ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಜೂ. 15 ಸಿರಿಗೆರೆ ತರಳಬಾಳು ಕಲಾ ಸಂಘದ ವತಿಯಿಂದ ಶರಣ ಸಂಕಲ್ಪ ನೃತ್ಯರೂಪಕ

ವಿಜಯಪುರ: ಸಿರಿಗೆರೆ ತರಳಬಾಳು ಕಲಾ ಸಂಘದ ವತಿಯಿಂದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ಶರಣ ಸಂಕುಲ ನೃತ್ಯರೂಪಕ ಕಾರ್ಯಕ್ರಮ ದಿ.15 ಶನಿವಾರ ಸಂ. 6.30ಕ್ಕೆ ಟೆಗೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆಯಲಿದೆ. 

ಕಳೆದ 25 ವರ್ಷಗಳಿಂದ ದೇಶಾದ್ಯಂತ 12ನೇ ಶತಮಾನದ ಶಿವಶರಣರ ತತ್ವಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೃತ್ಯ, ಸಂಗೀತ ಮತ್ತು ಅಭಿನಯಗಳ ಮೂಲಕ ಪ್ರದರ್ಶಿಸುವ ಶರಣಸಂಕುಲ ಕಾರ್ಯಕ್ರಮ ಇದೀಗ ರಜತ ಮಹೋತ್ಸವ ಆಚರಿಸುತ್ತಿದೆ.

ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಅನುಭವ ಮಂಟಪದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಕ್ಕಮಹಾದೇವಿಗೆ ದೀಕ್ಷೆ ಕೊಡುವ ವಿಶ್ವಬಂಧು ಮರುಳಸಿದ್ಧರು, ಹರಳಯ್ಯ, ನುಲಿಯ ಚಂದಯ್ಯ, ಮೋಳಿಗೆ ಮಾರಯ್ಯ ಅವರ ಬದುಕಿನ ಸಾಧನೆಯನ್ನು ‘ಶರಣ ಸಂಕುಲ’ ಕಾರ್ಯಕ್ರಮದ ಮೂಲಕ ಸಾದರಪಡಿಸುತ್ತಿದ್ದಾರೆ. ಅಲ್ಲದೇ, ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ ಮಲ್ಲ ಕಂಬ ಹಾಗೂ ಮಲ್ಲಿ ಹಗ್ಗ ಸಾಹಸ ಕ್ರೀಡೆಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಅತ್ಯಂತ ವಿಶೇಷವಾಗಿರುವ ಈ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾಲಕರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಸಿರಿಗೆರೆ ತರಳಬಾಳು ಜಗದ್ಗುರು ಪೀಠದ ಭಕ್ತರಾಗಿರುವ ಹಣಮಂತ ಚಿಂಚಲಿ ಕೋರಿದ್ದಾರೆ.

Leave a Reply

ಹೊಸ ಪೋಸ್ಟ್‌