ಗುಮ್ಮಟ ನಗರಿಯಲ್ಲಿ ಬಕ್ರೀದ್ ಆಚರಣೆ- ನಾನಾ ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ‌ ಪ್ರಾರ್ಥನೆ

ವಿಜಯಪುರ: ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರು ಬಕ್ರೀದ್ ಹಬ್ಬವನ್ನು ವಿಜಯಪುರ ಜಿಲ್ಲಾದ್ಯಂತ ಆಚರಿಸಲಾಗುತ್ತಿದೆ.

ಗುಮ್ಮಟ ನಗರಿ ವಿಜಯಪುರದಲ್ಲಿ‌ರು ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹ ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ‌ ಕರುಣಿಸಲಿ ಎಂದು ಪ್ರಾರ್ಥಿಸಿದರು.  ಬಳಿಕ ಪರಸ್ಪರ ಶುಭಾಷಯ ಕೋರಿದರು.

ದಖನಿ‌ ಶಾಹಿ‌ ಈದ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ‌ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವಿರಪೀರಾ ಹಾಶ್ಮಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿ ಪವಿತ್ರ ಸಂದೇಶ ನೀಡಿದರು.

ವಿಜಯಪುರ ನಗರದ ದಖನಿ ಶಾಹಿ ಈದ್ಗಾದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಫಯಾಜ್ ಕಲಾದಗಿ, ಚಾಂದಸಾಬ ಗಡಗಲಾವ, ಬಂದೇನವಾಜ್ ಸಾಂಗಲಿಕರ, ಮೊಹಮ್ಮದ ನಾಸೀಂ ರೋಜಿಂದಾರ, ಫಾರೂಕ್ ಶುತ್ತಾರಿ, ಸಂದಾನಿ ಇನಾಮದಾರ ಸೇರಿದಂತೆ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

Leave a Reply

ಹೊಸ ಪೋಸ್ಟ್‌