ನೀಟ್ ಪ್ರವೇಶ ಪರಿಕ್ಷೇಯಲ್ಲಿ ಅವ್ಯವಹಾರ ಆರೋಪ- ನ್ಯಾಯಾಂಗ ತನಿಕೆಗೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ನಿಂದ ಮನವಿ ಪತ್ರ ಸಲ್ಲಿಕೆ

ವಿಜಯಪುರ: ನೀಟ್ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿಚೌಕಿನಿಂದ ಅಂಬೇಡ್ಕರ್ ಚೌಕ್ ವರೆಗೆ ಜಾಥಾ ನಡೆಸಿದ ಕಾರ್ಯಕರ್ತರು, ಅಪರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನೀಟ್ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ ಕಾರ್ಯಕರ್ತರು ವಿಜಯಪುರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯಕುಮಾರ, ದೇಶದಲ್ಲಿರುವ ಶೋಷಿತ ಸಮಾಜದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜೀವನವನ್ನೇ ತೆಯ್ದು ಶಿಕ್ಷಣದ ವ್ಯಾಪಾರೀಕರಣದ ವ್ಯವಸ್ಥೆಯ ಮಧ್ಯೆಯೂ ನನ್ನ ಮಗಳು ಮತ್ತು ನನ್ನ ಮಗ ಒಳ್ಳೇ ಶಿಕ್ಷಣ ಪಡೆಯಬೇಕು ಎಂದು ತಾವು ದುಡಿದ ಬೆವರಿನ ಹಣದ ಜೊತೆಗೆ ಜೀವನದಲ್ಲಿ ಕೂಡಿಸಿಟ್ಟ ಹಾಗೂ ಸಾಲಸೋಲ ಮಾಡಿ ವಿದ್ಯಾಭ್ಯಾಸ ಮಾಡಿಸುತ್ತಾರೆ.  ನಮ್ಮ ಮಗ ಮತ್ತು ಮಗಳು ಡಾಕ್ಟರ್ ಆಗಲಿ ಎಂದು ಕಷ್ಟ ಪಡುತ್ತಾರೆ.  ಆದರೆ, ಈ ನೀಟ್ ಪರೀಕ್ಷೆ ಅವರ ಆಸೆಗೆ ಎಳ್ಳು ನೀರು ಬಿಟ್ಟಂತಾಂಗಿದೆ.  ದೇಶದಲ್ಲಿ ಇದರಕ್ಕಿಂತ ದೊಡ್ದ ಭ್ರಷ್ಟಾಚಾರ ಮತ್ತೊಂದಿಲ್ಲ.  ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಈ ಮುಂಚೆ ರಾಜ್ಯ ಮಟ್ಟದಲ್ಲಿ ಜಂಟಿ ಪ್ರವೇಶ ಪರೀಕ್ಷೇಗಳು ಜಾರಿಯಲ್ಲಿದ್ದಾಗ ಭ್ರಷ್ಟಾಚಾರದ ಕಾರಣ ಹೇಳಿ ಅಖಿಲ ಭಾರತ ಮಟ್ಟದ ನಿಟ್ ಪರೀಕ್ಷೆಯನ್ನು ಪ್ರಾಂಬಿಸಲಾಯಿತು.  ಈಗ ಈ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಕ್ಷಯ ಕುಮಾರ ಹೇಳಿದರು.

ಈ ಸಂದರ್ಭದಲ್ಲಿ ದಲಿತ ವಿಧ್ಯಾರ್ಥಿ ಪರಿಷತ್ ಮುಖಂಡರಾದ ಮಾದೇಶ, ಯುವರಾಜ, ಯಾಶಿನ್, ಪ್ರಜ್ವಲ‘, ಗೌಡಪ್ಪಗೌಡ, ಸಂದೇಶ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌