನೀಡಿವೆ.