ದ್ರಾಕ್ಷಿ ನಾಡಿನಲ್ಲಿ ಪ್ರಕೃತಿ ವಿಸ್ಮಯ- ಸೂರ್ಯನ ಸುತ್ತ ವರ್ತುಲ- ಕಣ್ತುಂಬಿಕೊಂಡ ಸಂತಸಪಟ್ಟ ವಿದ್ಯಾರ್ಥಿಗಳು

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಇಂದು ಮಧ್ಯಾಹ್ನ ಆಗಸದಲ್ಲಿ ಕಾಣಿಸಿದ ಪ್ರಕೃತಿಯ ವಿಸ್ಮಯ ಎಲ್ಲರನ್ನು ಕೌತುಕಗೊಳಿಸಿದೆ.

ನಭೋ ಮಂಡಲದಲ್ಲಿ ಕಂಡು ಬಂದ ಈ ಖಗೋಳ ವಿಸ್ಮಯ ಜನರ ಅಚ್ಚರಿಗೆ ಕಾರಣವಾಗಿದೆ.  ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲು ಆಕಾರದ ಉಂಗುರ ಸೂರ್ಯನಿಗೆ ವರ್ತುಲ ಹಾಕಿದಂತಿತ್ತು. ಪ್ರಕಾಶಮಾನವಾದ ಈ ವಿಸ್ಮಯ ಕಂಡು ಜನ ಬೆರಗಾಗಿದ್ದಾರೆ.

ವಿಜಯಪುರ ಜಿಲ್ಲೆಯ ಘೊಣಸಗಿ‌ ತಾಂಡಾದಲ್ಲಿ ಶಾಲಾ ಮಕ್ಕಳು ಪ್ರಕೃತಿ ವಿಸ್ಮಯ ವೀಕ್ಷಿಸಿದರು.

ಘೊಣಸಗಿ ಲಂಬಾಣಿ ತಾಂಡಾ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪರಮೇಶ್ವರ ಗದ್ಯಾಳ ಮಕ್ಕಳಿಗೆ ಈ ಕೌತುಕ ತೋರಿಸಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷಿ ಮತ್ತು ಹವಾಮಾನ ತಜ್ಞ ಡಾ. ಎಚ್. ವೆಂಕಟೇಶ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಸೂರ್ಯನಿಂದ ಬರುವ ಪ್ರಕಾಶಮಾನ ಕಿರಣಗಳಿಂದ ಇದು ಉಂಟಾಗುತ್ತದೆ. ಭೂಮಂಡಲದಿಂದ ಎತ್ತರದಲ್ಲಿರುವ ತೆಳುವಾದ ಮೋಡಗಳಲ್ಲಿ ಸೂರ್ಯನ ಕಿರಣಗಳು ಬಿದ್ದಾಗ ಈ ವೃತ್ತ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಈ ತೆಳು ಮೋಡಗಳು (Cirrus Clouds) ಎಂದು ಕರೆಯಲಾಗುತ್ತದೆ. ವಾತಾವರಣದಲ್ಲಿ ತೆಳುವಾದ ಮೋಡ ಎತ್ತರದಲ್ಲಿರುತ್ತದೆ. ಸುಮಾರು 12 ರಿಂದ 15 ಕಿ. ಮೀ. ಎತ್ತರದಲ್ಲಿ ವಕ್ರೀಭವನ (ರಿಪ್ರ್ಯಾಕ್ಷನ್) ಉಂಟಾಗಿ‌ ಸೂರ್ಯನ ಸುತ್ತಲೂ ಈ ರೀತಿಯ ಉಂಗುರ ಕಾಣಿಸುತ್ತದೆ. ಕೆಲ ಸಮಯದ ನಂತರ ಇದು ಮಾಯವಾಗುತ್ತದೆ. ಇದರಿಂದ ಯಾವುದೇ ಸಮಸ್ಯೆಯಿಲ್ಲ. ಇದೊಂದು ನೈಸರ್ಗಿಕ ಪ್ರಕ್ರಿಯೆ.
ಇದನ್ನು ಇಂಗ್ಲೀಷ್ ನಲ್ಲಿ Halo(ಪ್ರಭಾವಲ) ಎಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ವಿಜಯಪುರದಲ್ಲಿ ಇಂಥ ಕೌತುಕ ಕಂಡು ಬಂದಿತ್ತು. ಸುಮಾರು ಎರಡು ವರ್ಷಗಳ ಹಿಂದೆ ನಿಡಗುಂದಿ ಪೊಲೀಸ್ ಠಾಣೆಯ ಬಳಿ‌ ಕಂಡು ಬಂದಿದ್ದ ಇಂಥ ದೃಷ್ಯವನ್ನು ಪೊಲೀಸರೊಬ್ಬರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು.

ಈ ಕುರಿತು ವಿಜ್ಞಾನಿಗಳು ಇನ್ನೂ ಹೆಚ್ಚಿನ ಅಧ್ಯುಯನ ನಡೆಸಬೇಕಿದೆ.

Leave a Reply

ಹೊಸ ಪೋಸ್ಟ್‌