ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ಇಂಡಿ ತಾಲೂಕಿನ ಅಲ್ಲಲ್ಲಿ ಭಾರಿ ಮಳೆಯಾಗಿದೆ. ನಿಂಬಾಳ ಕೆಡಿ ಯಲ್ಲಿ ಅತ್ಯಧಿಕ 128 ಮಿ. ಮಿ. ಅಂದರೆ 13.80 ಸೆಂ. ಮೀ. ಮಳೆ ದಾಖಲಾಗಿದೆ.
ಇದೇ ರೀತಿ ಜಿಲ್ಲಾದ್ಯಂತ ಕೂಡ ಅತ್ಯುತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ಮಾಹಿತಿ ಇಲ್ಲಿದೆ.
1. ಇಂಡಿ ತಾಲೂಕು- ನಿಂಬಾಳ ಕೆ. ಡಿ- 128 ಮಿ. ಮೀ.
2. ಇಂಡಿ ತಾಲೂಕು- ಬಬಲಾದ- 116.50 ಮಿ. ಮೀ.
3. ಇಂಡಿ ತಾಲೂಕು- ಬೆನಕನಹಳ್ಳಿ- 98.95 ಮಿ. ಮೀ.
4. ಇಂಡಿ ತಾಲೂಕು- ಹಡಲಸಂಗ- 95 ಮಿ. ಮೀ.
5. ದೇವರ ಹಿಪ್ಪರಗಿ ತಾಲೂಕು- ಮುಳಸಾವಳಗಿ- 117.05 ಮಿ. ಮೀ.
6. ಸಿಂದಗಿ ತಾಲೂಕು- ಸಿಂದಗಿ- 80 ಮಿ. ಮೀ.
7. ಸಿಂದಗಿ ತಾಲೂಕು- ಬ್ಯಾಕೋಡ- 116 ಮಿ. ಮೀ.
8. ಸಿಂದಗಿ ತಾಲೂಕು- ಚಾಂದಕವಟೆ- 95.50 ಮಿ. ಮೀ.
9. ಚಡಚಣ ತಾಲೂಕು- ದೇವರ ನಿಂಬರಗಿ- 101.50 ಮಿ. ಮೀ.
10. ಚಡಚಣ ತಾಲೂಕು- ಚಡಚಣ- 78.50 ಮಿ. ಮೀ.
ವಿಜಯಪುರ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೋಶದ ಮಾಹಿತಿದ ಮೂಲಗಳು ಮಾಹಿತಿ ನೀಡಿವೆ.